Saturday, August 23, 2025
Google search engine
HomeUncategorizedಪಾಕ್ ಶೆಲ್​ ದಾಳಿಗೆ ಅವಳಿ ಮಕ್ಕಳ ಸಾ*ವು: ತಂದೆ-ತಾಯಿ ಆಸ್ಪತ್ರೆಗೆ ದಾಖಲು, ಕುಟುಂಬವೇ ಸರ್ವನಾಶ

ಪಾಕ್ ಶೆಲ್​ ದಾಳಿಗೆ ಅವಳಿ ಮಕ್ಕಳ ಸಾ*ವು: ತಂದೆ-ತಾಯಿ ಆಸ್ಪತ್ರೆಗೆ ದಾಖಲು, ಕುಟುಂಬವೇ ಸರ್ವನಾಶ

ಪೂಂಚ್ : ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಘರ್ಷಣೆಯಲ್ಲಿ ಪಾಕಿಸ್ತಾನ ನಡೆಸಿದ ಶೆಲ್​ ದಾಳಿಯಲ್ಲಿ ಇಬ್ಬರು ಅವಳಿ ಮಕ್ಕಳು ಸಾವನ್ನಪ್ಪಿದ್ದು. ಅವರ ತಂದೆ-ತಾಯಿ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪುಟ್ಟ ಕುಟುಂಬ ಕಳೆದ 2 ತಿಂಗಳ ಹಿಂದಷ್ಟೆ ಈ ಪ್ರದೇಶಕ್ಕೆ ಬಂದು ನೆಲೆಸಿದ್ದು. ಮಕ್ಕಳ ಶಿಕ್ಷಣಕ್ಕಾಗಿ ಈ ಕುಟುಂಬ ಪೂಂಚ್​ಗೆ ಬಂದಿತ್ತು.

ಆಪರೇಷನ್​ ಸಿಂಧೂರ್​ ಕಾರ್ಯಚರಣೆಯ ನಂತರ ಎರಡು ದೇಶದ ಗಡಿಗಳು ಉದ್ವಿಘ್ನಗೊಂಡವು, ಪಾಕಿಸ್ತಾನ ನಡೆಸಿದ ದಾಳಿಗೆ ಪ್ರತಿಯಾಗಿ ಭಾರತವೂ ಪಾಕಿಸ್ತಾನದ ಮೇಲೆ ದಾಳಿ ನಡೆಸಿತ್ತು. ಆದರೆ ನಾಗರಿಕರನ್ನು ಗುರಿಯಾಗಿಸಿ ಪಾಕಿಗಳು ನಡೆಸಿದ ಶೆಲ್​ ದಾಳಿಗೆ ಪುಟ್ಟ ಕುಟುಂಬವೊಂದ ಅಕ್ಷರಶಃ ನಾಶವಾಗಿದ್ದು. ಮೇ.7ರಂದು ಪಾಕಿಸ್ತಾನದ ನಡೆಸಿದ ಶೆಲ್ ದಾಳಿಯಲ್ಲಿ ಇಬ್ಬರು ಅವಳಿ ಮಕ್ಕಳು ಸಾವನ್ನಪ್ಪಿದ್ದರೆ, ಅವರ ತಂದೆ-ತಾಯಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ :‘ನಿನ್ನ ಜಾತಿಯವರು ದೇವಸ್ಥಾನಕ್ಕೆ ಬರಬಾರ್ದು ಎಂದು ಅವಮಾನ’: ಅಧಿಕಾರಿಗಳಿಂದ ಪರಿಹಾರ

ಕಳೆದ ಎರಡು ತಿಂಗಳ ಹಿಂದಷ್ಟೇ ಅವಳಿ ಮಕ್ಕಳಾದ ಅಯಾನ್​, ಜೋಯಾ ಮತ್ತು ಅವರ ತಂದೆ ರಮೀಜ್​ ಖಾನ್​ ಮತ್ತು ತಾಯಿ ಉಷಾ ಖಾನ್​ ಪೂಂಚ್​ಗೆ ಬಂದು ನೆಲೆಸಿದ್ದರು. ಮಕ್ಕಳ ಶಿಕ್ಷಣಕ್ಕಾಗಿ ಅವರು ಪೂಂಚ್​ಗೆ ಸ್ಥಳಾಂತರಗೊಂಡಿದ್ದರು. ಕಳೆದ ತಿಂಗಳಷ್ಟೆ ಮಕ್ಕಳು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆದರೆ ಮೇ.07ರಂದು ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಇಬ್ಬರು ಮಕ್ಕಳು ಅಸುನೀಗಿದ್ದಾರೆ. ಜೊತೆಗೆ ಮಕ್ಕಳ ಚಿಕ್ಕಮ್ಮ ಮತ್ತು ಚಿಕ್ಕಮ್ಮ ಕೂಡ ಸಾವನ್ನಪ್ಪಿದ್ದಾರೆ.

ಆ ಮಕ್ಕಳ ತಂದೆ 48 ವರ್ಷದ ರಮೀಜ್ ಖಾನ್ ಪ್ರಸ್ತುತ ಜಮ್ಮು ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ಮಕ್ಕಳ ಸಾವಿನ ಬಗ್ಗೆ ಅವರಿಗೆ ಇನ್ನೂ ಮಾಹಿತಿ ನೀಡಲಾಗಿಲ್ಲ. ತಾಯಿ ಉರ್ಷಾ ಖಾನ್ ಮಾನಸಿಕವಾಗಿ ಕುಸಿದಿದ್ದಾರೆ. ಒಂದೆಡೆ ಮಕ್ಕಳನ್ನು ಕಳೆದುಕೊಂಡ ತಾಯಿಯ ನೋವು, ಮತ್ತೊಂದೆಡೆ ಐಸಿಯುನಲ್ಲಿ ದಾಖಲಾಗಿರುವ ಗಂಡನನ್ನು ನೋಡಿಕೊಳ್ಳುವುದು ಇದು ಅವರನ್ನು ಮತ್ತಷ್ಟು ಕುಗ್ಗುವಂತೆ ಮಾಡಿದೆ. ಇದನ್ನೂ ಓದಿ :ದೇಶದ ರಕ್ಷಣಾ ನಿಧಿಗೆ ಮಂತ್ರಾಲಯ ಮಠದಿಂದ 25 ಲಕ್ಷ ರೂ ದೇಣಿಗೆ

ಈ ಕುರಿತು ಆ ಕುಟುಂಬದ ನಿಕಟ ಸಂಬಂಧಿಗಳಾದ ಮಾರಿಯಾ ಮತ್ತು ಸೊಹೈಲ್ ಖಾನ್ ಹೇಳಿಕೆ ನೀಡಿದ್ದು. “ಅಯಾನ್​ ಮತ್ತು ಜೋಯಾ ಇಬ್ಬರು ಬಹಳ ಬುದ್ದಿವಂತರಾಗಿದ್ದರು, ಆದರೆ ಅಂದು ನಡೆದ ದಾಳಿಯಲ್ಲಿ ಅವರು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು, ಅಯಾನ್​ ದೇಹದಿಂದ ಅವನ ಕರುಳುಗಳು ದೇಹದಿಂದ ಹೊರಬಂದಿದ್ದವರು, ಜೋಯಾ ಕೂಡ ತೀವ್ರವಾಗಿ ಗಾಯಗೊಂಡಿದ್ದರು, ಇಬ್ಬರು ಕೆಲವೇ ನಿಮಿಷಗಳ ಅಂತರದಲ್ಲಿ ಸಾವನ್ನಪ್ಪಿದರು ಎಂದು ಹೇಳಿದರು.

ಇದನ್ನೂ ಓದಿ :56 ಇಂಚಿನ ಎದೆ ಕೇವಲ ಮಾತನಾಡಲು ಮಾತ್ರ ಸೀಮಿತಾ, ಮೋದಿ ವಿರುದ್ದ ಪ್ರಿಯಾಂಕ ಖರ್ಗೆ ವಾಗ್ದಾಳಿ

ಏಪ್ರಿಲ್ 22ರಂದು ಉಗ್ರರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಅಮಾಯಕರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ್ದರು. ಇದಾದ ಬಳಿಕ ಭಾರತವು ಪ್ರತೀಕಾರ ತೀರಿಸಿಕೊಳ್ಳಲು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿ 9 ಉಗ್ರರ ನೆಲೆಗಳನ್ನು ತಟಸ್ಥಗೊಳಿಸಿತ್ತು. ಇದಾದ ಬಳಿಕ ದಾಳಿ ಪ್ರತಿದಾಳಿಗಳು ನಡೆಯುತ್ತಿದ್ದವು. ಈಗ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಮಾತುಕತೆಗಳು ಮುಂದುವರೆದಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments