Sunday, August 24, 2025
Google search engine
HomeUncategorizedಇದು ಧಾರ್ಮಿಕ ಗುರುತಲ್ಲ ಅದು ನನ್ನ ನಂಬಿಕೆ-ಕಾಮತ್​

ಇದು ಧಾರ್ಮಿಕ ಗುರುತಲ್ಲ ಅದು ನನ್ನ ನಂಬಿಕೆ-ಕಾಮತ್​

ಹಿಂದೂ ಯುವತಿ ಮೂಗುತಿ ಧರಿಸುವ ವಿಚಾರವಾಗಿ ಮೂಗುತಿ ಧರಿಸಲು ಬಾಲಕಿ ಇಷ್ಟ ಪಟ್ಟಿದ್ದಳು.ಸುನಾಲಿ ಪುಲ್ಲ ಎಂಬ ಯುವತಿ ಪ್ರಕರಣ ಸಲ್ಲಿಸಿದರು. ಸಮವಸ್ತ್ರ ಶಾಲೆ ಧರಿಸೋದು ಮುಖ್ಯ, ಮೂಗುತಿ ಹಾಕೋ ಸ್ವಾತಂತ್ರ್ಯ ಮನೆಯಲ್ಲಿ ಅನ್ನೋ ವಾದವಾಗಿತ್ತು. ಶಿಕ್ಷಣ ಕಾಯ್ದೆ ಬಂದಿರುವುದು ಹಿಜಾಬ್ ನಿರ್ಬಂಧ ಹೇರಲು ಅಲ್ಲ.ನಾನು ಶಾಲೆಗೆ ಹೋಗುವಾದ ರುದ್ರಾಕ್ಷಿ ಹಾಕುತ್ತಿದ್ದೆ.ಇದು ಧಾರ್ಮಿಕ ಗುರುತಲ್ಲ,ಅದು ನನ್ನ ನಂಬಿಕೆ ಎಂದು ಕಾಮತ್​ ಹೇಳಿದರು.

ನಿನ್ನೆ ಹೈಕೋರ್ಟ್ ಮತ್ತೊಂದು ಪ್ರಶ್ನೆ ಕೇಳಿತ್ತು. ಬೇರೆ ಯಾವುದಾದರೂ ಇಸ್ಲಾಂ ದೇಶದ ಬಗ್ಗೆ ಪ್ರಶ್ನೆ ಕೇಳಿದ್ದರು. ಸೌತ್ ಆಫ್ರೀಕಾ ಹೈಕೋರ್ಟ್ ಆದೇಶ ಉಲ್ಲೇಖಿಸುತ್ತಿರುವ ಕಾಮತ್ ಸತಿ ಪದ್ದತಿ, ದೇವದಾಸಿ ಪದ್ದತಿ,ನರಬಿಲಿಯಂತಹ ಸಂಪ್ರದಾಯ ಪದ್ಧತಿಗಳ ಬಗ್ಗೆ ದೇವದತ್ ಕಾಮತ್ ಉಲ್ಲೇಖಿಸಿದರು.

25(A) (B) ರಲ್ಲಿ ಮೂಲಭೂತಗಳ ಬಗ್ಗೆ ಸಂಪೂರ್ಣವಾಗಿ ಹೇಳಿದೆ.ಸರ್ಕಾರದ ಆದೇಶ ಯಾವಾಗ ಪಾಲನೆ ಆಗಬೇಕು ಅಂದರೆ ಎಲ್ಲ ಹಕ್ಕು ರಕ್ಷಣೆ ಮಾಡುವಂತೆ ಇರಬೇಕು.ಯಾವುದೇ ಧಾರ್ಮಿಕ ಆಚರಣೆ ಸಮಾಜದಲ್ಲಿ ನೇರ ದುಷ್ಪರಿಣಾಮ ಸಮಾಜದ ಸ್ವಾಸ್ಥ್ಯ ಮತ್ತು ವಿಚಾರಗಳ ಮೇಲೆ ಹಸ್ತಕ್ಷೇಪ ಮಾಡಲು ರಾಜ್ಯಗಳಿಗೆ ಅವಕಾಶವಿದೆ.ಮುಗ್ದ ಧಾರ್ಮಿಕ ಆಚರಣೆಯಲ್ಲಿ ಮಧ್ಯ ಪ್ರವೇಶ ಸರಿಯಲ್ಲ ಎಂದು ಹೇಳಿದರು.

ಧಾರ್ಮಿಕ ಆಚರಣೆ ಉಲ್ಲಂಘನೆ ಮಾಡಿದರೆ ಸಮುದಾಯದಿಂದ ಹೊರಗಡೆ ಹಾಕಲಾಗ್ತಿತ್ತು. ಯಾವ ಹಂತಕ್ಕೆ ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡಬಹುದು ಅಂತ ಹೇಳಿದ್ದಾರೆ.ಧಾರ್ಮಿಕ ಆಚರಣೆ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು.ಈ ಬಗ್ಗೆ ಅನೇಕ ಅಂಶಗಳನ್ನು ಜಸ್ಟೀಸ್ ಸಿನ್ಹಾ ಜಡ್ಜ್ ಮೆಂಟ್ ಉಲ್ಲೇಖಿಸಿದ್ದಾರೆ.

 

RELATED ARTICLES
- Advertisment -
Google search engine

Most Popular

Recent Comments