Friday, August 22, 2025
Google search engine
HomeUncategorizedಲವ್​ ಮಾಡಿ, ಮನೆ ಬಿಟ್ಟು ಹೋದ ಮಗಳು: ಮನನೊಂದು ಆತ್ಮಹತ್ಯೆಗೆ ಶರಣಾದ ತಂದೆ-ತಾಯಿ

ಲವ್​ ಮಾಡಿ, ಮನೆ ಬಿಟ್ಟು ಹೋದ ಮಗಳು: ಮನನೊಂದು ಆತ್ಮಹತ್ಯೆಗೆ ಶರಣಾದ ತಂದೆ-ತಾಯಿ

ಮೈಸೂರು : ಮಗಳು ಮನೆ ಬಿಟ್ಟು ಹೋಗಿದ್ದಕ್ಕೆ ಮನೆನೊಂದ ಕುಟುಂಬವೊಂದು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತರನ್ನು ಮಹದೇವಸ್ವಾಮಿ, ಪತ್ನಿ ಮಂಜುಳಾ, ಅವರಿಬ್ಬರ ಕಿರಿಯ ಮಗಳು ಹರ್ಷಿತಾ ಗುರುತಿಸಲಾಗಿದೆ.

ಮೈಸೂರಿನ, ಹೆಚ್​.ಡಿ ಕೋಟೆ ತಾಲ್ಲೂಕಿನ ಬೂದನೂರಿನಲ್ಲಿ ಘಟನೆ ನಡೆದಿದ್ದು. ಮಹದೇವಸ್ವಾಮಿ ಅವರ ಹಿರಿಯ ಮಗಳಾದ ಅರ್ಪಿತಾ ಯುವಕನೊಬ್ಬನ ಜೊತೆ ಪ್ರೀತಿಯಲ್ಲಿ ಬಿದ್ದದ್ದಳು. ಮನೆಯಲ್ಲಿ ಎಲ್ಲಿ ಮದುವೆಗೆ ಒಪ್ಪುವುದಿಲ್ಲವೋ ಎಂದು ಪ್ರೀತಿಸಿದ ಯುವಕನ ಮನೆ ಬಿಟ್ಟು ಓಡಿ ಹೋಗಿದ್ದಳು. ಅರ್ಪಿತಾ ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದು ಇಡೀ ಕುಟುಂಬ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ :ಮದುವೆಯಲ್ಲಿ ಡ್ಯಾನ್ಸ್​ ಮಾಡುತ್ತಿದ್ದಾಗಲೇ ಹೃದಯಘಾತ: ಕುಸಿದು ಬಿದ್ದು ಯುವಕ ಸಾ*ವು

ಮನೆ ಯಜಮಾನ ಮಹದೇವಸ್ವಾಮಿ, ಅವರ ಪತ್ನಿ ಮಂಜುಳಾ, ಅವರಿಬ್ಬರ ಕಿರಿಯ ಮಗಳು ಹರ್ಷಿತಾ ಮೂವರು ಕೆರೆಗೆ ಬಿದ್ದು ಸಾವನ್ನಪ್ಪಿದ್ದು. ಬೂದನೂರು ಕೆರೆಯ ಏರಿ ಮೇಲೆ ಅವರ ಬೈಕ್​ ಮತ್ತು ಮೂವರ ಚಪ್ಪಲಿಗಳು ಪತ್ತೆಯಾಗಿವೆ. ನಾಪತ್ತೆಯಾಗಿರುವ ಮೂವರಿಗಾಗಿ ಹುಡುಕಾಟ ಆರಂಭಿಸಿದ್ದು. ಹೆಚ್​.ಡಿ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ :ಟೆಸ್ಟ್​ ಸರಣಿಗೆ ಭಾರತ ತಂಡ ಪ್ರಕಟ: ಶುಭಮನ್​ ಗಿಲ್​ಗೆ ಸಾರಥ್ಯ, ಮೂವರು ಕನ್ನಡಿಗರಿಗೆ ಅವಕಾಶ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments