Monday, August 25, 2025
Google search engine
HomeUncategorizedಸ್ವಂತ ಹೆಂಡತಿಯನ್ನೇ ಕಿಡ್ನಾಪ್​ ಮಾಡಿದ ಗಂಡ; ಕಾರಣ ಕೇಳಿದರೆ ಶಾಕ್

ಸ್ವಂತ ಹೆಂಡತಿಯನ್ನೇ ಕಿಡ್ನಾಪ್​ ಮಾಡಿದ ಗಂಡ; ಕಾರಣ ಕೇಳಿದರೆ ಶಾಕ್

ಹಾಸನ: ತಂದೆ ಸಮ್ಮುಖದಲ್ಲೇ ಯುವಕನೊಬ್ಬ ಯುವತಿಯನ್ನ ಕಿಡ್ನಾಪ್​ ಮಾಡಿದ್ದ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ದೊರೆತಿದ್ದು. ಆ ಯುವಕ ಮತ್ತು ಯುವತಿಯರಿಬ್ಬರು ಕಳೆದ ಮೂರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದರು. ತಂದೆಯ ಒತ್ತಡದ ಮೇಲೆ ಯುವತಿ ಹುಡುಗನನ್ನು ತ್ಯಜಿಸಿದ್ದಳು ಎಂದು ತಿಳಿದು ಬಂದಿದೆ.

ನಿನ್ನೆ ಹಾಸನದಲ್ಲಿ ಯುವತಿಯೊಬ್ಬಳನ್ನು ಯಾರೋ ನಾಲ್ವರು ಕಾರಿನಲ್ಲಿ ಬಂದು ಹೊತ್ತೊಯ್ದಿದ್ದರು. ಆ ಯುವತಿಯ ತಂದೆ ಕಾರಿನಲ್ಲೇ ಕಿಟಕಿ ಹಿಡಿದು ನೇತಾಡಿದರು ಕಾರನ್ನು ನಿಲ್ಲಿಸದೆ ಆಗೆಯೇ ವಾಹನ ಚಲಾಯಿಸಿದ್ದರು. ಈ ವೇಳೆ ಕಾರಿನ್ನು ಹಿಡಿದು ನೇತಾಡುತ್ತಿದ್ದ ಯುವತಿಯ ತಂದೆ ಕೆಳಗೆ ಬಿದ್ದು ಗಾಯಗೊಂಡಿದ್ದರು. ಇದರ ಸಿಸಿಟಿವಿ ದೃಶ್ಯಗಳು ವೈರಲ್​ ಆಗಿದ್ದವು. ನೋಡಿದವರು ಇದನ್ನ ಕಿಡ್ನಾಪ್​ ಎಂದೆ ಭಾವಿಸಿದ್ದರು. ಆದರೆ ಇದಕ್ಕೆ ಈಗ ಟ್ವಿಸ್ಟ್​ ದೊರೆತಿದ್ದು. ಯುವತಿಯೆ ತನ್ನ ತಂದೆಯನ್ನ ನಡುರಸ್ತೆಯಲ್ಲಿ ಬಿಟ್ಟು ಯುವಕನೊಂದಿಗೆ ಓಡಿ ಹೋಗಿದ್ದಾಳೆ. ಇದನ್ನೂ ಓದಿ :ಸುಪ್ರೀಂ ಕೋರ್ಟ್‌ನ 52ನೇ ನೂತನ ಮುಖ್ಯ ನ್ಯಾಯಾಮೂರ್ತಿಯಾಗಿ ಬಿ ಆರ್‌ ಗಾವಾಯಿ ನೇಮಕ

ಹಾಸನದ ಮಲಸಾಗರದ ಗ್ರಾಮದ 19 ವರ್ಷದ ಡಿಯೀಲಾ ಫರ್ನಾಂಡಿಸ್​ ಮತ್ತು ಪ್ರಜ್ವಲ್​ ಇಬ್ಬರು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಮೂರು ತಿಂಗಳ ಹಿಂದಷ್ಟೆ ಇಬ್ಬರು ರಿಜಿಸ್ಟರ್​ ಮ್ಯಾರೇಜ್​ ಆಗಿದ್ದರು. ಆದರೆ ಆಕೆಯ ತಂದೆ ಮಗಳನ್ನು ಪೂಸಿ ಹೊಡೆದು ಕರೆದೊಯ್ದು ಆಕೆ ತನ್ನ ಗಂಡನ ಮನೆಗೆ ಹೋಗದಂತೆ ತಡೆದಿದ್ದರು.

ನಿನ್ನೆ(ಮೇ.13) ಯುವತಿ ಡಿಯೀಲಾ ಫರ್ನಾಂಡೀಸ್​ ತನ್ನ ತಂದೆ ಲ್ಯಾನ್ಸಿ ಫರ್ನಾಂಡೀಸ್​ ಜೊತೆ ಪೇಟೆಗೆ ಬಂದಿದ್ದಾಗ ಯುವಕ ಪ್ರಜ್ವಲ್​ ತನ್ನ ಪತ್ನಿಯನ್ನ ಕಾರಿನಲ್ಲಿ ಕರೆದೊಯ್ದಿದ್ದಾನೆ, ಈ ವೇಳೆ ಯುವತಿಯ ತಂದೆ ಕಾರಿನಲ್ಲಿ ಜೋತು ಬಿದ್ದಿದ್ದು. ಇದನ್ನು ಲೆಕ್ಕಿಸದೆ ಯುವಕ ಗಾಡಿ ಚಲಾಯಿಸಿದ್ದಾನೆ. ಇದರ ದೃಶ್ಯಗಳು ಅಲ್ಲಿದ್ದ ಸಿಸಿಟಿವಿಯಲ್ಲೂ ಸೆರೆಯಾಗಿದ್ದವು. ನೋಡಿದವರು ಇದನ್ನು ಕಿಡ್ನಾಪ್​ ಎಂದು ಭಾವಿಸುವಂತೆಯೇ ಇತ್ತು. ಇದನ್ನೂ ಓದಿ :ಆಸಿಡ್ ದಾಳಿಯಲ್ಲಿ ದೃಷ್ಟಿ ಕಳೆದುಕೊಂಡ ಬಾಲಕಿ 12ನೇ ತರಗತಿ ಪರೀಕ್ಷೆಯಲ್ಲಿ ಶೇ.95.6 ಅಂಕ

ಆದರೆ ಅದಾದ ಕೆಲವೇ ಗಂಟೆಗಳಲ್ಲಿ ಯುವಕ ಪ್ರಜ್ವಲ್ ಆ ಯುವತಿಯೊಂದಿಗೆ ಚನ್ನರಾಯಪಟ್ಟಣ ‌ಪೊಲೀಸ್ ಠಾಣೆಗೆ ಹಾಜರಾಗಿ ಅಚ್ಚರಿ ಮೂಡಿಸಿದ್ದ. ನಂತರ ಈ ಇಬ್ಬರು ಪ್ರಕರಣದ ಅಸಲಿಯತ್ತನ್ನ ಹೊರಹಾಕಿದ್ದಾರೆ. ಡಿಯೀಲಾ ಫರ್ನಾಂಡಿಸ್ ಮತ್ತು ಪ್ರಜ್ವಲ್ ಇಬ್ಬರೂ ಪ್ರೀತಿಸಿ ಕಳೆದ ಮೂರು ತಿಂಗಳ ಹಿಂದೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದ ವಿಚಾರವನ್ನ ಬಹಿರಂಗಗೊಳಿಸಿದ್ದಾರೆ. ಅಲ್ಲದೇ ನಾನು ಈಕೆಯನ್ನ ಕಿಡ್ನಾಪ್ ಮಾಡಿಕೊಂಡು ಬಂದಿಲ್ಲ ಇವಳೇ ಸ್ವ ಇಚ್ಛೆಯಿಂದ ನನ್ನ ಜೊತೆ ಬಂದಿದ್ದಾಳೆ. ಇದನ್ನೂ ಓದಿ :ರಾಜಕಾರಣಿಗಳ ಜೊತೆ ಡೇಟಿಂಗ್​ಗೆ​ ಹೋಗುವಂತೆ ಬಿಗ್​ಬಾಸ್​ ಸ್ಪರ್ಧಿ ನಮ್ರತಾಗೆ ಕಿರುಕುಳ

ನಾವು ಮದುವೆಯಾದ ನಂತರ ನಮ್ಮಿಬ್ಬರನ್ನು ಬೇರೆ ಮಾಡಲು ಅನಾರೋಗ್ಯದ ನೆಪ ಹೇಳಿ ಇವಳನ್ನ ಊರಿಗೆ ಕರೆದುಕೊಂಡು ಹೋಗಿದ್ದರು. ಆದರೆ ಈಕೆಗೆ ನನ್ನನ್ನು ಬಿಟ್ಟು ಇರೋದಕ್ಕೆ ಆಗೋದಿಲ್ಲ ಎಂದು, ನನ್ನ ತಂದೆ ಜೊತೆ ಹೊರಗೆ ಬರುತ್ತೇನೆ ನನ್ನನ್ನು ಕರೆದುಕೊಂಡು ಹೋಗು ಎಂದು ಹೇಳಿದಳು ಆದರಿಂದಲೇ ನಾನು ಆಕೆಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಬಂದೆ ಎಂದು ಡಿಯೀಲಾ ಮತ್ತು ಪ್ರಜ್ವಲ್ ಹೇಳಿದ್ದಾನೆ.

ಒಟ್ಟಾರೆ ಒಬ್ಬ ಯುವತಿಯನ್ನ ಯಾರೋ ಹೊತ್ತೊಯ್ದಿದ್ದಾರೆ ಎಂದು ಸಂಚಲನ ಮೂಡಿಸಿದ್ದ ಆ ಯುವತಿ ಪೋಷಕರ ಆರೋಪಕ್ಕೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಕಾನೂನು ಮೂಲಕವೇ ಉತ್ತರ ನೀಡಿದ್ದು ಪ್ರಕರಣ ಕಾನೂನಾತ್ಮಕವಾಗಿ ಸುಖಾಂತ್ಯ ಕಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments