ಹಿಮಾಚಲ ಪ್ರದೇಶ : ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ರಜೆಯಿಂದ ಕರ್ತವ್ಯಕ್ಕೆ ಮರಳುತ್ತಿರುವ ಎಲ್ಲಾ ಸೈನಿಕರಿಗೆ ಉಚಿತ ಟ್ಯಾಕ್ಸಿ ಸೇವೆ ನೀಡಲು ಹಿಮಾಚಲ ಪ್ರದೇಶ ಟ್ಯಾಕ್ಸಿ ಯೂನಿಯನ್ ನಿರ್ಧರಿಸಿದ್ದು. ಈ ಕುರಿತು ಎಲ್ಲಾ ಟ್ಯಾಕ್ಸಿ ಚಾಲಕರಿಗೆ ಸೂಚನೆ ಹೊರಡಿಸಲಾಗಿದೆ.
ಹಿಮಾಚಲ ಪ್ರದೇಶದ ಸೋಲನ್ ಟ್ಯಾಕ್ಸಿ ಯೂನಿಯನ್ ಈ ನಿರ್ಧಾರ ಕೈಗೊಂಡಿದ್ದು. ದೇಶದ ಸೈನಿಕರು ನಮಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ, ಆದ್ದರಿಂದ ಒಕ್ಕೂಟದ ಈ ಸಣ್ಣ ಕೊಡುಗೆಯನ್ನು ಅವರ ಸೇವೆಗೆ ಸಮರ್ಪಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ರಾಜ್ ಕಮಲ್ ರಾಜಾ ಹೇಳಿದರು. ಭವಿಷ್ಯದಲ್ಲಿ ಸೇನೆಗೆ ಯಾವುದೇ ರೀತಿಯ ಸಹಾಯದ ಅಗತ್ಯವಿದ್ದರೂ, ಯಾವುದೇ ಶುಲ್ಕವಿಲ್ಲದೆ ಒಕ್ಕೂಟವು ಸಿದ್ಧವಾಗಿರುತ್ತದೆ ಎಂದು ಅವರು ಭರವಸೆ ನೀಡಿದರು.
ಇದನ್ನೂ ಓದಿ :ಭಾರತದಿಂದ ತೀವ್ರ ಪ್ರತಿದಾಳಿ: ಮಾತುಕತೆಗೆ ಮುಂದಾದ ಪಾಕಿಸ್ತಾನ..!
ದೇಶದ ಗಡಿಗಳನ್ನು ರಕ್ಷಿಸಲು ನಿಯೋಜಿಸಲಾದ ಸೈನಿಕರಿಗೆ ಮನಾಲಿಯಿಂದ ಲೇಹ್, ಚಂಡೀಗಢ, ದೆಹಲಿ ಮತ್ತು ಇತರ ನಿಯೋಜನಾ ಸ್ಥಳಗಳಿಗೆ ಉಚಿತ ಟ್ಯಾಕ್ಸಿ ಸೇವೆಗಳನ್ನು ಒದಗಿಸಲಾಗುವುದು ಎಂದು ಒಕ್ಕೂಟ ಘೋಷಿಸಿದೆ. ಈ ಹೆಜ್ಜೆ ದೇಶಭಕ್ತಿಯ ಮನೋಭಾವವನ್ನು ತೋರಿಸುವುದಲ್ಲದೆ, ನಾಗರಿಕರು ಮತ್ತು ಸಂಸ್ಥೆಗಳು ಸೈನ್ಯದೊಂದಿಗೆ ನಿಂತಿರುವುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.