Saturday, August 23, 2025
Google search engine
HomeUncategorizedಉ.ಕರ್ನಾಟಕದ ಲಿಂಗಾಯತ ನಾಯಕನಿಗೆ ಮಣೆ ಹಾಕಲಿದ್ಯಾ ಹೈಕಮಾಂಡ್?

ಉ.ಕರ್ನಾಟಕದ ಲಿಂಗಾಯತ ನಾಯಕನಿಗೆ ಮಣೆ ಹಾಕಲಿದ್ಯಾ ಹೈಕಮಾಂಡ್?

ಬೆಂಗಳೂರು : ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ. ಸಿಎಂ ಬಸವರಾಜ್ ಬೊಮ್ಮಾಯಿ ಬದಲಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ ಬಿಜೆಪಿ ಹೈಕಮಾಂಡ್ ಒಲವು ತೋರಿದೆ ಎಂದು ರಾಜಕೀಯ ವಲಯದಲ್ಲಿ ಉಹಾಪೋಹ ಸೃಷ್ಠಿಯಾಗಿದೆ.

ದೆಹಲಿಯಲ್ಲಿ ನಡೆಯುತ್ತಿರುವ ಅಚ್ಚರಿಯ ಬೆಳವಣಿಗೆಗಳು ಮತ್ತು ಕಳೆದ ವಾರ ಸ್ವತಃ ಪ್ರಧಾನಿ ಮೋದಿಯವರೇ ಶೆಟ್ಟರ್ ಅವರಿಗೆ ಸಮನ್ಸ್ ನೀಡಿದ್ದರು ಹಾಗೂ ದೆಹಲಿಗೆ ಶೆಟ್ಟರ್ ರಹಸ್ಯ ಭೇಟಿ ಸಹ ಕೊಟ್ಟಿದ್ದರು. ವರಿಷ್ಠರನ್ನು ಭೇಟಿಯಾದ ಬಳಿಕ ಶೆಟ್ಟರ್ ವಾರಣಾಸಿಗೆ ಭೇಟಿ ನೀಡಿ ಕಾಶಿ ವೀರಶೈವ ಲಿಂಗಾಯತ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.

ಭಾರತದ ಬಿಜೆಪಿ ರಾಜಕೀಯವನ್ನು ವರದಿ ಮಾಡುವ ವಿದೇಶಿ ಪತ್ರಕರ್ತರೊಬ್ಬರು ಕಳೆದ ವಾರಾಂತ್ಯದಲ್ಲಿ ಆರ್‌ಟಿ ನಗರದಲ್ಲಿರುವ ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ವಿಶೇಷ ಭೇಟಿ ನೀಡಿದ್ದರು. ಇದ್ದಕ್ಕಿದ್ದಂತೆ ಜಗದೀಶ್ ಶೆಟ್ಟರ್ ಅವರ ಬಗ್ಗೆ ಮಾಧ್ಯಮದ ಆಸಕ್ತಿಯನ್ನು ಮರುಕಳಿಸುವುದು ಬಿಜೆಪಿ ವಲಯದಲ್ಲಿ ಊಹಾಪೋಹಕ್ಕೆ ಕಾರಣವಾಗಿದೆ.

ಇನ್ನು ಬೊಮ್ಮಾಯಿಗೆ ಪರ್ಯಾಯವಾಗಿ ಆ ನಾಯಕರನ್ನ ಸಿಎಂ ಸ್ಥಾನಕ್ಕೆ ಪರಿಗಣಿಸಿತಾ ಬಿಜೆಪಿ ಹೈಕಮಾಂಡ್?ಚುನಾವಣೆಗೆ ಒಂದು‌ ವರ್ಷ ಉಳಿದಿದ್ದರೂ ಸಂಪುಟ ವಿಸ್ತರಣೆಗೆ ಇನ್ನೂ ಮುಂದಾಗುತ್ತಿಲ್ಲ? ಹೈಕಮಾಂಡ್ ತಲೆಯಲ್ಲಿ ಬೇರೆ ಐಡಿಯಾ ಓಡುತ್ತಿದೆಯಾ? ಅಥವಾ ಸಿಎಂ ಬೊಮ್ಮಾಯಿಯನ್ನ ಹೈಕಮಾಂಡ್ ನಾಯಕರು ಸತಾಯಿಸುತ್ತಿರುವುದಾದ್ರೂ ಏಕೆ? ಮುಖ್ಯಮಂತ್ರಿಯನ್ನ ಭೇಟಿ ಮಾಡಲೂ ಮೀನಾಮೇಷ ಎಣಿಸುತ್ತಿರುವ ಬಿಜೆಪಿ ವರಿಷ್ಠರು? ಸಿಎಂ ಬೊಮ್ಮಾಯಿ ಆಡಳಿತವು ದೆಹಲಿ ದೊರೆಗಳಿಗೆ ಸಮಾಧಾನ ತರಲಿಲ್ವಾ ?ಕರ್ನಾಟಕದ ವಿದ್ಯಮಾನಗಳ ಕುರಿತು ಬಿಜೆಪಿ ಹಿರಿಯ ನಾಯಕರಿಗಿದೆಯಾ ತೀವ್ರ ಅಸಮಾಧಾನ? ಹೀಗೆ ಹಲವಾರು ಪ್ರಶ್ನೆಗಳು ಜನಸಾಮಾನ್ಯರಲ್ಲಿ ಮೂಡುತ್ತಿದೆ.

ಅದುವಲ್ಲದೇ ಜಗದೀಶ್​ ಶೆಟ್ಟರ್ ನೇಮಕದ ಮೂಲಕ ಮುಂದಿನ ವರ್ಷದ ಚುನಾವಣೆಗೆ ಬಿಜೆಪಿ ಸರ್ಕಾರವು  ಸಜ್ಜಾಗುತ್ತಿದೆ ಮತ್ತು ಉತ್ತರ ಕರ್ನಾಟಕದ ಲಿಂಗಾಯತ ನಾಯಕನಿಗೆ ಹೈಕಮಾಂಡ್ ಮಣೆ ಹಾಕಲಿದೆ. ಇನ್ನು ಕೆಲವೇ ದಿನಗಳಲ್ಲಿ ಹೊರಬೀಳಲಿದೆ ಹೈಕಮಾಂಡ್ ಲೆಕ್ಕಾಚಾರವು ಇದರಿಂದ ಸರ್ಕಾರಕ್ಕೆ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಿ ಇಮೇಜ್ ಹೆಚ್ಚಿಸಿಕೊಳ್ಳಲು ಹೈಕಮಾಂಡ್ ಆದ್ಯತೆ ಇದೆ.

RELATED ARTICLES
- Advertisment -
Google search engine

Most Popular

Recent Comments