ಬೆಂಗಳೂರು: ಸಿಗರೇಟ್ ವಿಚಾರಕ್ಕೆ ಕಿರಿಕ್ ತೆಗೆದು ಕಾರು ಗುದ್ದಿಸಿ ಸಾಫ್ಟ್‌ವೇರ್ ಉದ್ಯೋಗಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೇ.10ರ ಬೆಳಗಿನ ಜಾವ ಘಟನೆ ನಡೆದಿದ್ದು, ಮೃತ ಯುವಕನನ್ನು ಸಂಜಯ್ ಎಂದು ಗುರುತಿಸಲಾಗಿದೆ.
ಸಾಫ್ಟ್ವೇರ್ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದ ಸಂಜಯ್ ಮತ್ತು ಕಾರ್ತಿಕ್ ಮೇ.10ರ ಬೆಳಗಿನ ಜಾವ 4 ಗಂಟೆಗೆ ಟೀ ಕುಡಿಯಲು ಎಂದು ಕೋಣನಕುಂಟೆ ಕ್ರಾಸ್ ಬಳಿ ಇದ್ದ ತಳ್ಳುವ ಗಾಡಿ ಬಳಿ ಬಂದಿದ್ದರು. ಈ ವೇಳೆ ಬರ್ತ್ಡೇ ಪಾರ್ಟಿ ಮುಗಿಸಿ ಮನೆಗೆ ಪ್ರತೀಕ್ ಮತ್ತು ಆತನ ಹೆಂಡತಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಟೀ ಅಂಗಡಿ ಬಳಿ ಕಾರು ನಿಲ್ಲಿಸಿದ್ದ ಪ್ರತೀಕ್ ಟೀ ಕುಡಿಯುತ್ತಿದ್ದ ಸಂಜಯ್ ಮತ್ತು ಕಾರ್ತಿಕ್ಗೆ ಸಿಗರೇಟ್ ತಂದು ಕೊಡುವಂತೆ ಹೇಳಿದ್ದ. ಇದರಿಂದ ಕೋಪಗೊಂಡ ಸಂಜಯ್ ಮತ್ತು ಕಾರ್ತಿಕ್ ಕಾರಿನಲ್ಲಿದ್ದ ಪ್ರತೀಕ್ ನಡುವೆ ಗಲಾಟೆ ನಡೆದಿತ್ತು. ಇದನ್ನೂ ಓದಿ :ಕನ್ನಡಮ್ಮನಿಗೆ ಅಶ್ಲೀಲ ಭಾಷೆ ಬಳಸಿ ಅಪಮಾನ: ಹದ್ದು ಮೀರಿದ ಅನ್ಯಭಾಷಿಕರ ಪುಂಡಾಟ
ಗಲಾಟೆ ಜೋರಾಗಿ ಅಂಗಡಿಯವರು ಬಿಡಿಸಿ ಕಳುಹಿಸಿದ್ದರು. ಕೋಪಗೊಂಡ ಪ್ರತೀಕ್ ಕಾರಿನಲ್ಲಿ ಮುಂದೆ ಹೋಗಿ ರಸ್ತೆ ಪಕ್ಕದಲ್ಲೇ ನಿಲ್ಲಿಸಿಕೊಂಡಿದ್ದ. ಸಿಗರೇಟ್ ಸೇದಿ ಇಬ್ಬರೂ ಬೈಕ್‌ನಲ್ಲಿ ಮುಂದೆ ಬರುತ್ತಿದ್ದಂತೆ. ವೇಗವಾಗಿ ಬಂದು ಇಬ್ಬರು ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದ. ಡಿಕ್ಕಿಯ ರಭಸಕ್ಕೆ ನೆಲಕ್ಕೆ ಅಪ್ಪಳಿಸಿದ್ದ ಸಂಜಯ್ ಸ್ಥಳದಲ್ಲೇ ಪ್ರಜ್ಞಾ ಹೀನನಾಗಿದ್ದನು. ಸಂಜಯನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿತಾದರೂ ಎರಡು ದಿನಗಳ ಹಿಂದೆ ಚಿಕಿತ್ಸೆ ಫಲಿಸದೆ ಸಂಜಯ್ ಸಾವನ್ನಪ್ಪಿದ್ದನು. ಇದನ್ನೂ ಓದಿ :ತಿರುಪತಿ ತಿಮ್ಮಪ್ಪನಿಗೆ 3.63 ಕೋಟಿ ಮೌಲ್ಯದ 5 ಕೆಜಿ ಚಿನ್ನಾಭರಣ ನೀಡಿದ ಸಂಜೀವ್ ಗೋಯೆಂಕಾ
ಘಟನೆ ಸಂಬಂದ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯ ಪುರ ಪೊಲೀಸರು ಆರೋಪಿ ಪ್ರತೀಕ್ನನ್ನು ಬಂಧಿಸಿದ್ದು. ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಸಿಗರೇಟ್ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.