Monday, August 25, 2025
Google search engine
HomeUncategorizedಪಿಎಂ ಮೋದಿ ಹೇಳಿದ್ರು ಮಾಸ್ಕ್ ಬಳಸಬೇಡಿ: ಉಮೇಶ್ ಕತ್ತಿ

ಪಿಎಂ ಮೋದಿ ಹೇಳಿದ್ರು ಮಾಸ್ಕ್ ಬಳಸಬೇಡಿ: ಉಮೇಶ್ ಕತ್ತಿ

ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ ಈಗಾಗಲೇ ಬೊಮ್ಮಾಯಿ ಅವರಿಂದ ಭರ್ತಿಯಾಗಿದೆ. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಸ್ಥಿತ್ವದಲ್ಲಿದ್ದು ಜನಪರ ಕಾರ್ಯಗಳನ್ನು ಮಾಡುತ್ತಿದೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಾಡುತ್ತೇವೆ ಎಂದು ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ ಕತ್ತಿ ಹೇಳಿದರು.

ನಿನ್ನೆ ಸಂಜೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಲಕ್ಷ್ಮೀ ಸಸ್ಯೋಧ್ಯಾನದ ಉದ್ಘಾಟನೆ ನೆರವೇರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಉಮೇಶ ಕತ್ತಿ ಅವರು ಯತ್ನಾಳ್ ಹೇಳಿಕೆ ಅವರ ವೈಯಕ್ತಿಕ ವಿಚಾರ ಇದೇ ವೇಳೆ ಪಡಿತರದಾರರಿಗೆ ಅಕ್ಕಿ ಬದಲಾಗಿ ಜೋಳ ಅಥವಾ ರಾಗಿಯನ್ನು ಬೇಡಿಕೆಗಳಿಗುಣವಾಗಿ ಶೀಘ್ರದಲ್ಲೇ ವಿತರಿಸುತ್ತೇವೆ ಎಂದು ಪಡಿತರದಾರರಿಗೆ ಸಿಹಿ ಸುದ್ದಿ ನೀಡಿದರು. ಅಲ್ಲದೆ ಅಥಣಿ ಜಿಲ್ಲೆಯ ಬಗ್ಗೆ ಈಗಾಗಲೇ ನಮ್ಮೆಲ್ಲರ ಆಶಯವೂ ಆಗಿದೆ ಬೆಳಗಾವಿಯಲ್ಲಿ ಚಿಕ್ಕೋಡಿ, ಅಥಣಿಗಳು ಜಿಲ್ಲೆಗಳಾಗಬೇಕೆಂಬುದು ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು.

ಮಾಸ್ಕ್ ಬಳಸದ ಕುರಿತು ಮಾಧ್ಯಮಗಳ ಪ್ರಶ್ನೆಗೆ ತಮ್ಮದೇ ಆದ ಧಾಟಿಯಲ್ಲಿ ಹೇಳಿದ ಸಚಿವ ಕತ್ತಿ ಪ್ರಧಾನಿ ಮಾಸ್ಕ್ ಬಳಸಬೇಡಿ ಅಂತ ಹೇಳಿದ್ದಾರೆ ಅದಕ್ಕೆ ನಾನು ಬಳಸಲ್ಲ ಎಂದು ಹೇಳುವ ಮೂಲಕ ಜವಾಬ್ದಾರಿ ಸ್ಥಾನದಲ್ಲಿರುವ ಕತ್ತಿ ಹೊಸ ವರಸೆ ಶುರುಮಾಡಿದ್ದಾರೆ.

ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವುದು ಅಥವಾ ಬಿಡುವುದು ಅವರವರ ವೈಯಕ್ತಿಕ ವಿಚಾರ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅದಕ್ಕಾಗಿ ನಾನು ಮಾಸ್ಕ್​ ಧರಿಸಿಲ್ಲ ಎಂದು ಆಹಾರ ಇಲಾಖೆ ಮತ್ತು ಅರಣ್ಯ ಇಲಾಖೆ ಸಚಿವರಾದ ಉಮೇಶ್​​​​ ಕತ್ತಿ ಹೇಳಿದರು.

ಕಳೆದ ಎರಡು ದಿನದ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋದಿ ಮಾಸ್ಕ್ ಧರಿಸುವುದು – ಬಿಡುವುದು ಅವರವರ ಭಾವಕ್ಕೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ಅದಕ್ಕೆ ನಾನು ಮಾಸ್ಕ್ ಧರಿಸುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments