Wednesday, August 27, 2025
HomeUncategorizedನಿಮ್ಮ ಮನೆಗಳಿಗೆ ಯಶ್.. ಟೀಂ ಕೆಜಿಎಫ್ ಸರ್​ಪ್ರೈಸ್

ನಿಮ್ಮ ಮನೆಗಳಿಗೆ ಯಶ್.. ಟೀಂ ಕೆಜಿಎಫ್ ಸರ್​ಪ್ರೈಸ್

ಆಫರ್ ಕ್ಲೋಸಸ್ ಸೂನ್ ಅಂತಿದ್ದ ರಾಕಿಭಾಯ್ ಯಶ್, ಇದೀಗ ಸಿನಿರಸಿಕರಿಗೆ ಬಂಪರ್ ಆಫರ್ ನೀಡಿದ್ದಾರೆ. ನಿಮ್ಮ ಮನೆ ಹಾಗೂ ಮನಗಳಿಗೆ ನಾನು ಬರ್ತಿದ್ದೀನಿ ಅಂತ ಪ್ರಕಟಣೆ ಹೊರಡಿಸಿದ್ದಾರೆ.

  • ನಿಮ್ಮ ಮನೆಗಳಿಗೆ ಯಶ್.. ಟೀಂ ಕೆಜಿಎಫ್ ಸರ್​ಪ್ರೈಸ್
  • ಇನ್ನೂ ಕೆಜಿಎಫ್ ನೋಡದವ್ರಿಗೆ ರಾಕಿಭಾಯ್ ಆಫರ್

ಬ್ಯುಸಿನೆಸ್ ಮಾಡೋಣ್ವಾ ಅಂತ ಡೈಲಾಗ್ ಹೊಡೀತಾನೇ, ಸಿಕ್ಕಾಪಟ್ಟೆ ದೊಡ್ಡ ಬ್ಯುಸಿನೆಸ್ ಮಾಡಿದ ರಾಕಿಭಾಯ್, ಇಂಡಿಯನ್ ಸಿಇಓ ಆಗಿ ಕಮಾಲ್ ಮಾಡಿದ್ರು. ಅದು ಅಂತಿಂತಾ ಬ್ಯುಸಿನೆಸ್ ಅಲ್ಲ, ಬರೋಬ್ಬರಿ 1500 ಕೋಟಿ ದಾಖಲೆ ಕಲೆಕ್ಷನ್. ಒಂದ್ಕಡೆ ಪ್ರಶಾಂತ್ ನೀಲ್ ಮೇಕಿಂಗ್, ಮತ್ತೊಂದ್ಕಡೆ ಯಶ್ ಸ್ವ್ಯಾಗ್, ಮಗದೊಂದು ಕಡೆ ಸಂಜಯ್ ದತ್- ರವೀನಾ ಟಂಡನ್ ಖದರ್.

ಕೆಜಿಎಫ್ 2 ಮಾಡಿದ ಮೋಡಿ ಅಂಥದ್ದು. ಬಾಲಿವುಡ್ ಮಂದಿ ಅಷ್ಟೇ ಅಲ್ಲ, ಹಾಲಿವುಡ್ ಮೇಕರ್ಸ್​ ಕೂಡ ಒಂದು ಕ್ಷಣ ದಂಗಾಗಿ ಹೋದ್ರು. ಕಥೆಯಲ್ಲಿ ಧಮ್ಮು, ಕಲಾವಿದರ ನಟನೆಯಲ್ಲಿ ರಿಧಮ್ ಇದ್ರೆ ಆ ಸಿನಿಮಾ ಚರಿತ್ರೆಯ ಪುಟಗಳು ಸೇರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಮೊದಲೆಲ್ಲಾ ಬಾಹುಬಲಿ ಅಂತಿದ್ದವ್ರು, ಇದೀಗ ಕೆಜಿಎಫ್ ಅನ್ನುವಂತಾಗಿದೆ. ಇದು ನೀಲ್, ಯಶ್, ವಿಜಯ್ ಕಿರಗಂದೂರು ಅನ್ನೋ ಸಿನಿಸಂತರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ.

ಅಂದಹಾಗೆ ಕೆಜಿಎಫ್ ಚಾಪ್ಟರ್-2 ಅಬ್ಬರಕ್ಕೆ ಬಾಕ್ಸ್ ಆಫೀಸ್ ಅಕ್ಷರಶಃ ಬ್ಯಾಂಗ್ ಆಯ್ತು. ಸಿನಿಮಾ ರಿಲೀಸ್ ಆಗಿ 50ನೇ ದಿನದತ್ತ ಯಶಸ್ವಿ ಹೌಸ್​ಫುಲ್ ಪ್ರದರ್ಶನ ಕಾಣ್ತಿರಬೇಕಾದ್ರೇನೇ, ರೆಂಟ್ ಆಫರ್ ಮೇಲೆ ಒಟಿಟಿಗೆ ಬಂದು. ಆ ಮೂಲಕ ಕೂಡ ಒಂದಷ್ಟು ಮಂದಿ ಸಿನಿಮಾ ನೋಡಿದ್ರು. ಇದೀಗ ಡೈರೆಕ್ಟ್ ಒಟಿಟಿಗೆ ಲಗ್ಗೆ ಇಡ್ತಿದ್ದಾರೆ ಮಾನ್​ಸ್ಟರ್ ರಾಕಿಭಾಯ್. ಹೌದು.. ಜೂನ್ 3ರಂದು ಅಮೆಜಾನ್ ಪ್ರೈಮ್​ಗೆ ಬರ್ತಿದೆ ಎಲ್​ಡೊರಾಡೋ ರಕ್ತಸಿಕ್ತ ಕಥಾನಕ.

ಈ ಮೂಲಕ ಇನ್ನೂ ಯಾರೆಲ್ಲಾ ಸಿನಿಮಾ ನೋಡಿಲ್ವೋ ಅವ್ರೆಲ್ಲಾ ಮನೆ ಮಂದಿ ಎಲ್ಲಾ ಒಟ್ಟಿಗೆ ಕೂತು ಕೆಜಿಎಫ್ 2ನ ಕಣ್ತುಂಬಿಕೊಳ್ಳಬಹುದು. ಯಶ್ ಈ ಮುಖೇನ ಎಲ್ಲರ ಮನೆ, ಮನಗಳನ್ನ ಬೆಳಗಲು ಬರ್ತಿದ್ದಾರೆ. ಮೊಬೈಲ್​​ಗಳಲ್ಲೂ ರಾಕಿಭಾಯ್ ಖದರ್ ಹರಿದಾಡಲಿದ್ದು, ಕೆಜಿಎಫ್ 3 ಮೇಲಿನ ನಿರೀಕ್ಷೆಗಳು ಮತ್ತಷ್ಟು ಗರಿಗೆದರಲಿವೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments