ದೆಹಲಿ: ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರವಾಗಿ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವಿಟ್ ಮಾಡಿ ಆಕ್ರೋಶ ಹೊರಹಾಕಿದ್ದು. ಹಿಂದೂಗಳು ತಮ್ಮ ತಾಯಿ ನಾಡಿನಲ್ಲಿ ಜೀವಿಸಬೇಕು ಅಂದರೆ ಕಾಂಗ್ರೆಸ್ ಸಾಯಬೇಕು ಎಂದು ಬರೆದುಕೊಂಡಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಜಟಾಪಟಿಯಲ್ಲಿ ಕೊನೆಗೂ ರಾಮನಗರಕ್ಕೆ ಮರು ನಾಮಕರಣವಾಗಿದೆ. ಇನ್ಮುಂದೆ ರಾಮನಗರ ಜಿಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿ ಗುರುತಿಸಿಕೊಳ್ಳಲಿದೆ. ಈ ನಿರ್ಧಾರಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ನಾಯಕರು ಟೀಕಿಸಿದ್ದು. ಡಿಕೆ ಶಿವಕುಮಾರ್ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡಲು ರಾಮನಗರದ ಹೆಸರು ಬದಲಾಯಿಸಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ:ಆನೆಗಳು ಕಣ್ಣೀರಿಟ್ಟುಕೊಂಡು ಹೋಗಿವೆ, ಅವುಗಳನ್ನ ವಾಪಾಸ್ ಕರೆಸಿಕೊಳ್ಳಬೇಕು: ವಾಟಾಳ್ ನಾಗರಾಜ್
ಆದರೆ ಇದರ ಮಧ್ಯೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ರಾಮನಗರ ಹೆಸರು ಬದಲಾವಣೆಗೆ ಹಿಂದುತ್ವದ ಲಿಂಕ್ ಕೊಟ್ಟಿದ್ದು. “ಭಗವಾನ್ ರಾಮನ ಹೆಸರನ್ನ ಕೈ ಬಿಟ್ಟು ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾಯಿಸಿದ್ದಾರೆ. ಇದರಿಂದಾಗಿ ಹಿಂದೂಗಳ ಅಸ್ತಿತ್ವಕ್ಕೆ ಅಪಾಯ ಇದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ :ಹಾವು ಕಚ್ಚಿದರು, ವಿಚಲಿತನಾಗದೆ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದ ಭೂಪ: ವೈದ್ಯರು ಶಾಕ್
ಹಿಂದೂಗಳು ಮತ್ತು ಅವರ ನಂಬಿಕೆಗಳ ಬಗ್ಗೆ ಕಾಂಗ್ರೆಸ್‌ನ ತೀವ್ರ ದ್ವೇಷವು ನಮ್ಮ ನಾಗರಿಕತೆಯ ಅಸ್ತಿತ್ವಕ್ಕೆ ಅಪಾಯವ ಉಂಟು ಮಾಡುತ್ತದೆ. ಹಿಂದೂಗಳು ತಮ್ಮ ಏಕೈಕ ತಾಯ್ನಾಡಿನಲ್ಲಿ ಉಳಿಯಬೇಕಾದರೆ ಕಾಂಗ್ರೆಸ್ ಸಾಯಬೇಕು. ಈ ಆಯ್ಕೆ ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ಬರೆದಿದ್ದಾರೆ.