Tuesday, August 26, 2025
Google search engine
HomeUncategorizedಕದನ ವಿರಾಮ: ವಿಶೇಷ ಅಧಿವೇಶನ ಕರೆಯುವಂತೆ ಮೋದಿಗೆ ಪತ್ರ ಬರೆದ ರಾಹುಲ್​ ಗಾಂಧಿ

ಕದನ ವಿರಾಮ: ವಿಶೇಷ ಅಧಿವೇಶನ ಕರೆಯುವಂತೆ ಮೋದಿಗೆ ಪತ್ರ ಬರೆದ ರಾಹುಲ್​ ಗಾಂಧಿ

ದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಏರ್ಪಟ್ಟಿರುವ ಕದನ ವಿರಾಮ ಸೇರಿದಂತೆ ಪಹಲ್ಗಾಮ್​ನಲ್ಲಿ ನಡೆದಿರುವ ಘಟನೆ ಬಗ್ಗೆ ಚರ್ಚಿಸಲು ವಿಪಕ್ಷಗಳು ವಿಶೇಷ ಅಧಿವೇಶನ ಕರೆಯುವಂತೆ ಪತ್ರ ಬರೆದಿದ್ದು. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿ ಮೋದಗೆ ಪತ್ರ ಬರೆದಿದ್ದಾರೆ.

ಏನಿದೆ ಪತ್ರದಲ್ಲಿ..!

ಆತ್ಮೀಯ ಪ್ರಧಾನ ಮಂತ್ರಿಯವರೇ, ಸಂಸತ್ತಿನ ವಿಶೇಷ ಅಧಿವೇಶನವನ್ನು ತಕ್ಷಣವೇ ಕರೆಯಬೇಕೆಂಬ ವಿರೋಧ ಪಕ್ಷದ ಸರ್ವಾನುಮತದ ವಿನಂತಿಯನ್ನು ನಾನು ಪುನರುಚ್ಚರಿಸುತ್ತೇನೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆಯಿತು. ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಯಿತು. ಆದರೆ, ಇಂದಿನ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಮೊದಲು ಘೋಷಿಸಿದರು. ಇದು ಮುಂಬರುವ ಸವಾಲುಗಳನ್ನು ಎದುರಿಸಲು ನಮ್ಮ ಸಾಮೂಹಿಕ ಸಂಕಲ್ಪವನ್ನು ಪ್ರದರ್ಶಿಸಲು ಒಂದು ಅವಕಾಶವಾಗಿದೆ. ನೀವು ಈ ಬೇಡಿಕೆಯನ್ನು ಗಂಭೀರವಾಗಿ ಮತ್ತು ತ್ವರಿತವಾಗಿ ಪರಿಗಣಿಸುತ್ತೀರಿ ಎಂದು ನಾನು ನಂಬುತ್ತೇನೆ ಎಂದು ರಾಹುಲ್‌ ಗಾಂಧಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:ಭಾರತೀಯ ಸೇನಾ ಪಡೆಗಳ ಘರ್ಜನೆ ರಾವಲ್ಪಿಂಡಿಯವರೆಗೂ ತಲುಪಿದೆ; ರಾಜನಾಥ್​ ಸಿಂಗ್​

ಕಾಂಗ್ರೆಸ್ ಮುಖ್ಯಸ್ಥ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಪ್ರಧಾನಿಗೆ ಪತ್ರ ಬರೆದಿದ್ದಾರೆ. ‘ಪಹಲ್ಗಾಮ್‌ನಲ್ಲಿ ನಡೆದ ಅಮಾನವೀಯ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಸಂಸತ್ತಿನ ಎರಡೂ ಸದನಗಳ ವಿಶೇಷ ಅಧಿವೇಶನವನ್ನು ಕರೆಯಲು ಏಪ್ರಿಲ್ 28 ರಂದು ಬರೆದ ನಮ್ಮ ಪತ್ರಗಳನ್ನು ನೀವು ನೆನಪಿಸಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ವಾರದ ಹಿಂದಷ್ಟೆ ಜನಿಸಿದ ಮಗು, ಬಾಣಂತಿ ಪತ್ನಿಯನ್ನ ಬಿಟ್ಟು ಯುದ್ದ ಭೂಮಿಗೆ ತೆರಳಿದ ಯೋಧ

ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಹಲ್ಗಾಮ್ ಭಯೋತ್ಪಾದನೆ, ಆಪರೇಷನ್ ಸಿಂಧೂರ ಮತ್ತು ಮೊದಲು ವಾಷಿಂಗ್ಟನ್ ಡಿಸಿಯಿಂದ, ನಂತರ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳಿಂದ ಕದನ ವಿರಾಮ ಘೋಷಣೆಗಳ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಎಲ್ಲಾ ವಿರೋಧ ಪಕ್ಷಗಳ ಸರ್ವಾನುಮತದಿಂದ ವಿನಂತಿಸಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕರು ಈಗಾಗಲೇ ನಿಮಗೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ನಾನು ಈ ವಿನಂತಿಯನ್ನು ಬೆಂಬಲಿಸಿ ಬರೆಯುತ್ತಿದ್ದೇನೆ. ನೀವು ಒಪ್ಪುತ್ತೀರಿ ಎಂದು ನಾನು ನಂಬುತ್ತೇನೆ ಎಂದು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments