ತುಮಕೂರು : ಕಾರ್ಖಾನೆಯ ಸಂಪು ಸ್ವಚ್ಛಗೊಳಿಸಲು ಹೋದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದ್ದು. ಮೃತ ದುರ್ದೈವಿಗಳನ್ನು 23 ವರ್ಷದ ಪ್ರತಾಪ್ ಮತ್ತು 32 ವರ್ಷದ ವೆಂಕಟೇಶ್ ಎಂದು ಗುರುತಿಸಲಾಗಿದೆ.
ತುಮಕೂರಿನ, ವಸಂತನರಾಸಪುರ ಕೈಗಾರಿಕಾ ಪ್ರದೇಶದಲ್ಲಿರುವ ‘ಲೋರಸ್ ಬಯೋ’ ಎಂಬ ಕಂಪನಿಯಲ್ಲಿ ಘಟನೆ ನಡೆದಿದ್ದು. ಕಾರ್ಖಾನೆಯಲ್ಲಿ ಕೆಮಿಕಲ್ ಸಂಗ್ರಹಿಸುವ ಸಂಪ್ ಸ್ವಚ್ಚಗೊಳಿಸಲು ಎಂದು ತರೂರು ಗ್ರಾಮದ ನಾಲ್ವರು ಕಾರ್ಮಿಕರು ಮುಂದಾಗಿದ್ದರು. ಮೊದಲು ಮಂಜಣ್ಣ ಎಂಬ ಕಾರ್ಮಿಕ ಸಂಪ್ಗೆ ಇಳಿದಿದ್ದು. ಒಳಗೆ ಇಳಿಯುತ್ತಿದ್ದಂತೆ ಅಸ್ವಸ್ಥಗೊಂಡಿದ್ದಾನೆ. ಇದನ್ನೂ ಓದಿ :ಆಕೆ ಕೊಲೆ ಮಾಡಿದ್ದಾಳಾ?’: ನಕಲಿ IAS ಅಧಿಕಾರಿ ಪೂಜಾ ಖೇಡ್ಕರ್ ಸುಪ್ರೀಂ ಜಾಮೀನು
ಈ ವೇಳೆ ಮಂಜನನ್ನು ರಕ್ಷಿಸಲು ಎಂದು ಪ್ರತಾಪ್ ( 23) ಮತ್ತು ವೆಂಕಟೇಶ್(32) ಸಂಪ್ಗೆ ಇಳಿದಿದ್ದಾರೆ. ಆದರೆ ಅವರಿಬ್ಬರು ಒಳಗೆ ಸಿಲುಕಿ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಉಳಿದ ಯುವರಾಜ್ ಮತ್ತು ಮಂಜಣ್ಣ ಎಂಬುವವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.