Saturday, August 23, 2025
Google search engine
HomeUncategorizedಜಿಟಿ-ಜಿಟಿ ಮಳೆಯಲ್ಲಿ ನವಜಾತ ಶಿಶುವನ್ನು ರಸ್ತೆಯಲ್ಲಿ ಬಿಟ್ಟು ಹೋದ ಪಾಪಿ ತಾಯಿ

ಜಿಟಿ-ಜಿಟಿ ಮಳೆಯಲ್ಲಿ ನವಜಾತ ಶಿಶುವನ್ನು ರಸ್ತೆಯಲ್ಲಿ ಬಿಟ್ಟು ಹೋದ ಪಾಪಿ ತಾಯಿ

ಹೊಸಕೋಟೆ : ತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು ಜಿಟಿ-ಜಿಟಿ ಮಳೆಯಲ್ಲಿ ಬಿಟ್ಟು ಹೋಗಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದ್ದು. ಮಗು ಅಳುವುದನ್ನು ಗಮನಿಸಿದ ಸ್ಥಳೀಯರು ಮಗುವನ್ನು ಮಹಿಳಾ ಮಕ್ಕಳ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಅನೇಕಲ್​ನ, ಹೊಸಪೇಟೆ ನಗರದ ಅಮಾನಿಕೆರೆ ಬಳಿ ಘಟನೆ ನಡೆದಿದ್ದು. ಪಾಪಿ ತಾಯಿಯೊಬ್ಬಳು ಮೂರು ದಿನದ ಹಿಂದೆ ಜನಿಸಿದ್ದ ಹಸುಗೂಸನ್ನು ಬ್ಯಾಗ್​ನಲ್ಲಿ ಮಲಗಿಸಿ, ಕೆರೆ ಏರಿ ಮೇಲೆ ಬಿಟ್ಟು ಹೋಗಿದ್ದಾಳೆ. ಜಿಟಿ-ಜಿಟಿ ಮಳೆಯಿಂದಾಗಿ ಮಗು ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ :ಸಿಂಗಾಪುರ-ಹಾಂಕಾಂಗ್​ನಲ್ಲಿ ಕೋವಿಡ್ ಹೆಚ್ಚಳ: ಭಾರತದಲ್ಲೂ 257 ಪ್ರಕರಣಗಳು ಪತ್ತೆ

ಘಟನಾ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಬ್ಯಾಗ್​ನಲ್ಲಿದ್ದ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದು ಆರೈಕೆ ಮಾಡಿದ್ದಾರೆ. ಹೊಸಕೋಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಮಗುವಿನ ತಾಯಿ ಯಾರೂ ಎಂಬುದು ಇನ್ನಷ್ಟೆ ತಿಳಿಯಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments