Friday, August 22, 2025
Google search engine
HomeUncategorized'ನಮ್ಮನ್ನ ಹೂಳಬೇಡಿ, ಅಗ್ನಿ ಸ್ಪರ್ಶ ಮಾಡಿ'; ಮನಕಲಕುವಂತಿದೆ ದಂಪತಿ ಬರೆದಿದ್ದ ಡೆತ್​ನೋಟ್​..!

‘ನಮ್ಮನ್ನ ಹೂಳಬೇಡಿ, ಅಗ್ನಿ ಸ್ಪರ್ಶ ಮಾಡಿ’; ಮನಕಲಕುವಂತಿದೆ ದಂಪತಿ ಬರೆದಿದ್ದ ಡೆತ್​ನೋಟ್​..!

ಮೈಸೂರು: ಮಗಳು ಪ್ರೀತಿಸಿದವನ ಜೊತೆ ಮನೆಬಿಟ್ಟು ಹೋಗಿದ್ದಕ್ಕೆ ಹೆಚ್‌ಡಿ ಕೋಟೆಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದು. ಆತ್ಮಹತ್ಯೆಗೂ ಮುನ್ನ ದಂಪತಿಗಳು ತಮ್ಮ ಕಿರಿ ಮಗಳ ಕೈಲಿ ಬರೆಸಿರುವ ಡೆತ್​ನೋಟ್​ ಎಲ್ಲರ ಮನಕಲಕುವಂತಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ಯುವತಿ ತಂದೆ ಮಹದೇವಸ್ವಾಮಿ ತನ್ನ ಕಿರಿಯ ಮಗಳಾದ ಹರ್ಷಿತ ಕೈಲಿ ಡೆತ್​ನೋಟ್ ಬರೆಸಿದ್ದು. ಸುಮಾರು 4 ಪುಟಗಳ ಡೆತ್​ನೋಟ್​ ಬರೆಸಿದ್ದಾರೆ. ಈ ಡೆತ್​ನೋಟ್​ನಲ್ಲಿ ಮಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ತಂದೆ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಬರೆದಿದ್ದಾರೆ.

ಇದನ್ನೂ ಓದಿ :ತಿರಂಗ ಯಾತ್ರೆ ವೇಳೆ ಶಾಸಕ ಪ್ರಭು ಚೌಹಾಣ್​ ತೀವ್ರ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಡೆತ್​ನೋಟ್​ನಲ್ಲಿ ಏನಿದೆ..!

ಡೆತ್​ನೋಟ್​ನಲ್ಲಿ ಮಗಳು ಪ್ರೀತಿ ಮಾಡುತ್ತಿರುವ ಹುಡಗನ ನಡವಳಿಕೆ ಸರಿ ಇಲ್ಲ ಎಂದು ಬರೆದಿರುವ ತಂದೆ. ಮಗಳು ಪ್ರೀತಿಸುತ್ತಿರುವ ಭರತ್​ಗೆ ಈ ಹಿಂದೆ ಲವ್ ಬ್ರೇಕಪ್ ಆಗಿತ್ತು. ಈ ಬಗ್ಗೆ ನಮ್ಮ ಮಗಳಿಗೆ ಎಷ್ಟೇ ಹೇಳಿದ್ರೂ, ನಮ್ಮ ಮಾತು ಕೇಳದೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವುದಾಗಿ ತಿಳಿಸಿದ್ದಳು. ನನ್ನ ಮಗಳು ನಮಗೆಲ್ಲ ಮೋಸ ಮಾಡಿದಳು. ನಮ್ಮ ಪರಿಸ್ಥಿತಿ ಜಗತ್ತಿನಲ್ಲಿ ಯಾರಿಗೂ ಬರಬಾರದು.

ಇದನ್ನೂ ಓದಿ :ಅಂಬೇಡ್ಕರ್​ ಸತ್ತಾಗ 3 ಅಡಿ ಜಾಗ ಕೊಡಲಿಲ್ಲ, ಈಗ ಅಂಬೇಡ್ಕರ್​ ಹುಲಿಗಳು ಅಂತ ಹೇಳ್ತಾರೆ: ಆರ್.ಅಶೋಕ್​

ನಮ್ಮ ಮಗಳು ಓಡಿಹೋಗಿದ್ದಕ್ಕೆ ನಿದ್ದ ಬರದೆ ಒದ್ದಾಡಿ 4 ಗಂಟೆಗೆ ಈ ಪತ್ರ ಬರೆದಿದ್ದೇವೆ. ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಆಸ್ತಿಯ ಒಂದು ರೂಪಾಯಿಯೂ ಅವಳಿಗೆ ಸಿಗಬಾರದು. ಎಲ್ಲಾ ಆಸ್ತಿಯನ್ನ ಚಿಕ್ಕಪ್ಪನಿಗೆ ನೀಡಿ. ಮನೆ, ಸೈಟ್, ಮನೆಯಲ್ಲಿರುವ ಎರಡುವರೆ ಲಕ್ಷ ಹಣ ಯಾವುದು ಅವಳಿಗೆ ಸಿಗಬಾರದು ಎಂದು ಮೃತ ಮಹದೇವಸ್ವಾಮಿ ಸಾಯುವ ಮುನ್ನ ತನ್ನ ಮಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚಿಕ್ಕಪ್ಪನ ಹೆಂಡತಿ ಸೌಮ್ಯ ವಿರುದ್ದವೂ ಡೆತ್​ನೋಟ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂತ್ಯಕ್ರಿಯೆಗೂ ಬರದ ಕಟುಕ ಮಗಳು..!

ಇದನ್ನೂ ಓದಿ :ಮರದಡಿ ಮಲಗಿದ್ದ ವ್ಯಕ್ತಿ ಮೇಲೆ ಚರಂಡಿ ತ್ಯಾಜ ಸುರಿದ ಪುರಸಭೆ ನೌಕರರು: ಜೀವಂತ ಸಮಾಧಿಯಾದ ಯುವಕ

ಇನ್ನು ಓಡಿ ಹೋಗಿರುವ ಮಗಳು ಅರ್ಪಿತ ತನ್ನ ಪೋಷಕರ ಅಂತ್ಯಕ್ರಿಯೆಗೂ ಹಾಜರಾಗಿಲ್ಲ. ಊರಿನವರ ಭಯಕ್ಕೆ ಹೆದರಿ ಬರಲು ಹಿಂದೇಟು ಹಾಕಿದ್ದಾಳೆ ಎಂದು ಊಹಿಸಿದ್ದು. ಓಡಿ ಹೋದ ಮಗಳ‌ ವಿರುದ್ಧ ಗ್ರಾಮಸ್ಥರ ಹಿಡಿಶಾಪ ಹಾಕುತ್ತಿದ್ದಾರೆ. ಇಂತಹ ಪಾಪಿ ಮಗಳು ಯಾರಿಗೂ ಬೇಡ ಎಂದು ಕಿಡಿಕಾರಿದ್ದು. ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಿದ್ರೆ ಈ ರೀತಿ ಮಾಡೋದ..? ಎಂದು ಮೃತರನ್ನು ನೆನೆದು ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments