Sunday, September 14, 2025
HomeUncategorizedಭಾರಿ ಮಳೆ-ಮನೆಗಳಿಗೆ ನುಗ್ಗಿದ ನೀರು,ಹೊಲಗದ್ದೆಗಳು ಜಲಾವೃತ-ರೈತರು ಕಂಗಾಲು

ಭಾರಿ ಮಳೆ-ಮನೆಗಳಿಗೆ ನುಗ್ಗಿದ ನೀರು,ಹೊಲಗದ್ದೆಗಳು ಜಲಾವೃತ-ರೈತರು ಕಂಗಾಲು

ಬಾಗಲಕೋಟೆ : ರಾಜ್ಯದಲ್ಲಿ ಮಳೆ ಮುಂದುವರೆದಿರೋ ಬೆನ್ನಲ್ಲೆ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲೂ ಮಳೆ ಆರ್ಭಟ ಮುಂದುವರೆದಿದ್ದು,ಜಿಲ್ಲೆಯ ಹುನಗುಂದ, ಬಾದಾಮಿ ಸೇರಿದಂತೆ ಕೆಲವು ತಾಲೂಕುಗಳಲ್ಲಿ ತೀವ್ರ ಅವಾಂತರ ಸೃಷ್ಟಿಸಿದೆ. ಜಿಲ್ಲೆಯ ಹುನಗುಂದ ಪಟ್ಟಣದ ಹೂಗಾರ ಗಲ್ಲಿಯಲ್ಲಿ ಹಳ್ಳದ ನೀರು ಒಳಹೊಕ್ಕಿದ್ದು, ರಸ್ತೆಗಳೆಲ್ಲಾ ನದಿಯಂತಾಗಿವೆ. ಜನ್ರು ಹರಸಾಹಸ ಪಡುಂತಾಗಿದೆ.

ಇನ್ನು ಹುನಗುಂದ್ ತಾಲ್ಲೂಕಿನ ಅಮರಾವತಿ ಗ್ರಾಮದ ತಗ್ಗು ಪ್ರದೇಶದಲ್ಲಿರೋ ಮನೆಗಳಿಗೆ ನೀರು ನುಗ್ಗಿದ್ದು ಅಪಾರ ಹಾನಿವುಂಟು ಮಾಡಿದೆ.ಅಲ್ದೆ ಜನ ಜೀವನ ಅಸ್ಥವ್ಯಸ್ಥ ವಾಗಿದೆ. ಅಲ್ದೆ ಹಳ್ಳವೊಂದರಲ್ಲಿ ಸಿಕ್ಕ ಬೈಕ್ ರಕ್ಷಿಸಲು ಯುವಕರು ಪರದಾಡಿದ ಘಟನೆಯೂ ಸಹ ನಡೆಯಿತು. ಇನ್ನು ಹುನಗುಂದ ಪಟ್ಟಣದಿಂದ ಚಿತ್ತವಾಡಗಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಬಂದ್ ಆಗಿ ಸಂಚರಿಸಲು ಜನ್ರು ಪರದಾಡುಂತಾಯಿತು.ಹುನಗುಂದ ತಾಲೂಕಿನ ಕಂದಗಲ್ ಸೇರಿದಂತೆ ಕೆಲವು ಹಳ್ಳಿಗಳ ಭಾಗದಲ್ಲಿ ಹೊಲಗದ್ದೆಗಳಿಗೆ ನೀರು ಹೊಕ್ಕು ಬೆಳೆಗಳೆಲ್ಲಾ ಜಲಾವೃತವಾಗಿ ರೈತರು ಬೆಳೆ ಹಾನಿ ಅನುಭವಿಸುವಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments