Tuesday, August 26, 2025
Google search engine
HomeUncategorizedಸುಪ್ರೀಂ ಕೋರ್ಟ್‌ನ 52ನೇ ನೂತನ ಮುಖ್ಯ ನ್ಯಾಯಾಮೂರ್ತಿಯಾಗಿ ಬಿ ಆರ್‌ ಗಾವಾಯಿ ನೇಮಕ

ಸುಪ್ರೀಂ ಕೋರ್ಟ್‌ನ 52ನೇ ನೂತನ ಮುಖ್ಯ ನ್ಯಾಯಾಮೂರ್ತಿಯಾಗಿ ಬಿ ಆರ್‌ ಗಾವಾಯಿ ನೇಮಕ

ಭಾರತದ 52ನೇ ನೂತನ ನ್ಯಾಯಾಧೀಶರಾಗಿ ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿ ಬಿಆರ್. ಗವಾಯಿ ಪ್ರಮಾಣ ವಚಸ ಸ್ವೀಕರಿಸಿದ್ದು. ರಾಷ್ಟ್ರಪತಿ ದ್ರೌಪದಿ ಮುರ್ಮು ಇವರಿಗೆ ಪ್ರಮಾಣ ವಚನ ಬೋಧಿಸಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಭಾರತದ 52 ನೇ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ಇಂದು ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು, ನ್ಯಾಯಮೂರ್ತಿ ಗವಾಯಿ ಅವರು ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಯನ್ನು ಅಲಂಕರಿಸಿದ ಮೊದಲ ಬೌದ್ಧ ಮತ್ತು ದಲಿತ ಸಮುದಾಯದಿಂದ ಎರಡನೇ ವ್ಯಕ್ತಿಯಾಗಿದ್ದಾರೆ. ಇದನ್ನೂ ಓದಿ :ಮುಂದಿನ RCB ಪಂದ್ಯಕ್ಕೆ ಬಿಳಿ ಜರ್ಸಿ ಧರಿಸಿ ಬರಲು ಅಭಿಮಾನಿಗಳಿಂದ ಅಭಿಯಾನ

ಬಿಆರ್​ ಗವಾಯಿ ಅವರ ಕಿರು ಪರಿಚಯ..!

ಮಹಾರಾಷ್ಟ್ರದ ಅಮರಾವತಿಯಲ್ಲಿ ನವೆಂಬರ್ 24, 1960 ರಂದು ಜನಿಸಿದ ನ್ಯಾಯಮೂರ್ತಿ ಗವಾಯಿ, ಅಂಬೇಡ್ಕರ್ ತತ್ವಗಳಲ್ಲಿ ಆಳವಾಗಿ ಬೇರೂರಿರುವ ಕುಟುಂಬದಿಂದ ಬಂದವರು. ಅವರ ತಂದೆ ಆರ್.ಎಸ್. ಗವಾಯಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಪ್ರಮುಖ ನಾಯಕರಾಗಿದ್ದರು ಮತ್ತು ಬಿಹಾರ, ಸಿಕ್ಕಿಂ ಮತ್ತು ಕೇರಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ :ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್​ ಮೇಲೆ ಲಾರಿ ಹತ್ತಿಸಿದ ಚಾಲಕ: ಕಾನ್ಸ್​ಟೇಬಲ್ ಸಾ*ವು

ಪ್ರಸ್ತುತ ಸಿಜೆಐ ಸಂಜೀವ್​ ಖನ್ನಾ ಅವರು ಸ್ಥಾನಕ್ಕೆ ಬಿ.ಆರ್​ ಗವಾಯಿ ಅವರು ಆಯ್ಕೆಯಾಗಿದ್ದು. ಅವರು ಮುಂದಿನ ನವೆಂಬರ್​ 23, 2025ರವರೆಗೆ ಸಿಜೆಐ ಆಗಿ ಕಾರ್ಯನಿರ್ವಹಿಸುತ್ತಾರೆ. ನಂತರ ನೂತನ ಮುಖ್ಯ ನ್ಯಾಯಾಧೀಶರನ್ನ ಆಯ್ಕೆ ಮಾಡಲಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments