Wednesday, September 10, 2025
HomeUncategorizedರಾಕಿಭಾಯ್ ಆಪ್ತರ ಲಾಂಗ್ ಡ್ರೈವ್ ಸಖತ್ ಇಂಪ್ರೆಸ್ಸೀವ್

ರಾಕಿಭಾಯ್ ಆಪ್ತರ ಲಾಂಗ್ ಡ್ರೈವ್ ಸಖತ್ ಇಂಪ್ರೆಸ್ಸೀವ್

ಡೆಡ್ಲಿ ಡೈರೆಕ್ಟರ್ ರವಿ ಶ್ರೀವತ್ಸ ಗರಡಿಯಿಂದ ಬಂದ ಶ್ರೀರಾಜ್ ಅನ್ನೋ ಪ್ರತಿಭೆ ರಾಕಿಂಗ್ ಸ್ಟಾರ್ ಯಶ್ ಗೆಳೆಯರ ಜೊತೆಗೂಡಿ ಲಾಂಗ್ ಡ್ರೈವ್ ಹೊರಟಿದ್ದಾರೆ. ಅದಕ್ಕೆ ಕಂಚಿನ ಕಂಠದ ವಸಿಷ್ಠ ಸಿಂಹ, ಕಿಟ್ಟಿ ಸೇರಿದಂತೆ ಸಾಕಷ್ಟು ಮಂದಿ ಸಾಥ್ ಕೂಡ ನೀಡಿದ್ದಾರೆ.

ರಾಕಿಭಾಯ್ ಆಪ್ತರ ಲಾಂಗ್ ಡ್ರೈವ್ ಸಖತ್ ಇಂಪ್ರೆಸ್ಸೀವ್

ಡೆಡ್ಲಿ ಡೈರೆಕ್ಟರ್ ಶಿಷ್ಯನ ಆ್ಯಕ್ಷನ್ ಕಟ್​ಗೆ ವಸಿಷ್ಠ ಕಂಚಿನ ಕಂಠ..!

ಮಂಜುನಾಥ ಗೌಡರ ವಿಲನ್ ಖದರ್.. ಅರ್ಜುನ್ ಪವರ್

ಚೊಚ್ಚಲ ಚಿತ್ರದಿಂದಲೇ ಗಮನ ಸೆಳೆದ ಸಿನಿಮೋತ್ಸಾಹಿ ತಂಡ

ಇದು ರೀಸೆಂಟ್ ಆಗಿ ಲಾಂಚ್ ಆದ ಲಾಂಗ್ ಡ್ರೈವ್ ಅನ್ನೋ ಹೊಚ್ಚ ಹೊಸ ಚಿತ್ರದ ಟೀಸರ್ ಝಲಕ್. ಸ್ಟೋರಿಲೈನ್​ನಲ್ಲಿರೋ ಗತ್ತು, ಪಾತ್ರಗಳಲ್ಲಿರೋ ಗಮ್ಮತ್ತು, ಮೇಕಿಂಗ್ ತಾಕತ್ತು ನೋಡಿದ್ರೆ ಸ್ಯಾಂಡಲ್​ವುಡ್​​ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡೋ ಮನ್ಸೂಚನೆ ನೀಡಿದೆ ಚಿತ್ರತಂಡ. ಯೆಸ್.. ಟೀಸರ್ ಮೂಲಕವೇ ಬಹುದೊಡ್ಡ ಭರವಸೆ ಮೂಡಿಸಿದೆ ಈ ಸಿನಿಮೋತ್ಸಾಹಿ ತಂಡ.

ಅರ್ಜುನ್ ಯೋಗಿ ನಾಯಕನಟನಾಗಿ ಕಾಣಸಿಗಲಿರೋ ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಸಿನಿಮಾದ ಗ್ಲಾಮರ್ ಹೆಚ್ಚಿಸಿದ್ದಾರೆ. ಸುಪ್ರಿತಾ ಹಾಗೂ ತೇಜಸ್ವಿನಿ ಈ ಸಿನಿಮಾದಲ್ಲಿ ಗಮನ ಸೆಳೆಯೋ ಪಾತ್ರಗಳಲ್ಲಿ ನಟಿಸಿದ್ದು, ಈಗಾಗ್ಲೇ ಲಾಂಚ್ ಆಗಿರೋ ಎರಡು ಹಾಡುಗಳಲ್ಲಿ ಸಿನಿಮಾದ ಅಸಲಿಯತ್ತು ಗೊತ್ತಾಗ್ತಿದೆ.

ಡೆಡ್ಲಿ ಡೈರೆಕ್ಟರ್ ರವಿ ಶ್ರೀವತ್ಸ ಗರಡಿಯಲ್ಲಿ ಪಳಗಿರೋ ಶ್ರೀರಾಜ್ ಅನ್ನೋ ಯುವ ಪ್ರತಿಭೆ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದು, ಅವ್ರ ಸಿನಿಮಾ ಪ್ಯಾಷನ್ ಚಿತ್ರದ ಪ್ರತಿ ಫ್ರೇಮ್​​ನಲ್ಲೂ ಎದ್ದು ಕಾಣ್ತಿದೆ. ಇನ್ನು ಯಶ್ ಹಾಗೂ ಅವ್ರ ಕುಟುಂಬಕ್ಕೆ ತುಂಬಾ ಆಪ್ತರಾಗಿರೋ ಮುಂಜುನಾಥ ಗೌಡ ಈ ಸಿನಿಮಾದ ಮೂಲಕ ನಿರ್ಮಾಪಕರಾಗ್ತಿದ್ದಾರೆ, ಅಲ್ಲದೆ ಖಳನಾಯಕನಾಗಿ ಅಬ್ಬರಿಸಲಿದ್ದಾರೆ.

ಅಂದಹಾಗೆ ಈ ಸಿನಿಮಾಗೆ ಕಿಟ್ಟಿ ಕೌಶಿಕ್ ಸಿನಿಮಾಟೋಗ್ರಫಿ, ವಿಕಾಶ್ ವಸಿಷ್ಠ ಸಂಗೀತ, ಪವನ್ ಸಂಕಲನವಿದೆ. ಇನ್ನೂ ಟೀಸರ್​ಗೆ ಕಂಚಿನ ಕಂಠದ ವಸಿಷ್ಠ ಸಿಂಹ ವಾಯ್ಸ್​​ ಸಿಕ್ಕಿದ್ದು, ಟೀಸರ್​ನ ವೆಯ್ಟೇಜ್ ಹೆಚ್ಚಿಸಿದೆ. ಅಲ್ಲದೆ ಈ ತಂಡಕ್ಕೆ ಡೈರೆಕ್ಟರ್ ರವಿ ಶ್ರೀವತ್ಸ, ವಸಿಷ್ಠ ಸಿಂಹ, ಕರಿಸುಬ್ಬು ಹಾಗೂ ಪಾನಿಪುರಿ ಕಿಟ್ಟಿ ಬಂದು ಶುಭ ಹಾರೈಸಿದ್ದು ವಿಶೇಷ.

ಒಟ್ಟಾರೆ ಹೊಸ ಪ್ರತಿಭೆಗಳು ಹೊಸ ಸಿನಿಮಾಗಳಿಂದ ಭರವಸೆ ಮೂಡಿಸುತ್ತಿದ್ದು, ಕ್ವಾಲಿಟಿ ಸಿನಿಮಾಗಳ ಮೇಕಿಂಗ್ ಕಡೆ ಗಮನ ಹರಿಸುತ್ತಿರೋದು ಹೆಮ್ಮೆಯ ವಿಷಯ. ಇವರುಗಳ ಹಾನೆಸ್ಟ್ ಎಫರ್ಟ್​ಗೆ ಪ್ರೇಕ್ಷಕರು ಕೈಹಿಡಿಯಬೇಕಿದ್ದು, ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments