Sunday, August 24, 2025
Google search engine
HomeUncategorizedಅನಾಥ ಮಗುವನ್ನು ಸಾಕಿ ಬೆಳೆಸಿದ್ದಕ್ಕೆ ಅದೇ ಮಗುವಿನ ಕೈಯಲ್ಲಿ ಕೊಲೆಯಾದ ತಾಯಿ

ಅನಾಥ ಮಗುವನ್ನು ಸಾಕಿ ಬೆಳೆಸಿದ್ದಕ್ಕೆ ಅದೇ ಮಗುವಿನ ಕೈಯಲ್ಲಿ ಕೊಲೆಯಾದ ತಾಯಿ

ಭುವನೇಶ್ವರ : ಯಾರಿಗೂ ಬೇಡವಾಗದೆ ಬೀದಿಯಲ್ಲಿ ಅನಾಥಾವಾಗಿ ಬಿದ್ದಿದ್ದ ಹೆಣ್ಣು ಮಗುವನ್ನು ದತ್ತು ಪಡೆದು ಸಾಕಿದ ತಪ್ಪಿಗೆ ಸಾಕು ಮಗುವಿನಿಂದಲೇ ಕೊಲೆಯಾಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ರಾಜಲಕ್ಷ್ಮೀ ಎಂಬ ಮಹಿಳೆ ಕೊಲೆಯಾಗಿದ್ದು. ಆಕೆ ಸಾಕಿದ 13 ವರ್ಷದ ಮಗಳೇ ತನ್ನ ಸಾಕು ತಾಯಿಯನ್ನ ಕೊಲೆ ಮಾಡಿದ್ದಾಳೆ.

ಒಡಿಶಾದ ಮಹಿಳೆ ರಾಜಲಕ್ಷ್ಮಿ ಕರ್ ಎಂಬುವವರಿಗೆ ಮಕ್ಕಳೆಂದರೆ ಜೀವ. ತಮಗೆ ಮಕ್ಕಳಾಗಲಿಲ್ಲವೆಂದು ಕೊರಗುತ್ತಿದ್ದ ಅವರಿಗೆ 13 ವರ್ಷದ ಹಿಂದೆ ರಸ್ತೆ ಬದಿಯಲ್ಲಿ 3 ದಿನದ ಹೆಣ್ಣುಮಗುವೊಂದು ಸಿಕ್ಕಿತ್ತು. ಕಾನೂನು ಪ್ರಕಾರವೇ ಆ ಮಗುವನ್ನು ದತ್ತು ಪಡೆದ ಅವರು ಆ ಅನಾಥ ಮಗುವಿಗೆ ತಾಯಿಯಾದರು. ಆ ಮಗುವಿಗೆ ಒಳ್ಳೆಯ ಶಿಕ್ಷಣವನ್ನೂ ಕೊಡಿಸುತ್ತಿದ್ದರು. ಬಾಲಕಿ ಈಗ 8ನೇ ತರಗತಿಯಲ್ಲಿ ಓದುತ್ತಿದ್ದಳು. ಆದರೆ ಮನೆಯಲ್ಲಿ ಎಷ್ಟೇ ಸಂಸ್ಕಾರ ಹೇಳಿಕೊಟ್ಟರು ಕೂಡ ಬಾಲಕಿ ಶಾಲೆಗೆ ಬಂಕ್​ ಮಾಡುವುದು, ಕ್ಲಾಸ್​ಗೆ ಹೋಗದೆ ಹುಡುಗರೊಂದಿಗೆ ತಿರುಗಾಡುತ್ತಿದ್ದಳು. ಇದನ್ನೂ ಓದಿ:ವರದಕ್ಷಿಣೆ ಕಿರುಕುಳ ಆರೋಪ: ಪತ್ನಿಯ ಕೊ*ಲೆ ಮಾಡಿ, ದೇಹವನ್ನು ತುಂಡು ಮಾಡಿ ಕಾಲುವೆಗೆ ಎಸೆದ ಪಾಪಿ ಪತಿ

ಮಗಳ ವರ್ತನೆಯನ್ನು ಕಂಡ ರಾಜಲಕ್ಷ್ಮೀ ಮಗಳನ್ನು ಕರೆದು ಈ ರೀತಿ ಕೆಟ್ಟ ಕೆಲಸ ಮಾಡಬೇಡ ಎಂದು ಮಗಳಿಗೆ ಬುದ್ದಿ ಹೇಳಿದ್ದಳು. ಆದರೆ ಅಮ್ಮನ ಬುದ್ದಿವಾದದಿಂದ ಕೋಪಗೊಂಡ 13 ವರ್ಷದ ಬಾಲಕಿ “ನನಗೆ ಬುದ್ದಿ ಹೇಳಲು ನೀನ್ಯಾರು ಎಂದು ತಾಯಿಯ ಬಳಿಯೇ ಗಲಾಟೆ ಮಾಡಿದ್ದಳು. ಇಷ್ಟಕ್ಕೇ ಸುಮ್ಮನಾಗದ ಬಾಲಕಿ ಶಾಲೆಯಲ್ಲಿ ತನ್ನ ಬಾಯ್​ಫ್ರೆಂಡ್​ಗೆ ಈ ವಿಶಯ ಹೇಳಿ ತನ್ನ ತಾಯಿಯನ್ನೇ ಕೊಲ್ಲಲು ಪ್ಲಾನ್​ ರೂಪಿಸಿದ್ದಳು.

ತನ್ನ ಕೊಲೆ ಸಂಚಿನ ಪ್ರಕಾರ ಕಳೆದ ಏಪ್ರೀಲ್​ 29ರಂದು ಒಡಿಶಾದ ಗಜಪತಿ ಜಿಲ್ಲೆಯ ಪರಲಖೆಮುಂಡಿ ಪಟ್ಟಣದಲ್ಲಿರುವ ಬಾಡಿಗೆ ಮನೆಯಲ್ಲಿ ಆ ಮಹಿಳೆಯನ್ನು ಕೊಲ್ಲಲು ಆ ಹುಡುಗಿ ತನ್ನ ಇಬ್ಬರು ಪುರುಷ ಸ್ನೇಹಿತರೊಂದಿಗೆ ಸಂಚು ರೂಪಿಸಿದ್ದಳು. ಆ ಬಾಲಕಿ ರಾಜಲಕ್ಷ್ಮಿಗೆ ನಿದ್ರೆ ಮಾತ್ರೆಗಳನ್ನು ನೀಡಿ ನಂತರ ದಿಂಬುಗಳಿಂದ ಉಸಿರುಗಟ್ಟಿಸಿ ಕೊಂದಿದ್ದಾಳೆ ಎಂದು ತಿಳಿದುಬಂದಿದೆ. ಇದನ್ನೂ ಓದಿ:ಅನೈತಿಕ ಸಂಬಂಧ: ಹಣಕ್ಕಾಗಿ ಬ್ಲಾಕ್​ಮೇಲ್​ ಮಾಡಿದ ಮಹಿಳೆಯ ಕೊ*ಲೆ

ಸಹಜ ಸಾವು ಎಂದು ನಂಬಿಸಿದ್ದ ಬಾಲಕಿ..!

ಕೊಲೆಯಾದ ನಂತರ ರಾಜಲಕ್ಷ್ಮೀಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು, ಅಲ್ಲಿ ಅವಳು ಸತ್ತಿದ್ದಾಳೆಂದು ಘೋಷಿಸಲಾಯಿತು. ಮರುದಿನ, ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ಭುವನೇಶ್ವರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿಸಲಾಯಿತು. ರಾಜಲಕ್ಷ್ಮಿ ಅವರಿಗೆ ಈ ಮೊದಲೂ ಒಮ್ಮೆ ಹೃದಯಾಘಾತ ಉಂಟಾಗಿದ್ದರಿಂದ ಆ ಹುಡುಗಿ ತನ್ನ ತಾಯಿಗೆ ಹೃದಯಾಘಾತವಾಗಿದೆ ಎಂದು ಹೇಳಿದ್ದನ್ನು ಎಲ್ಲರೂ ನಂಬಿದ್ದರು. ಇದನ್ನೂ ಓದಿ :ರಾಷ್ಟ್ರದ ಹಿತಾಸಕ್ತಿ ವಿಚಾರದಲ್ಲಿ ಜವಬ್ದಾರಿ ನೀಡಿರುವುದು ಗೌರವದ ಸಂಗತಿ: ಶಶಿ ತರೂರ್​

ಅಷ್ಟೇ ಆಗಿದ್ದರೆ ಆ ಹುಡುಗಿ ಮಾಡಿದ ಕೊಲೆ ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ. ಅದೊಂದು ಸಹಜ ಸಾವೆಂದೇ ಎಲ್ಲರೂ ಭಾವಿಸುತ್ತಿದ್ದರು. ಆದರೆ, ರಾಜಲಕ್ಷ್ಮಿಯ ಸಹೋದರ ಸಿಬಾ ಪ್ರಸಾದ್ ಮಿಶ್ರಾ ಅವರಿಗೆ ಭುವನೇಶ್ವರದಲ್ಲಿ ಬಿಟ್ಟು ಹೋಗಿದ್ದ ಆ ಹುಡುಗಿಯ ಮೊಬೈಲ್ ಫೋನ್ ಸಿಕ್ಕಿತು. ಅದರಲ್ಲಿ ಆಕೆ ಹುಡುಗರ ಜೊತೆ ಮಾಡಿದ್ದ ಮೆಸೇಜ್ ಇತ್ತು. ಅದನ್ನು ನೋಡಿದ ನಂತರ ಅಸಲಿ ವಿಷಯ ಬೆಳಕಿಗೆ ಬಂದಿತು. ವಾಟ್ಸಾಪ್ ಮೆಸೇಜ್​ನಲ್ಲಿ ಆ ಮೂವರೂ ಕೊಲೆಯ ಪ್ಲಾನ್ ಬಗ್ಗೆ ಚಾಟ್ ನಡೆಸಿದ್ದರು. ಆ ಚಾಟ್‌ಗಳಲ್ಲಿ ರಾಜಲಕ್ಷ್ಮಿಯನ್ನು ಕೊಂದು ಅವಳ ಚಿನ್ನಾಭರಣಗಳು ಮತ್ತು ಹಣವನ್ನು ಕಿತ್ತುಕೊಂಡ ಬಗ್ಗೆ ನಿರ್ದಿಷ್ಟ ಉಲ್ಲೇಖಗಳಿತ್ತು.

ನಂತರ, ಮಿಶ್ರಾ ಮೇ 14ರಂದು ಈ ಸಂಬಂಧ ಪೊಲೀಸ್ ದೂರು ದಾಖಲಿಸಿದರು. ಬಳಿಕ ಮೂವರು ಆರೋಪಿಗಳಾದ 13 ವರ್ಷದ ಹುಡುಗಿ, ದೇವಾಲಯದ ಅರ್ಚಕ ಗಣೇಶ್ ರಾತ್ (21) ಮತ್ತು ಅವನ ಸ್ನೇಹಿತ ದಿನೇಶ್ ಸಾಹು (20) ಅವರನ್ನು ಬಂಧಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments