Sunday, September 14, 2025
HomeUncategorizedಆಶಾ ಕಾರ್ಯಕರ್ತೆಯರ ಪ್ರತಿಭಟನೆ.

ಆಶಾ ಕಾರ್ಯಕರ್ತೆಯರ ಪ್ರತಿಭಟನೆ.

ಹಾವೇರಿ : ವೇತನ ಹೆಚ್ಚಳ‌ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ತಹಶೀಲ್ದಾರ್ ಕಚೇರಿಗೆ ತೆರಳಿ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದ್ರು. ಇನ್ನು ಕಳೆದ ನಾಲ್ಕು ತಿಂಗಳುಗಳಿಂದ ಆಶಾ ಕಾರ್ಯಕರ್ತೆಯರು ತಾವು ಮಾಡಬಹುದಾದ ಬಾಣಂತಿ ಭೇಟಿ, ಎಎಂಸಿ ಪಿಎಂಸಿ ಇಮ್ಮುನೈಸೇಶನ್ ಇನ್ನಿತರ ಕೆಲಸಗಳನ್ನು ಬಿಟ್ಟು ಕೇವಲ ಕರೋನಾ ಸರ್ವೆ, ಕ್ವಾರಂಟಿನ್ ಕೇಂದ್ರಗಳಲ್ಲಿ ,ಚೆಕ್ ಪೋಸ್ಟ್ ಗಳಲ್ಲಿ ಇತ್ಯಾದಿಗಳೆಲ್ಲ ಕಡೆ ಆಶಾ ಕಾರ್ಯಕರ್ತೆಯರು ಕೆಲಸ ಮಾಡಿದ್ದಾರೆ. ಇದರಿಂದಾಗಿ ಪ್ರತಿ ಆಶಾ ಕಾರ್ಯಕರ್ತೆ ಗೆ ಈ ಕೆಲಸಗಳಿಗೆ ಬರಬೇಕಾಗಿದ್ದ 3-5 ಸಾವಿರ ರೂಪಾಯಿಗಳು ನಷ್ಟವಾಗಿದೆ. ರಾಜ್ಯ ಸರ್ಕಾರ ಸಹಕಾರಿ ಸಂಘಗಳ ಮೂಲಕ ಘೋಷಿಸಿದ 3000 ಎಲ್ಲರಿಗೂ ದೊರೆತಿಲ್ಲ. ಕೇಂದ್ರ ಸರ್ಕಾರ ಘೋಷಿಸಿದ 2000 ರೂಪಾಯಿ ಇನ್ನೂ ಬ್ಯಾಂಕ್ ಖಾತೆ ಸೇರಿಲ್ಲ. ಇದರಿಂದಾಗಿ ಆಶಾ ಕುಟುಂಬದ ಬದುಕು ಬೀದಿಗೆ ಬಂದಿದೆ.. ಇಷ್ಟೆಲ್ಲಾ ಆದಾಗ್ಯೂ ಕೂಡ ಆಶಾ ಕಾರ್ಯಕರ್ತೆಯರು ಇದನ್ನೆಲ್ಲ ಲೆಕ್ಕಿಸದೆ ಕರೋನಾ ಕಾರ್ಯದಲ್ಲಿ ಫ್ರೆಂಟ್ ಲೈನ್ ವಾರಿಯರ್ ಗಳಾಗಿ ಕೆಲಸ ಮಾಡಿದ್ದಾರೆ. ಯಾವುದೇ ರೀತಿ ರಕ್ಷಣಾ ಉಪಕರಣಗಳು ಸರಿಯಾಗಿ ಸಿಗದಿದ್ದರಿಂದ ಹಾವೇರಿ ಜಿಲ್ಲೆಯಲ್ಲಿ 17 ಜನ ಆಶಾ ಕಾರ್ಯಕರ್ತರಿಗೆ ಕರೋನಾ ಸೋಂಕು ತಗುಲಿದೆ. ಇಂತಹ ಸಂದರ್ಭದಲ್ಲಿ ಕೇವಲ ಹೊಗಳಿಕೆಗಳಿಂದ ತಮ್ಮ ಕಾಳಜಿ ವ್ಯಕ್ತ ಪಡಿಸಿದರೆ ಸಾಕೆ. ಅದು ನಿಜವಾದ ಕಾಳಜಿಯೇ ಆದಲ್ಲಿ, ಅತ್ಯಂತ ಕೆಳಹಂತದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12,000 ನಿಗದಿ ಮಾಡಲು ಸಂಘದ ನಾಯಕರನ್ನು ಮಾತುಕತೆಗೆ ಕರೆಯಲಿ.
ಸರ್ಕಾರ ಈಗಾಗಲೇ ಏಳರಿಂದ ಎಂಟು ಸಾವಿರ ರೂಪಾಯಿ ಗಳಿಸುತ್ತಿದ್ದಾರೆ. ಆರ್.ಸಿ. ಎಚ್ ಪೋರ್ಟಲ್ ನಿಂದಾಗಿ ದುಡಿದ ಹಣ ದೊರೆಯದೆ ಆಶಾ ಕಾರ್ಯಕರ್ತೆಯರು ಶೋಷಣೆಗೆ ಒಳಗಾಗಿದ್ದಾರೆ. ಈ ವಿಚಿತ್ರ ವಾದ 3-4 ರೀತಿಯ ಪ್ರೋತ್ಸಾಹಧನ ಗೌರವಧನ ಗಳನ್ನು ತೆಗೆದುಹಾಕಿ ಒಂದೇ ಗಂಟಿನ ಮಾಸಿಕ 12000 ಕೊಡಬೇಕು ಎಂದು ಆಶಾ ಕಾರ್ಯಕರ್ತೆಯರು ಆಗ್ರಹಿಸಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments