Saturday, August 23, 2025
Google search engine
HomeUncategorizedರಾಜಕೀಯ ಅಂದ್ರೆ ಲಾಬಿ : ಶಾಸಕ ಅರವಿಂದ ಬೆಲ್ಲದ

ರಾಜಕೀಯ ಅಂದ್ರೆ ಲಾಬಿ : ಶಾಸಕ ಅರವಿಂದ ಬೆಲ್ಲದ

ಹುಬ್ಬಳ್ಳಿ :  ನನಗೂ ಕೂಡ ಸಚಿವನಾಗಬೇಕೆಂಬ ಆಸೆ ಇದೆ. ಕೇವಲ ನನಗಷ್ಟೇ ಅಲ್ಲ ಯಾವುದೇ ಒಬ್ಬ ಶಾಸಕನಾದವನಿಗೂ ಸಚಿವನಾಗಬೇಕಂಬ ಆಸೆ ಇರುತ್ತದೆ. ರಾಜಕೀಯ ಅಂದ್ರೆ ದೆಹಲಿ ಮಟ್ಟದಲ್ಲಿ ಲಾಭಿ ಇದ್ದೆ ಇರುತ್ತದೆ ಎಂದು ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ ಬೆಲ್ಲದ ಹೇಳಿದರು.

ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು ನಮ್ಮ ಹೈಕಮಾಂಡ‌ ಅವರದ್ದೇ ಲೆಕ್ಕಾಚಾರದ ಮೇಲೆ ಸಚಿವ ಸ್ಥಾನವನ್ನ ನೀಡುತ್ತಾರೆ. ಈಗಾಗಲೇ ಉತ್ತರ ಭಾರತದ ಎಲ್ಲಾ ಚುನಾವಣೆ ಮುಗಿದಿವೆ. ಹೈಕಮಾಂಡ‌ ಗಮನ ದಕ್ಷಿಣ ಭಾರತದ ಮೇಲೆ ಇದೆ, ಈಗ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ. ಮೂರು ಜನರನ್ನ ಡಿಸಿಎಮ್ ಸೃಷ್ಟಿ ವಿಚಾರ, ಇದು ಮಾಧ್ಯಮಗಳ ಸೃಷ್ಟಿ. ಹೈಕಮಾಂಡ‌ ಏನೂ ಮಾಡುತ್ತಾರೆ ಅವರಿಗೆ ಗೊತ್ತು. ಅವರನ್ನ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ. ಸಚಿವ ಸಂಪುಟದಲ್ಲಿ ಹಿರಿಯರು ಇರಬೇಕು, ಯುವಕರು ಇರಬೇಕು ಎಂದರು.

ಇನ್ನು ಯುವಕರಿಗೆ ಮತ್ತು ಹೊಸ ಮುಖಗಳಿದ್ರೆ ಚೆನ್ನಾಗಿರುತ್ತದೆ. ನನಗೂ ಕೂಡ ಪಾಸಿಟಿವ್ ಫಲಿತಾಂಶ ನಿರೀಕ್ಷೆಯಲ್ಲಿದ್ದೆನೆ.ಇದು ಎಲ್ಲವೂ ಹೈಕಮಾಂಡ‌ಗೆ ಬಿಟ್ಟ ವಿಚಾರ. ನಾನು ಸಚಿವ ಸ್ಥಾನಕ್ಕಾಗಿ ದೆಹಲಿ ಭೇಟಿ ನೀಡಿಲ್ಲ, ಅನ್ಯ ಕಾರ್ಯದ ನಿಮಿತ್ತವಾಗಿ ದೆಹಲಿಗೆ ಭೇಟಿ ನೀಡಿದ್ದೆ. ಎಲ್ಲರೂ ಸಚಿವ ಸ್ಥಾನಕ್ಕಾಗಿ ಲಾಭಿ ಮಾಡುವುದು ಸಹಜ, ನಾನೂ ಸಹ ಪ್ರಯತ್ನ ನಡೆಸಿದ್ದೆನೆ. ಸಚಿವ ಸಂಪುಟದಲ್ಲಿ ಕೇವಲ ಹಿರಿಯರು ಇದ್ದರೂ ನಡೆಯುವುದಿಲ್ಲ, ಯುವಕರು ಇದ್ದರು ನಡೆಯುವುದಿಲ್ಲ ಇಲ್ಲಿ ಕಾಂಬಿನೇಷ್‌ನ್ ಅತಿ ಅವಶ್ಯ. ನಾನೂ ಡಿಸಿಎಮ್ ಅಥವಾ ಸಚಿವ ಸ್ಥಾನ‌ ಕೊಟ್ಟರೆ ನಿಭಾಯಿಸುತ್ತೆನೆ, ಏನೂ ಇಲ್ಲದಿದ್ದರೂ ಶಾಸಕನಾಗಿ ನನ್ನ ಕ್ಷೇತ್ರದ ಕೆಲಸ ಮಾಡುತ್ತೇನೆಂದು ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯಿಸಿದರು.

RELATED ARTICLES
- Advertisment -
Google search engine

Most Popular

Recent Comments