Saturday, August 23, 2025
Google search engine
HomeUncategorizedಹೃದಯ ವಿದ್ರಾವಕ ಘಟನೆ: ಕಾರಿ​ನಲ್ಲಿ ಆಟವಾಡುತ್ತಿದ್ದ ನಾಲ್ಕು ಮಕ್ಕಳು ಉಸಿರುಗಟ್ಟಿ ಸಾ*ವು

ಹೃದಯ ವಿದ್ರಾವಕ ಘಟನೆ: ಕಾರಿ​ನಲ್ಲಿ ಆಟವಾಡುತ್ತಿದ್ದ ನಾಲ್ಕು ಮಕ್ಕಳು ಉಸಿರುಗಟ್ಟಿ ಸಾ*ವು

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಭಾನುವಾರ ಲಾಕ್ ಮಾಡಲಾದ ಕಾರಿನೊಳಗೆ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ಹೃದಯ ವಿದ್ರಾವಕ ದುರಂತ ಸಂಭವಿಸಿದೆ.

ವಿಜಯನಗರ ಕಂಟೋನ್ಮೆಂಟ್ ವ್ಯಾಪ್ತಿಯ ದ್ವಾರಪುಡಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.  ಪೊಲೀಸರ ಪ್ರಕಾರ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಲ್ವರು ಮಕ್ಕಳು ನಿಲ್ಲಿಸಿದ್ದ ಕಾರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಕಾರಿನ ಬಾಗಿಲುಗಳು ಲಾಕ್​ ಆಗಿದ್ದರಿಂದ ಮಕ್ಕಳು ಒಳಗೆ ಸಿಲುಕಿಕೊಂಡಿದ್ದಾರೆ. ಬೆಳಿಗ್ಗೆಯಿಂದ ಮಕ್ಕಳು ಕಾಣದ ಕಾರಣ ಪೋಷಕರು ಹುಡುಕಾಟ ನಡೆಸಿದ ನಂತರ ಈ ಘಟನೆ ಬೆಳಕಿಗೆ ಬಂದಿದ್ದು. ಕಾರಿನಲ್ಲಿ ಮಕ್ಕಳ ಶವ ಪತ್ತೆಯಾಗಿದೆ. ಇದನ್ನೂ ಓದಿ:ಕೊತ್ತೂರ್​ಗೆ, ಸಂತೋಷ್​ ಲಾಡ್​ಗೆ ಜನ ಓಡಾಡಿಸ್ಕೊಂಡು ಹೊಡಿಬೇಕು: ರೇಣುಕಾಚಾರ್ಯ

ಭಾನುವಾರ (ಮೇ,18) ಬೆಳಿಗ್ಗೆ 8 ವರ್ಷದ ಉದಯ್, 8 ವರ್ಷದ ಚಾರುಮತಿ, 6 ವರ್ಷದ ಚರಿಷ್ಮಾ ಮತ್ತು 6 ವರ್ಷದ ಮನಸ್ವಿ ಆಟವಾಡಲು ಹೊರಗೆ ಹೋಗಿದ್ದರು. ಈ ವೇಳೆ ನಾಲ್ವರು ಅಲ್ಲೇ ನಿಲ್ಲಿಸಿದ್ದ ಕಾರಿನಲ್ಲಿ ಆಟವಾಡಲು ಒಳಗೆ ಹೋಗಿದ್ದಾರೆ. ಈ ವೇಳೆ ಕಾರಿನ ಬಾಗಿಲುಗಳು ಲಾಕ್ ಆಗಿದ್ದು ಮಕ್ಕಳು ಒಳಗೆ ಸಿಲುಕಿ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:ಕರ್ನಲ್​ ಖುರೇಷಿ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಚಿವನ ವಿರುದ್ದ SIT ರಚನೆಗೆ ಸುಪ್ರೀಂ ಸೂಚನೆ

ಕಳೆದ ನಾಲ್ಕು ತಿಂಗಳಲ್ಲಿ ಆಂದ್ರದಲ್ಲಿ ನಡೆದ ಎರಡನೇ ಘಟನೆ ಇದಾಗಿದ್ದು. ಏಪ್ರೀಲ್​ ತಿಂಗಳಲ್ಲಿ ಆಂದ್ರದ ರಂಗಾರೆಡ್ಡಿ ಜಿಲ್ಲೆಯಲ್ಲಿ ಕಾರಿನಲ್ಲಿ ಲಾಕ್​ ಆಗಿ ಇಬ್ಬರು ಬಾಲಕಿಯರು ಉಸಿರುಕಟ್ಟಿ ಸಾವನ್ನಪ್ಪಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments