Saturday, August 23, 2025
Google search engine
HomeUncategorizedಪತಿಯ ಅಕ್ರಮ ಸಂಬಂಧ: ಡಿವೋರ್ಸ್ ಕೊಡುವಂತೆ ಗರ್ಭಿಣಿ ಪತ್ನಿಗೆ ಕಿರುಕುಳ

ಪತಿಯ ಅಕ್ರಮ ಸಂಬಂಧ: ಡಿವೋರ್ಸ್ ಕೊಡುವಂತೆ ಗರ್ಭಿಣಿ ಪತ್ನಿಗೆ ಕಿರುಕುಳ

ಮೈಸೂರು: ಮಾವನ ಮಗಳನ್ನ ಪ್ರೀತಿಸಿ ಮದಯವೆಯಾಗಿದ್ದ ಪತಿರಾಯನೊಬ್ಬ ಪರ ಸ್ತ್ರೀ ಮೋಹಕ್ಕೆ ಬಿದ್ದು ತನ್ನ ಗರ್ಭಿಣಿ ಪತ್ನಿಗೆ ವಿಚ್ಚೇದನ ನೀಡುವಂತೆ ಕಿರುಕುಳ ನೀಡಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು. 5 ತಿಂಗಳ ಗರ್ಭಿಣಿ ಇದೀಗ ತನ್ನ ಪತಿ ವಿರುದ್ದ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ. ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಹಿಳೆಯನ್ನ ಪವಿತ್ರಾ ಎಂದು ಗುರುತಿಸಲಾಗಿದೆ.

ಮೈಸೂರು ಜಿಲ್ಲೆಯ, ಹುಣಸೂರು ತಾಲೂಕಿನ, ರಾಂಪುರದ ಗ್ರಾಮದ ನಿವಾಸಿ ಪವಿತ್ರಾ ಅದೇ ಗ್ರಾಮದಲ್ಲಿ ವಾಸವಾಗಿದ್ದ ಸೋದರ ಮಾವನೊಂದಿಗೆ ಕೆಂಡಗಣ್ಣಸ್ವಾಮಿ ಜೊತೆಗೆ ಮದುವೆಯಾಗಿದ್ದಳು. ಕೋಲಾರದಲ್ಲಿ ಡಿಎಆರ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಈತ ನಿಶ್ಚಿತಾರ್ಥವಾದ ಮೂರು ವರ್ಷದ ನಂತರ ಪವಿತ್ರಾ ಜೊತೆ ಹಸೆಮಣೆ ಏರಿದ್ದಳು. ಮದುವೆಯಾಗಿ ಹೆಂಡತಿಯನ್ನು 5 ತಿಂಗಳ ಗರ್ಭಿಣಿ ಮಾಡಿದ್ದ ಈತ ನಂತರ ತನ್ನ ಅಸಲಿ ಬಣ್ಣ ತೋರಿಸಲು ಶುರು ಮಾಡಿದ್ದನು. ಇದನ್ನೂ ಓದಿ :SSLC ಪರೀಕ್ಷೆಯಲ್ಲಿ ಫೇಲ್: ಶಾಲೆ ಮುಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಬಾಲಕ ಆತ್ಮಹ*ತ್ಯೆ

ಯುವತಿ ಜೊತೆ ಪೇದೆಯ ಅಕ್ರಮ ಸಂಬಂಧ..!

ಮದುವೆಯಾದ 5 ತಿಂಗಳ ಬಳಿಕ ಪತ್ನಿ ಪವಿತ್ರಗೆ ಪತಿಗೆ ಉಡುಪಿ ಮೂಲದ ಯುವತಿ ಜೊತೆ ಅಫೇರ್ ಇರುವುರು ಗೊತ್ತಾಗಿದೆ. ಬಳಿಕ ಪತ್ನಿಗೆ ಮಾನಸಿಕ ಕಿರುಕುಳ ಕೊಡಲು ಮುಂದಾದ ಕೆಂಡಗಣ್ಣಸ್ವಾಮಿ, ಇದ್ದರೆ ಮೂವರು ಒಟ್ಟಿಗೆ ಇರೋಣಾ. ಇಲ್ಲವಾದರೆ ಮಗು ತೆಗೆಸಿ ಬೇರೆ ಮದುವೆಯಾಗು ಎಂದು ಪೀಡಿಸುತ್ತಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ:ಮಸೀದಿಗಳಲ್ಲಿ ಅಪರಿಚಿತ ವ್ಯಕ್ತಿಗಳ ಓಡಾಟ: ಪರಿಶೀಲಿಸುವಂತೆ ಕಮಿಷನರ್​ಗೆ ಬೆಲ್ಲದ್​ ಪತ್ರ

ಜೊತೆಗೆ ಇತ್ತೀಚೆಗೆ ಸಂಬಂಧಿಯೊಬ್ಬರ ತಿಥಿ ಕಾರ್ಯಕ್ಕೆ ಎಂದು ಪತ್ನಿಯನ್ನು ತವರು ಮನೆಗೆ ತಂದು ಬಿಟ್ಟಿದ್ದ ಪೇದೆ, ನಂತರ ತನ್ನ ವರಸೆಯನ್ನ ಬದಲಾಯಿಸಿದ್ದ. ಗ್ರಾಮಸ್ಥರಯ ರಾಜಿ ನಡೆಸಿದರು ಬಗ್ಗದ ಆಸಾಮಿ. “ನನಗೆ ಈಕೆ ಬೇಡ, ಮಗು ತೆಗೆಸಿ ನಾನು ಆಕೆಗೆ ಪರಿಹಾರ ಕೊಡುತ್ತೇನೆ ಎಂದಿದ್ದಾನಂತೆ. ಇದರಿಂದ ಬೇಸತ್ತಿರುವ ಸಂತ್ರಸ್ಥ ಮಹಿಳೆ ಮತ್ತು ಆಕೆಯ ಪೋಷಕರು ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪೇದೆ ಪತಿ ವಿರುದ್ದ ಗರ್ಭಪಾತಕ್ಕೆ ಒತ್ತಾಯ, ಮಾನಸಿಕ ಕಿರುಕುಳ, ವರದಕ್ಷಣೆ ಕಿರುಕುಳ ಸೇರಿದಂತೆ ವಿವಿದ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments