ರಾಮನಗರ: ಭಾರತ ಮತ್ತು ಪಾಕಿಸ್ತಾನದ ನಡುವೆ ಏರ್ಪಟ್ಟಿರುವ ಕದನ ವಿರಾಮದ ಕುರಿತು ಮಾತನಾಡಿದ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ “ಕದನ ವಿರಾಮದ ಬಗ್ಗೆ ನನಗೆ ಸಮಾಧಾನ ಇಲ್ಲ, ಪಾಕಿಸ್ತಾನಕ್ಕೆ ಸರಿಯಾಗಿ ಬುದ್ದಿ ಕಲಿಸಬೇಕಿತ್ತು” ಎಂದು ಹೇಳಿದರು.
ರಾಮನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ರಾಮಲಿಂಗರೆಡ್ಡಿ “ಭಾರತ ಮತ್ತು ಪಾಕಿಸ್ತಾನದ ನಡುವೆ ಏರ್ಪಟ್ಟಿರುವ ಕದನ ವಿರಾಮದ ಬಗ್ಗೆ ಸಮಾಧಾನ ಇಲ್ಲ. ಪಾಕಿಸ್ತಾನ ಪದೇ ಪದೇ ಚೇಸ್ಟೆ ಮಾಡುತ್ತಲೇ ಬಂದಿದೆ. ಸುಮಾರು 10 ಘಟನೆಗಳಲ್ಲಿ ಅವರ ನೇರಾ ಪಾತ್ರವಿದೆ. ಅಲ್ಲಿನ ರಾಜಕಾರಣಿಗಲು ಹಾಗೂ ಪಾಕಿಸ್ತಾನದ ಸೇನೆಯೂ ಉಗ್ರರಿಗೆ ಬೆಂಬಲ ಕೊಡುತ್ತಿದೆ.
ಇದನ್ನೂ ಓದಿ :ಏಕಾಂತದಲ್ಲಿ ಧ್ಯಾನ ಮಾಡುವ ಹವ್ಯಾಸ: ಕಾವೇರಿ ನದಿಗೆ ಬಿದ್ದು ಪದ್ಮಶ್ರೀ ವಿಜೇತ ವಿಜ್ಞಾನಿ ಸಾ*ವು
ಈಗಿದ್ದಾಗ ಭಾರತ ಅವರಿಗೆ ಸರಿಯಾಗಿ ಬುದ್ದಿ ಕಲಿಸಬೇಕಿತ್ತು ಎನ್ನುವುದು ನನ್ನ ಭಾವನೆ, ಆದರೆ ಇಷ್ಟಾದರೂ ಬುದ್ದಿ ಕಲಿಸಿದ್ದಾರಲ್ಲ ಅಂತ ಸಂತೋಷ ಪಡಬೇಕಿದೆ. ಆದರೆ ಕೇಂದ್ರ ಸರ್ಕಾರ ಉಗ್ರರ ವಿರುದ್ದ ನಡೆಸುವ ಹೋರಾಟಕ್ಕೆ ಎಲ್ಲಾ ಪಕ್ಷಗಳು ಬೆಂಬಲ ನೀಡಿವೆ, ಕೇಂದ್ರ ಸರ್ಕಾರದ ಜೊತೆಗಿದ್ದೀವಿ ಎಂದು ರಾಮಲಿಂಗರ ರೆಡ್ಡಿ ಹೇಳಿದರು.