Wednesday, September 3, 2025
HomeUncategorizedಬಳ್ಳಾರಿ ಲಾಕ್ ಡೌನ್​​ಗೆ ಶಾಸಕ ಭೀಮಾನಾಯ್ಕ್ ಒತ್ತಾಯ

ಬಳ್ಳಾರಿ ಲಾಕ್ ಡೌನ್​​ಗೆ ಶಾಸಕ ಭೀಮಾನಾಯ್ಕ್ ಒತ್ತಾಯ

ಬಳ್ಳಾರಿ : ಜಿಲ್ಲೆಯಲ್ಲಿ ಕೊರೊನಾ ಸೋಂಕು ವಿಪರೀತವಾಗಿ ಹರಡ್ತಿದೆ. ಈಗಾಗಲೇ 2200 ಕ್ಕೂ ಹೆಚ್ಚು ಸೋಂಕಿತರು ಜಿಲ್ಲೆಯಲ್ಲಿ ಪತ್ತೆ ಅಗಿದ್ದಾರೆ. ಜೊತೆಗೆ 54 ಜನರ ಸಾವು ಸಹ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಲಾಕ್ ಡೌನ್ ಜಾರಿಗೊಳಿಸಿವಂತೆ ಎಲ್ಲೆಡೆ ವ್ಯಾಪಕ ಕೂಗು ಕೇಳಿಬರ್ತಿದೆ

ಇದಕ್ಕೆ ಪೂರಕ ಎನ್ನುವಂತೆ ಇದೀಗ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಸಹ ಧ್ವನಿ ಎತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಅನಂದ್ ಸಿಂಗ್ ಅವರಿಗೆ ಪತ್ರ ಬರೆದಿರುವ ಹಗರಿಬೊಮ್ಮನಹಳ್ಳಿ ಹಾಲಿ ಶಾಸಕ ಭೀಮಾನಾಯ್ಕ್ ಬಳ್ಳಾರಿ ಜಿಲ್ಲೆಯನ್ನು ಲಾಕ್ ಡೌನ್ ಮಾಡುವಂತೆ ಒತ್ತಾಯಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ICMR ಅಗಸ್ಟ್ ತಿಂಗಳಲ್ಲಿ ಕೊರೊನಾ ಸೋಂಕು ಗಣನೀಯ ಪ್ರಮಾಣದಲ್ಲಿ ಪತ್ತೆ ಆಗುತ್ತೆ ಎಂದಿರುವ ಮಾಹಿತಿ ಉಲ್ಲೇಖಿಸಿರುವ ಶಾಸಕರು ಮುಂಜಾಗ್ರತಾ ಕ್ರಮವಾಗಿ ಲಾಕ್ ಡೌನ್ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ಮಾಡಿದಂತೆ ಕನಿಷ್ಟ ಹದಿನಾಲ್ಕು ಅಥವಾ ಇಪ್ಪತ್ತೊಂದು ದಿನಗಳ ಲಾಕ್ ಡೌನ್ ಮಾಡುವಂತೆ ಕೇಳಿಕೊಂಡಿದ್ದಾರೆ. ಕೊರೊನಾ ಹರಡುವಿಕೆ ತಡೆಗಟ್ಟಲು ಮತ್ತು ನಿರ್ವಹಣಾ ಕೆಲಸಗಳನ್ನು ಮಾಡಲು ಲಾಕ್ ಮಾಡುವುದೇ ಸೂಕ್ತ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಎನ್ ಭೀಮಾನಾಯ್ಕ್ ಒತ್ತಾಯಿಸಿದ್ದಾರೆ.

ಅರುಣ್ ನವಲಿ ಪವರ್ ಟಿವಿ ಬಳ್ಳಾರಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments