Thursday, September 11, 2025
HomeUncategorizedಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರಕ್ಕೆ ಇಷ್ಟೋದು ನಿರ್ಲಕ್ಷ್ಯ ಯಾಕೆ..?

ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರಕ್ಕೆ ಇಷ್ಟೋದು ನಿರ್ಲಕ್ಷ್ಯ ಯಾಕೆ..?

ಬೆಂಗಳೂರು: ರಾಜ್ಯದಲ್ಲಿ ಹೊಸ ಪಠ್ಯ ಪರಿಷ್ಕರಣೆ ವಿವಾದ ತಾರಕ್ಕಕ್ಕೇರುತ್ತಿದೆ. ಆದರೆ ರಾಜಧಾನಿ ಬೆಂಗಳೂರಿನ ಹೆಗ್ಗನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ್ದೇ ಸಮಸ್ಯೆಯಾಗಿ ಹೋಗಿದೆ.

ಹೆಗ್ಗನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ್ದೇ ಸಮಸ್ಯೆಯಾಗಿದ್ದು, ಸರ್ಕಾರಿ ಶಾಲೆಯ ಮಕ್ಕಳ ಜೀವಕ್ಕಿಲ್ವಾ ಬೆಲೆ..? ಶಾಲೆಗಳಲ್ಲಿ ಅವ್ಯವಸ್ಥೆ ಇದ್ರೂ ನಿದ್ದೆ ಮಾಡ್ತಿದ್ದಾರಾ ಶಿಕ್ಷಣ ಇಲಾಖೆ ಅಧಿಕಾರಿಗಳು..? ಶಿಕ್ಷಣ ಸಚಿವರೇ ಸರ್ಕಾರಿ ಶಾಲೆನತ್ತ ಸ್ವಲ್ಪ ನೋಡಿ ನಿಮ್ಮ ಸರ್ಕಾರಕ್ಕೆ ಬೇಡವಾಯ್ತಾ ಸರ್ಕಾರಿ ಶಾಲೆ..? ಮಳೆ ಬಂದರೆ ಇಲ್ಲಿನ ಪರಿಸ್ಧಿತಿಯನ್ನು ಆಲಿಸುವವರೇ ಇಲ್ಲ.

ಬಹುತೇಕ ಬಡ ,ಕೂಲಿ ಕಾರ್ಮಿಕ ,ಮಧ್ಯಮ ವರ್ಗಕ್ಕೆ ಸೇರಿದವರ ಪೋಷಕರ ಮಕ್ಕಳೇ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮಕ್ಕಳಿಗೆ ಏನಾದರೂ ಅನಾಹುತ ಆದ್ರೆ ಯಾರು ಹೊಣೆ..? ಆದರೆ ಈ ಈ ಶಾಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಇಲ್ಲ ,ಶೌಚಾಲಯ ಇಲ್ಲ. ಪ್ರಾಣ ಭೀತಿಯಲ್ಲಿ ನೂರಾರು ಮಕ್ಕಳಿದ್ದಾರೆ. ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರಕ್ಕೆ ಇಷ್ಟೋದು ನಿರ್ಲಕ್ಷ್ಯ ಯಾಕೆ..? ಶಾಲೆ ಕಟ್ಟಡ ಬೀಳುವ ಮುನ್ನ ಎಚ್ಚೆತ್ತುಕೊಳ್ಳುತ್ತಾ ಶಿಕ್ಷಣ ಇಲಾಖೆ..? ಎಂದು ಕಾದುನೋಡಬೇಕು.

RELATED ARTICLES
- Advertisment -
Google search engine

Most Popular

Recent Comments