ಕಲಬುರಗಿ : ಕರ್ತವ್ಯ ಲೋಪ ಹಾಗೂ ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರಿದ ಹಿನ್ನಲೆಯಲ್ಲಿ ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ ಎಮ್ ಎ ಜಬ್ಬಾರ್‌ರನ್ನ ಎತ್ತಂಗಡಿಗೊಸಿ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ಆದೇಶ ಹೊರಡಿಸಿದ್ದಾರೆ… ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಸಹ, ಸರ್ಕಾರದ ಆದೇಶಗಳನ್ನು ಮತ್ತು ಸೂಚನೆಗಳನ್ನು ಪಾಲಿಸದೇ ನಿರ್ಲಕ್ಷ್ಯ ವಹಿಸಿದ ಹಿನ್ನಲೆಯಲ್ಲಿ ಡಿಎಚ್‌ಓ ಡಾ. ಜಬ್ಬಾರ್’ರನ್ನ ತಕ್ಷಣವೇ ಜಾರಿಗೆ ಬರುವಂತೆ ಬದಲಾವಣೆಗೊಳಿಸಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಹುದ್ದೆಗೆ ವರ್ಗಾಯಿಸಿದ್ದಾರೆ.. ಅಲ್ಲದೇ ಜಬ್ಬಾರ್ ಸ್ಥಾನಕ್ಕೆ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ ರಾಜಶೇಖರ್ ಮಾಲಿ ಅವರನ್ನ ಪ್ರಭಾರಿಯನ್ನಾಗಿ ನಿಯೋಜಿಸಿ ಡಿಸಿ ಶರತ್ ಬಿ ಆದೇಶ ಹೊರಡಿಸಿದ್ದಾರೆ..
ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನ ಹಿನ್ನಲೆ, ಕಲಬುರಗಿ ಡಿಎಚ್‌ಓ ಡಾ. ಜಬ್ಬಾರ್ ಎತ್ತಂಗಡಿಗೊಳಿಸಿ ಡಿಸಿ ಆದೇಶ
RELATED ARTICLES