Thursday, August 21, 2025
Google search engine
HomeUncategorizedಸಂಸ್ಕಾರಹೀನರಾಗಿ ವರ್ತಿಸೋ MLC ರವಿ ಕುಮಾರ್​ಗೆ ಮಂಗ ಅಂತ ಹೆಸರಿಡಬೇಕು; ಪ್ರದೀಪ್​ ಈಶ್ವರ್​

ಸಂಸ್ಕಾರಹೀನರಾಗಿ ವರ್ತಿಸೋ MLC ರವಿ ಕುಮಾರ್​ಗೆ ಮಂಗ ಅಂತ ಹೆಸರಿಡಬೇಕು; ಪ್ರದೀಪ್​ ಈಶ್ವರ್​

ಬೆಂಗಳೂರು : ಕಲ್ಬುರ್ಗಿ ಜಿಲ್ಲಾಧಿಕಾರಿಗೆ ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್​ ಅಪಮಾನ ಮಾಡಿರುವ ವಿಚಾರದ ಕುರಿತು ಮಾತನಾಡಿದ ಶಾಸಕ ಪ್ರದೀಪ್​ ಈಶ್ವರ್​ ‘ ರವಿಕುಮಾರ್​ ಅವರು ಒಬ್ಬ ಜಿಲ್ಲಾಧಿಕಾರಿಗೆ ಅವಮಾನ ಮಾಡಿರೋದು ಬೇಸರ ತರಿಸಿದೆ. ರವಿ ಕುಮಾರ್ ಅವರು ಸಂಸ್ಕಾರಹೀನರಾಗಿ ನಡೆಸುಕೊಳ್ಳಿತ್ತಾರೆ ಅಂತ ಅವರ ಮನೆಯವರಿಗೆ ತಿಳಿದಿದ್ದರೆ ಅವರಿಗೆ ಕೋತಿ ಅಂತ ಹೆಸರು ಇಡುತ್ತಿದ್ದರು ಎಂದು ಹೇಳಿದರು.

ಇದನ್ನೂ ಓದಿ:ಮಂಗಳೂರಲ್ಲಿ ಮಳೆ ಅವಾಂತರ; ಕಾಂಪೌಂಡ್​ ಕುಸಿದು ಬಾಲಕಿ ಸಾ*ವು, ಸ್ಥಳಕ್ಕೆ ತೆರಳಲು ಸಚಿವರಿಗೆ ಸಿಎಂ ಸೂಚನೆ

ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ‘ ನಾನು ರವಿಕುಮಾರ್​ಗೆ ಒಂದು ಪ್ರಶ್ನೆ ಕೇಳೋಕೆ ಇಷ್ಟಪಡ್ತಿನಿ. ಯುಪಿಎಸ್ ಪರೀಕ್ಷೆ ಪಾಸ್ ಮಾಡೋದು ಅಷ್ಟು ಸುಲಭ ಅಲ್ಲ. ಕಲ್ಬುರ್ಗಿ ಜಿಲ್ಲಾಧಿಕಾರಿ ಫೌಜೀಯಾ ಖಾನ್ ದಕ್ಷ ಅಧಿಕಾರಿ. UPSC ಪರೀಕ್ಷೆ ಬರೆದು 31ನೇ ರ್ಯಾಂಕ್ ಪಡೆದ ಅಧಿಕಾರಿ ಅವರು. ಅವರ ಬಗ್ಗೆ ಮಾತನಾಡಿರುವುದು ಬೇಸರ ತರಿಸುತ್ತದೆ. ಆದರೆ ಬೀದಿಯಲ್ಲಿ ನಿಂತು ಬಾಯಿ ಬಡಿದುಕೊಳ್ಳುವಷ್ಟು ಸುಲಭವಲ್ಲ UPSC ಕ್ರ್ಯಾಕ್​ ಮಾಡೋದು ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಶಾಸಕ ಪ್ರದೀಪ್​ ಈಶ್ವರ್ ” MLC ರವಿಕುಮಾರ್​ ಸಂಸ್ಕಾರವಂತರಾಗುತ್ತಾರೆ ಎಂದು ಅವರಿಗೆ ರವಿ ಅಂತ ಹೆಸರಿಟ್ಟಿದ್ದಾರೆ. ಒಂದು ವೇಳೆ ಈ ರೀತಿ ಸಂಸ್ಕಾರ ಹೀನರಾಗಿ ವರ್ತಿಸುತ್ತಾರೆ ಎಂದು ಗೊತ್ತಾಗಿದ್ದರೆ ಕೋತಿ ಅಂತ ಹೆಸರು ಇಡ್ತಿದ್ದರು. ಕೋತಿ ರೀತಿ ವರ್ತಿಸೋ ರವಿಕುಮಾರ್​ ಅವರನ್ನು ಅಧಿವೇಶನದ ಒಳಗೆ ಮಾರ್ಷನ್​ ಹೇಗೆ ಬಿಡ್ತಾರೆ ಎಂಬುದು ಯಕ್ಷಪ್ರಶ್ನೆ ಎಂದು ಹೇಳಿದರು. ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು; ಓರ್ವ ಸಾ*ವು, ಮೂವರ ರಕ್ಷಣೆ

ಬಿಜೆಪಿಯವರಿಗೆ ಮುಸ್ಲಿಂರನ್ನು ಬಯ್ಯೋದೆ ಕೆಲಸ..!

ಕೋಮು ಸೌರ್ಹಾದತೆಯ ಬಗ್ಗೆ ಮಾತನಾಡಿದ ಶಾಸಕ ಪ್ರದೀಪ್​ ಈಶ್ವರ್ ” ನಾವು ಹಿಂದು- ಮುಸ್ಲಿಂರು ಏಕತೆಯಲ್ಲಿ ಬೆಳೆದಿದ್ದೇವೆ. ಆದರೆ ಬಾಯ್ಬಡುಕ ಬಿಜೆಪಿಗರಿಗೆ ಮುಸ್ಲಿಂ ಧರ್ಮದವರನ್ನ ಬೈಯೋದೆ ಕೆಲಸ.
ಫೌಜೀಯಾ ತರಹದ ಹೆಣ್ಣು ಮಕ್ಕಳು ಯುಪಿಎಸ್‌ಸಿ ಕ್ರಾಕ್ ಮಾಡಿ ದೇಶ ಸೇವೆ ಮಾಡ್ತಿದ್ದಾರೆ. ಅಷ್ಟೇ ಯಾಕೆ,
1999 ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನದ ಮೇಲೆ ಉಡಾಯಿಸಿದ್ದ ಅಗ್ನಿ ಮಿಸೈಲ್​ ತಯಾರಿಸಿದ್ದು. ಅಬ್ದುಲ್​ ಕಲಾಂ. ಇದನ್ನೂ ಓದಿ:ಹಿಂದೂ ಮುಖಂಡರಿಗೆ ಜೈಷ್​​ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ; ತಲೆ ಕಡಿಯುವುದಾಗಿ ಬೆದರಿಕೆ

ಇವತ್ತು ಆರ್ಮಿಯಲ್ಲಿ ಬಳಸುತ್ತಿರೋ ಪೃಥ್ವಿ ಮಿಸೈಲ್​ ಡಿಸೈನ್ ಮಾಡಿದ್ದು ಕಲಾಂ. ಈಗಿರುವಾಗ ಎಲ್ಲಾ ಮುಸ್ಲಿಂರನ್ನು ಹಾಗೆ ನೋಡ್ತೀರಾ..? ಮುಸ್ಲಿಂರದ್ದು ನಮ್ಮ ದೇಶಕ್ಕೆ ಕೊಡುಗೆ ಇದೆ. ದಯವಿಟ್ಟು ಅವರಿಗೆ ಗೌರವಿಸೋದ ಕಲಿಯಿರಿ. ನಿಮ್ಮ ರಾಜಕೀಯ ತೆವಲಿಗೆ ಆ ರೀತಿ ಮಾತನಾಡೋದು ಬಿಡಿ. MLC ರವಿಕುಮಾರ್​ ಅವರಿಗೆ ನಾಚಿಕೆ ಮಾನ-ಮರ್ಯಾದೆ ಇದ್ದಿದ್ದರೆ ಫೌಜೀಯ ಮನೆಗೆ ಹೋಗಿ ಕ್ಷಮೆ ಕೇಳಬೇಕು. ಅವರು ಕ್ಷಮೆ ಕೇಳ್ತಾರೆ ಅಂತ ಅಂದ್ಕೊಂಡ್ಡಿದ್ದೀನಿ. ಇಲ್ಲವಾದರೆ ಚಿಂತಕರ‌ ಚಾವಡಿಯಲ್ಲಿ ಒಂದು ಕೋತಿ ಕೂತಿದೆ ಅಂದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments