Wednesday, September 17, 2025
HomeUncategorizedಆಸ್ತಿ ತೆರಿಗೆ ವಸೂಲಿ ವಿಚಾರದಲ್ಲಿ ಬಿಬಿಎಂಪಿ ಕಳ್ಳಾಟ ಮಾಡುತ್ತಿದ್ಯಾ..?

ಆಸ್ತಿ ತೆರಿಗೆ ವಸೂಲಿ ವಿಚಾರದಲ್ಲಿ ಬಿಬಿಎಂಪಿ ಕಳ್ಳಾಟ ಮಾಡುತ್ತಿದ್ಯಾ..?

ಬೆಂಗಳೂರು: ಆಸ್ತಿ ತೆರಿಗೆ ವಸೂಲಿ ವಿಚಾರದಲ್ಲಿ ಬಿಬಿಎಂಪಿಯಿಂದ ತಾರತಮ್ಯ ಮಾಡುತ್ತಿದ್ದು, ಕೋಟಿ ಕೋಟಿ ಬಾಕಿ ಇದ್ರೂ ಮೃದು ಧೋರಣೆ ಮಾಡುತ್ತಿದೆ.

ಕೋಟಿ ಕೋಟಿ ಬಾಕಿ ಇದ್ರೂ ಮೃದು ಧೋರಣೆ ಯಾಕೆ..? ಆಸ್ತಿ ತೆರಿಗೆ ವಸೂಲಿ ವಿಚಾರದಲ್ಲಿ ಬಿಬಿಎಂಪಿಯಿಂದ ತಾರತಮ್ಯವಾಗುತ್ತಿದ್ದು, ಉಳ್ಳವರಿಗೊಂದು ನ್ಯಾಯ. ಜನ ಸಾಮಾನ್ಯರಿಗೊಂದು ನ್ಯಾಯನಾ..? ಅದೇ ಜನಸಾಮಾನ್ಯರು ಎರಡ್ಮೂರು ವರ್ಷ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ ಅಂದ್ರೆ ಆಸ್ತಿ ಜಪ್ತಿಯ ನೋಟೀಸ್​ ಜಾರಿಯಾಗುತ್ತೆ.

ಪ್ರತಿಷ್ಠಿತ ಮಂತ್ರಿಮಾಲ್​​ನಿಂದ ಕೋಟಿ ಕೋಟಿ ಆಸ್ತಿ ತೆರಿಗೆ ವಂಚನೆಯಾಗುತ್ತಿದ್ದು, 2019ರಿಂದ ಆಸ್ತಿ ತೆರಿಗೆ ಪಾವತಿಸಲು ಮಂತ್ರಿಮಾಲ್​​ ಮೀನಾಮೇಷ ಮಾಡುತ್ತಿದೆ. 37 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ, 2019ರಿಂದ 2022-23ರವರೆಗೆ 370232005 ರೂ. ಬಾಕಿ ಉಳಿಸಿಕೊಂಡಿದ್ದು, ಪ್ರತಿವರ್ಷ ನಿಗದಿತ ಸಮಯಕ್ಕೆ ಸರಿಯಾಗಿ ಆಸ್ತಿ ತೆರಿಗೆ ಪಾವತಿಸದೆ ವಂಚನೆ ಮಾಡಿದ್ದಾರೆ. ಅಸಲು, ಬಡ್ಡಿ ಸೇರಿ ಮಂತ್ರಿಮಾಲ್​​ ಪಾವತಿಸಬೇಕಿದೆ 370232005 ರೂಪಾಯಿಯಾಗಿದೆ.

ಇನ್ನು, ಈ ಹಿಂದೆ ಬಾಕಿ ತೆರಿಗೆ ಪಾವತಿಸಲು ಹಲವು ಬಾರಿ ಡೆಡ್​ಲೈನ್​ ನೀಡಿದ್ದ ಬಿಬಿಎಂಪಿ, ಮಂತ್ರಿಮಾಲ್​ಗೆ ಬೀಗ ಹಾಕಿ ವಸೂಲಿಗೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಇಷ್ಟಾದ್ರು ಆಸ್ತಿ ತೆರಿಗೆ ಪಾವತಿಸಲು ಮುಂದಾಗದ ಮಂತ್ರಿಮಾಲ್​​, ಡೆಡ್​ಲೈನ್​ಗಳೆಲ್ಲಾ ಮುಗಿದ್ರೂ ಶಿಸ್ತುಕ್ರಮಕ್ಕೆ ಮುಂದಾಗದ ಬಿಬಿಎಂಪಿ.

ಮಂತ್ರಿಮಾಲ್​ ಯಾವ್ಯಾವ ವರ್ಷದಲ್ಲಿ ಎಷ್ಟು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಗೊತ್ತಾ..?

2018-19 ರಲ್ಲಿ 67778276 ರೂ. ಬಾಕಿ
2019-20 ರಲ್ಲಿ 67778276 ರೂ. ಬಾಕಿ
2020-21ರಲ್ಲಿ 67778276 ರೂ. ಬಾಕಿ
2021-22ರಲ್ಲಿ 68871476 ರೂ. ಬಾಕಿ
2022-23 ರಲ್ಲಿ 68871476 ರೂ. ಬಾಕಿ
ಅಸಲು + ಬಡ್ಡಿ ಸೇರಿ – 37,02,32,005 ರೂ. ಬಾಕಿಯಾಗಿದೆ.

RELATED ARTICLES
- Advertisment -
Google search engine

Most Popular

Recent Comments