Wednesday, August 27, 2025
Google search engine
HomeUncategorizedಹಣದ ವಿಚಾರವಾಗಿ ಸ್ನೇಹಿತೆಯ ಕೊಲೆ

ಹಣದ ವಿಚಾರವಾಗಿ ಸ್ನೇಹಿತೆಯ ಕೊಲೆ

ರಾಮನಗರ: ರೋಡ್ ಹಂಪ್ ಬಳಿ ಅನಾಥ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ತಡರಾತ್ರಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದ ಮುತ್ತರಾಯನಗರದ ನಿವಾಸಿ ಶ್ವೇತಾ, ತನ್ನ ಸ್ನೇಹಿತೆ ದುರ್ಗಾ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಇಬ್ಬರು ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡುತ್ತಿದ್ದಳು. ಈ ಶ್ವೇತಾ ದುರ್ಗಾ ಮನೆಯಲ್ಲಿ ಹಣ ಹಾಗೂ ಒಡವೆಗಳನ್ನ ಕಳ್ಳತನ ಮಾಡಿದ್ಲು. ಈ ವಿಚಾರವಾಗಿ ಸೋಮವಾರ ಮನೆಯಲ್ಲಿ ಗಲಾಟೆ ಮಾಡಿ ದುರ್ಗಾ ಶ್ವೇತಾಗೆ ದೊಣ್ಣೆಯಿಂದ ಹೊಡೆದಿದ್ಲು. ಒಂದು ಕೊಠಡಿಯಲ್ಲಿ ಕೂಡಿ ಹಾಕಿದ್ಲು. ಅಂದು ಸಂಜೆ ಕೊಠಡಿ ಬಾಗಿಲು ತೆಗೆದು ನೋಡಲಾಗಿ ಶ್ವೇತಾ ಮೃತಪಟ್ಟಿದ್ದಾಳೆ. ತಕ್ಷಣ ದುರ್ಗಾ ತನ್ನ ಪತಿ ರಘು ಹಾಗೂ ಸಹೋದರ ನಾಗರಾಜ್‌ಗೆ ಮಾಹಿತಿ ನೀಡಿದ್ದು ರಘು ತನ್ನ ಸ್ನೇಹಿತರಾದ ಅಭಿ, ವಿನೋದ್ ಅವರನ್ನ ಮನೆಗೆ ಕರೆಸಿ ಮೃತ ದೇಹವನ್ನ ಶ್ರೀರಂಗಪಟ್ಟಣದ ಕಾವೇರಿ ನದಿಗೆ ಎಸೆಯುವ ಪ್ಲಾನ್ ಮಾಡಿದ್ದಾರೆ. ಅದ್ರಂತೆ ವಿನೋದ್ ಶ್ವೇತಾ ಶವವನ್ನ ಬೈಕ್ ನಲ್ಲಿ ಕೂರಿಸಿಕೊಂಡು ಹಿಂದೆ ನಾಗರಾಜ್ ಹಿಡಿದುಕೊಂಡು ಹೊರಟಿದ್ರು. ಇತ್ತ ದುರ್ಗಾ ಹಾಗೂ ರಘು ಒಂದು ಬೈಕ್ ನಲ್ಲಿ ಅಭಿ ಒಂದು ಬೈಕ್ ನಲ್ಲಿ ಹೊರಟಿದ್ರು. ಆದ್ರೆ ಶವ ಇದ್ದ ಬೈಕ್ ಅಪಘಾತವಾಗಿ ಬಿದ್ದು ಕೊಲೆ ರಹಸ್ಯ ಬಯಲಾಗಿದೆ.

ಒಟ್ಟಾರೆ ಹಣದ ವಿಚಾರಕ್ಕೆ ನಡೆದ ಸ್ನೇಹಿತೆಯರ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ಮಾಡಿದ ತಪ್ಪಿಗೆ ದುರ್ಗಾ ಸೇರಿ ಮೂವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಓರ್ವ ಪರಾರಿಯಾಗಿದ್ದಾನೆ.

RELATED ARTICLES
- Advertisment -
Google search engine

Most Popular

Recent Comments