Tuesday, August 26, 2025
Google search engine
HomeUncategorizedಕೊಟ್ಟ ಸಾಲ ವಾಪಸ್​ ಕೇಳದಕ್ಕೆ ಅಳಿಯನನ್ನೇ ಕೊ*ಲೆ ಮಾಡಿದ ಮಾವ

ಕೊಟ್ಟ ಸಾಲ ವಾಪಸ್​ ಕೇಳದಕ್ಕೆ ಅಳಿಯನನ್ನೇ ಕೊ*ಲೆ ಮಾಡಿದ ಮಾವ

ಯಾದಗಿರಿ: ಕೊಟ್ಟ ಸಾಲ ವಾಪಸ್ ಕೇಳಿದಕ್ಕೆ ಸೋದರ ಮಾವನೇ ಅಳಿಯನನ್ನು ಕೊಡಲಿಲ್ಲಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ಲಕ್ಷ್ಮಣ್​ ಚಿಗರಿಹಾಳ ಎಂದು ಗುರುತಿಸಲಾಗಿದೆ.

ಯಾದಗಿರಿ ಜಿಲ್ಲೆಯ, ಹುಣಸಗಿ ತಾಲ್ಲೂಕಿನ, ಶಾಖಾಪುರ ಎಸ್ ಕೆ ಗ್ರಾಮದಲ್ಲಿ ಘಟನೆ ನಡೆದಿದ್ದು. ಅಳಿಯ ಲಕ್ಷ್ಮಣ್​ ಚಿಗರಿಹಾಳ ತನ್ನ ಸೋದರ ಮಾವ ಮಾನಪ್ಪನಿಗೆ ಹಣವನ್ನು ಸಾಲವಾಗಿ ಕೊಟ್ಟಿದ್ದನು. ಆದರೆ ಈ ಸಾಲವನ್ನ ವಾಪಾಸ್​ ಕೇಳಿದ್ದಕ್ಕೆ ಮಾನಪ್ಪ ತನ್ನ ಅಳಿಯ ಮುಖಕ್ಕೆ ಕೊಡಲಿಯಿಂದ ಹೊಡೆದಿದ್ದು. ಇದರಿಂದ ತೀವ್ರವಾಗಿ ಗಾಯಗೊಂಡ ಲಕ್ಷ್ಮಣ್​ ರಕ್ತದ ಮಡುವಿನಲ್ಲಿ ಒಡ್ಡಾಡಿ ಪ್ರಾಣ ಬಿಟ್ಟಿದ್ದಾನೆ. ಕೊಲೆ ಮಾಡಿದ ನಂತರ ಮಾನಪ್ಪ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ :ಕೆನಡಾ ವಿದೇಶಾಂಗ ಮಂತ್ರಿಯಾಗಿ ಭಾರತ ಮೂಲದ ಮಹಿಳೆ ಆಯ್ಕೆ: ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ವಚನ

ಘಟನೆ ಸಂಬಂಧ ಕೆಂಭಾವಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದು. ಸ್ಥಳಕ್ಕೆ ಎಸ್ಪಿ ಪೃಥ್ವಿಕ್ ಶಂಕರ್ ಹಾಗೂ ಸುರಪುರ ಡಿವೈಎಸ್ಪಿ ಜಾವೇದ್ ಇನ್ಮಾದಾರ್ ಭೇಟಿ ನೀಡಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಹಿಡಿದು ಜೈಲಿಗೆ ಅಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments