Saturday, September 13, 2025
HomeUncategorizedತೀರ್ಥಯಾತ್ರೆ ಹೊರಟವರು ಸೇರಿದ್ದು ಮಸಣಕ್ಕೆ

ತೀರ್ಥಯಾತ್ರೆ ಹೊರಟವರು ಸೇರಿದ್ದು ಮಸಣಕ್ಕೆ

ಬಿಹಾರ: ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಬೀದರ್‌ ಹಾಗೂ ಕಲಬುರಗಿಯ ಒಟ್ಟು 7 ಮಂದಿ ದುರ್ಮರಣಕ್ಕೀಡಾಗಿ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಹೆರಾಯಿಚ್‌ನ ನೌನಿಹ್ ಮಂಡಿ ಬಳಿಯ ಥಾನಾ ಮೋತಿಪುರ ಜನಪದ ಬಳಿ ಘಟನೆ ನಡೆದಿದೆ.

52 ವರ್ಷದ ಜಗದಂಗಾ, 36 ವರ್ಷದ ಮನ್ಮಥ, 30 ವರ್ಷದ ಅನಿಲ್, 38 ವರ್ಷದ ಶಶಿಕಲಾ, 47 ವರ್ಷದ ಸರಸ್ವತಿ, ಸಂತೋಷ್, ಮೃತ ದುರ್ದೈವಿಗಳಾಗಿದ್ದಾರೆ. ಗಾಯಾಳುಗಳಿಗೆ ಬಹೆರಾಯಿಚ್‌ನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಇನ್ನು 25 ವರ್ಷದ ಶಿವಾನಿ, 35 ವರ್ಷದ ಸುಜಾತಾ, 16 ವರ್ಷದ ದೀಪಿಕಾ, 45 ವರ್ಷದ ವೇವಾವತಿ, 15 ವರ್ಷದ ಶೀತಲ್, 62 ವರ್ಷದ ಸಂಗಮ್ಮ ಹಾಗೂ 30 ವರ್ಷದ ಅನಿಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. 15 ವರ್ಷದ ಭೂಮಿಕಾ, 3 ವರ್ಷದ ವೈಷ್ಣವಿಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಘಟನೆಯಿಂದ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಮೃತದೇಹಗಳನ್ನು ಸಂಬಂಧಿಗಳಿಗೆ ತಲುಪಿಸುವ ಜತೆಗೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸಂಬಂಧಿಗಳ ಮನವಿಗೆ ಸ್ಪಂದಿಸಿದ ಸಿಎಂ ಬಸವರಾಜ ಬೊಮ್ಮಾಯಿ ಗಾಯಾಳುಗಳೊಂದಿಗೆ ಫೋನ್‌ನಲ್ಲಿ ಮಾತನಾಡಿ ಧೈರ್ಯ ತುಂಬಿದ್ದಾರೆ. ಏತನ್ಮಧ್ಯೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಜತೆಯೂ ಮಾತುಕತೆ ನಡೆಸಿ ಅಗತ್ಯ ಕ್ರಮಕ್ಕೆ ಮನವಿ ಮಾಡಿದ್ದು, ಯೋಗಿ ಕೂಡ ಸ್ಪಂದಿಸಿದ್ದಾಗಿ ಬೊಮ್ಮಾಯಿ ತಿಳಿಸಿದ್ದಾರೆ. ಒಟ್ಟಿನಲ್ಲಿ ದೇವರ ದರ್ಶನ ಪಡೆದು ಮನೆಗೆ ವಾಪಸಾಗುತ್ತಿದ್ದವರು ಮಸಣ ಸೇರಿದ್ದು ಮಾತ್ರ ದುರಂತ.

RELATED ARTICLES
- Advertisment -
Google search engine

Most Popular

Recent Comments