Sunday, September 14, 2025
HomeUncategorizedಕಲಬುರಗಿಯಲ್ಲಿ ವೆಂಟಿಲೇಟರ್ ಸೌಲಭ್ಯ ಸಿಗದೇ ಅಂಗನವಾಡಿ ಕಾರ್ಯಕರ್ತೆ ಸಾವು..!

ಕಲಬುರಗಿಯಲ್ಲಿ ವೆಂಟಿಲೇಟರ್ ಸೌಲಭ್ಯ ಸಿಗದೇ ಅಂಗನವಾಡಿ ಕಾರ್ಯಕರ್ತೆ ಸಾವು..!

ಕಲಬುರಗಿ : ಸೂಕ್ತ ಸಮಯಕ್ಕೆ ವೆಂಟಿಲೇಟರ್ ಸಿಗದ ಪರಿಣಾಮ ಅಂಗನವಾಡಿ ಕಾರ್ಯಕರ್ತೆಯೊಬ್ಬಳು ನರಳಿ ನರಳಿ ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.. ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ 50 ವರ್ಷದ ಅಂಗನವಾಡಿ ಕಾರ್ಯಕರ್ತೆ ಅಕ್ಕನಾಗಮ್ಮ ಲೋ ಬಿಪಿ, ಕೆಮ್ಮು ಮತ್ತು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅದಕ್ಕಾಗಿ ಕಳೆದ ಎರಡು ಗಂಟೆಯಿಂದ ಬೆಳಗಿನ ಜಾವದವರೆಗೆ ವೆಂಟಿಲೇಟರ್‌ಗಾಗಿ ನಗರದ ಇಎಸ್‌ಐ ಆಸ್ಪತ್ರೆ, ಜಿಮ್ಸ್‌ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆಲ್ಲ ಅಲೆದಾಡಿದ್ದಾರೆ.. ದುರಂತವೆಂದ್ರೆ ಯಾವ ಆಸ್ಪತ್ರೆಗಳಲ್ಲು ವೆಂಟಿಲೇಟರ್ ಸೌಲಭ್ಯ ಸಿಗದಿರೋದ್ರಿಂದ, ಇಂದು ಬೆಳಗ್ಗೆ ಆರು ಗಂಟೆಗೆ ಕುಟುಂಬಸ್ಥರು ಆಂಬುಲೆನ್ಸ್‌‌ನಲ್ಲಿ ಹೈದ್ರಾಬಾದ್‌ಗೆ ಕರೆದ್ಯೊಯುತ್ತಿದ್ದರು.. ಆದರೆ ಅಷ್ಟೊತ್ತಿಗಾಗಲೇ ಅಕ್ಕನಾಗಮ್ಮರ ದೇಹಸ್ಥಿತಿ ಗಂಭೀರವಾಗಿ ಹೈದ್ರಾಬಾದ್ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ.. ಸದ್ಯ ಅಕ್ಕನಾಗಮ್ಮಳ ಸಾವಿಗೆ ಇಎಸ್‌ಐ ಮತ್ತು ಜಿಮ್ಸ್‌ ವೈದ್ಯರೇ ಕಾರಣ ಅಂತಾ ಹಲವು ಸಂಘಟನೆಗಳು ಮತ್ತು ಅಕ್ಕನಾಗಮ್ಮಳ ಕುಟುಂಬಸ್ಥರು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments