Monday, September 8, 2025
HomeUncategorizedಟಗರು ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ IAS ಅಧಿಕಾರಿ

ಟಗರು ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ IAS ಅಧಿಕಾರಿ

ಧಾರವಾಡ : ಕೆ.ಎ.ಎಸ್ ಹಾಗೂ ಐ.ಎ.ಎಸ್ ಅಧಿಕಾರಿಗಳೆಂದರೆ ಮುಖದ ಹಾವ-ಭಾವದಲ್ಲಿ ನಗು ಕಡಿಮೆ. ಗಂಭೀರ ಸ್ವಭಾವದವರಂತೆ. ಅಷ್ಟೇ ಅಲ್ಲದೇ ನೆರ ನಿಷ್ಠುರವಾಗಿ ಮಾತನಾಡಿ ಅಧಿಕಾರದ ದರ್ಪ ತೋರಿಸುತ್ತಾರೆ ಅನ್ನೋದು ಸಾರ್ವಜನಿಕ ಮಾತು.

ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ರಮದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಐಎಎಸ್ ಟಾಪರ್ ಗೋಪಾಲಕೃಷ್ಣ ಅವರು ಟಗರು ಹಾಡಿಗೆ ಸಖತ್ ಸ್ಟೆಪ್ ಹಾಕಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಐಎಎಸ್ ಅಧಿಕಾರಿಯಾಗಿರುವ ಗೋಪಾಲಕೃಷ್ಣ ಅವರು, ಯಾವ ನಟರಿಗಿಂತಲೂ ಕಡಿಮೆ ಇಲ್ಲ ಎನ್ನುವ ಹಾಗೆ ಸ್ಟೆಪ್ ಹಾಕಿದ್ದಾರೆ. ಆಯುಕ್ತರು ಈ ರೀತಿ ಸಖತ್ ಸ್ಟೆಪ್ ಹಾಕಿದ್ದನ್ನು ಕಂಡು ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ. ಈ ಟಗರು ಹಾಡಿಗೆ ಆಯುಕ್ತರು ಮಾಡಿರುವ ಡ್ಯಾನ್ಸ್ ಸಖತ್ ವೈರಲ್ ಆಗಿದೆ.

ಓರ್ವ ಅಧಿಕಾರಿ ತಾನು ಕೆಲಸ ಮಾಡುವ ಸ್ಥಳದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದರ ಜೊತೆಗೆ ನಾನೂ ನಿಮ್ಮೊಳಗೊಬ್ಬ ಎಂಬುದನ್ನ ಬಿಂಬಿಸುತ್ತ ಹೋದರೇ, ಅದು ಸರಕಾರಿ ಕೆಲಸದಲ್ಲಿ ಸಾಕಷ್ಟು ಬದಲಾವಣೆ ತರಲು ಸಾಧ್ಯ ಎಂದು ಹೇಳಲಾಗತ್ತೆ. ಅದಕ್ಕೊಂದು ತಾಜಾ ಉದಾಹರಣೆ ಗೋಪಾಲಕೃಷ್ಣ ಅವರು ಎಂದರೆ ಎರಡನೇ ಮಾತಿಲ್ಲ.

RELATED ARTICLES
- Advertisment -
Google search engine

Most Popular

Recent Comments