Tuesday, August 26, 2025
Google search engine
HomeUncategorizedಮಧ್ಯಸ್ಥಿಕೆ ವಹಿಸಲು ಟ್ರಂಪ್​ ಯಾರು: ಮೋದಿ ವಿರುದ್ದ ಅಸಮಧಾನ ಹೊರಹಾಕಿದ ಬಸವರಾಜ್​ ಹೊರಟ್ಟಿ

ಮಧ್ಯಸ್ಥಿಕೆ ವಹಿಸಲು ಟ್ರಂಪ್​ ಯಾರು: ಮೋದಿ ವಿರುದ್ದ ಅಸಮಧಾನ ಹೊರಹಾಕಿದ ಬಸವರಾಜ್​ ಹೊರಟ್ಟಿ

ಚಿಕ್ಕೋಡಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಏರ್ಪಟ್ಟಿರುವ ಕದನ ವಿರಾಮದ ಬಗ್ಗೆ ಮಾತನಾಡಿದ ಸಭಾಪತಿ ಬಸವರಾಜ್​ ಹೊರಟ್ಟಿ “ಯುದ್ಧವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದಿತ್ತು. ಮಧ್ಯಸ್ಥಿಕೆ ವಹಿಸಲು ಟ್ರಂಪ್​ ಯಾರು ಎಂದು ಪ್ರಧಾನಿ ಮೋದಿ ವಿರುದ್ದ ಅಸಮಧಾನ ಹೊರಹಾಕಿದರು.

ಚಿಕ್ಕೋಡಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಭಾಪತಿ ಬಸವರಾಜ್​ ಹೊರಟ್ಟಿ, “ಈ ಯುದ್ಧದಲ್ಲಿ ಪಾಕಿಸ್ತಾನವನ್ನ ನಾಶ ಮಾಡಬೇಕಿತ್ತು. ಯಾರದೋ ಮಾತು ಕೇಳಿ ಯುದ್ಧ ನಿಲ್ಲಿಸಬಾರದಿತ್ತು. ಪಾಕಿಸ್ತಾನ
ಕದನ ವಿರಾಮದ ನಂತರ ಮತ್ತೆ ದಾಳಿ ಮಾಡಿದ್ದಾರೆ. ಬೇರೆಯವರ ಮಾತು ಕೇಳಿ ಪಾಕಿಸ್ತಾನದ ಜೋತೆ ನಡೆಸುತ್ತಿದ್ದ ಯುದ್ಧ ಕೈ ಬಿಟ್ಟಿದ್ದು ತಪ್ಪು. ಪಾಕಿಸ್ತಾನದವರು ಸಾಯುವವರೆಗೂ ವೈರಿಗಳೇ ಅವರು ಎಂದಿಗೂ ನಮಗೆ ಒಳ್ಳೆಯದು ಮಾಡಲ್ಲ ಎಂದು ಹೇಳಿದರು.

ಇದನ್ನೂ ಓದಿ :ಕದನ ವಿರಾಮದ ಬಗ್ಗೆ ನನಗೆ ಸಮಾಧಾನ ಇಲ್ಲ: ರಾಮಲಿಂಗ ರೆಡ್ಡಿ

ಪಾಕ್​ ಹಾಗೂ ಭಾರತದ ನಡುವೆ ಯುದ್ಧ ಸಂಧಾನದಲ್ಲಿ ಟ್ರಂಪ್ ಮಧ್ಯಸ್ಥಿಕೆ ವಿಚಾರವಾಗಿ ಮಾತನಾಡಿದ ಹೊರಟ್ಟಿ “ಮಧ್ಯಸ್ಥಿಕೆ ವಹಿಸುದಕ್ಕೆ ಟ್ರಂಪ್ ಯಾರು.!? ಅಮೇರಿಕಾದ ವಿಚಾರದಲ್ಲಿ ನಾವು ಏನಾದ್ರೂ ಹೇಳಿದ್ರೆ ಅವರು ಕೇಳ್ತಾರಾ, ಮೋದಿಯವರು ಕಠಿಣ ಹಾಗೂ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಯುದ್ಧದ ವಿಚಾರದಲ್ಲಿ ಟ್ರಂಪ್ ಮಾತು ಕೇಳಿದ್ದು ತಪ್ಪು.‌ ಭಯೋತ್ಪಾದಕರ ವಿಚಾರದಲ್ಲಿ ಎಲ್ಲಾ ದೇಶಗಳು ಶೃಂಗ ಸಭೆಯನ್ನ ನಡೆಸಿ, ಭಯೋತ್ಪಾದನೆ ನಾಶ ಪಡಿಸಬೇಕು ಎಂದು ಬಸವರಾಜ್​ ಹೊರಟ್ಟಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments