Tuesday, August 26, 2025
Google search engine
HomeUncategorizedಯುದ್ಧದ ಮುನ್ಸೂಚನೆ: ರೈಲು, ಬಸ್​ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ರಾಜ್ಯ ಗುಪ್ತಚರ ಇಲಾಖೆ ಸೂಚನೆ

ಯುದ್ಧದ ಮುನ್ಸೂಚನೆ: ರೈಲು, ಬಸ್​ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ರಾಜ್ಯ ಗುಪ್ತಚರ ಇಲಾಖೆ ಸೂಚನೆ

ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧದ ಉದ್ವಿಘ್ನತೆ ನಿರ್ಮಾಣವಾಗಿದ್ದು. ಇದರ ಬೆನ್ನಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಗುಪ್ತಚರ ಇಲಾಖೆ ಸೂಚನೆ ಹೊರಡಿಸಿದೆ. ಈ ಕುರಿತು ಹೇಮಂತ್​ ನಿಂಬಾಳ್ಕರ್​ ಸೂಚನೆ ಹೊರಡಿಸಿದ್ದಾರೆ.

ಪಹಲ್ಗಾಮ್​ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಆಪರೇಷನ್​ ಸಿಂಧೂರ ಕಾರ್ಯಚರಣೆ ನಡೆಸಿದ್ದು. ಪಾಕಿಸ್ತಾನದ ಉಗ್ರನೆಲೆಗಳನ್ನು ಧ್ವಂಸಗೊಳಿಸಿದೆ. ಇದರಿಂದಾಗಿ ಎರಡು ದೇಶಗಳ ನಡುವೆ ಉದ್ವಿಘ್ನತೆ ಹೆಚ್ಚಾಗಿದ್ದು. ಎಲ್ಲಾ ರಾಜ್ಯಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕದಲ್ಲೂ ಕಟ್ಟೆಚರ ವಹಿಸುವಂತೆ ರಾಜ್ಯ ಗುಪ್ತಚರ ಇಲಾಖೆ ಸ್ಪಷ್ಟನೆ ಹೊರಡಿಸಿದ್ದು. ರಾಜ್ಯದ ರೈಲು ನಿಲ್ದಾಣಗಳು, ಬಸ್​ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳಲ್ಲಿ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ :ಯುದ್ದದ ಸನ್ನಿವೇಶವಿದೆ; ಧವಸ, ಧಾನ್ಯ ಎಷ್ಟಿದೆ ಎಂಬ ಬಗ್ಗೆ ಪರಿಶೀಲನೆ ಮಾಡ್ತೀವಿ: ಪರಮೇಶ್ವರ್​

ರಾಜ್ಯ ಗುಪ್ತಚರ ವಿಭಾಗದ ನಿರ್ದೇಶಕ ಹೇಮಂತ್ ಎಂ.ನಿಂಬಾಳ್ಳರ್‌ ಸೂಚನೆ ಹೊರಡಿಸಿದ್ದು. ಅವಶ್ಯಕವಾಗಿ ನಿಗಾ ಇಡಬೇಕಾದ ಸ್ಥಳಗಳಾದ ಆಡಳಿತ ಕಟ್ಟಡಗಳು, ರಕ್ಷಣಾ ಸ್ಥಾವರಗಳು, ವಿಜ್ಞಾನ ಸಂಶೋಧನಾ ಕೇಂದ್ರಗಳು
ವಿಮಾನ ನಿಲ್ದಾಣಗಳು, ಜಲಾಶಯಗಳು, ಉಪಗ್ರಹ ಕೇಂದ್ರಗಳು, ಜಲ ವಿದ್ಯುತ್‌ ಸ್ಥಾವರಗಳು, ಅಣು ವಿದ್ಯುತ್ ಸ್ಥಾವರ, ರೈಲು ನಿಲ್ದಾಣಗಳು, ಮೆಟ್ರೊ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ನಿಗಾ ವಹಿಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ :ಭಾರತದ ವಾಯುನೆಲೆಗೆ ಯಾವುದೇ ಹಾನಿಯಾಗಿಲ್ಲ, ಪಾಕಿಗಳ ಸುಳ್ಳಿಗೆ ಸ್ಪಷ್ಟನೆ ಕೊಟ್ಟ ವಿದೇಶಾಂಗ ಇಲಾಖೆ

ಅಷ್ಟೇ ಅಲ್ಲದೇ ಬಂದರು ಹಾಗೂ ಹಡಗು ತಯಾರಿಕಾ ಸಂಸ್ಥೆಗಳು, ಸಾಫ್ಟ್‌ವೇರ್ ಕಂಪನಿಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕೇಂದ್ರಗಳು, ಪೈಪ್‌ಲೈನ್‌ ಮತ್ತು ಸಂಗ್ರಹಾಗಾರಗಳು, ಜನಸಂದಣಿ ಸೇರುವ ಶಾಪಿಂಗ್‌ ಮಾಲ್‌ಗಳು, ಪಂಚತಾರಾ ಹೋಟೆಲ್‌ಗಳು, ವಿದೇಶಿ ರಾಜತಾಂತ್ರಿಕ ಕಚೇರಿಗಳು, ವಸತಿ ಮತ್ತಿತರ ಕಟ್ಟಡಗಳು, ಭಾರಿ ಕೈಗಾರಿಕೆಗಳು, ಜನ ಸಂದಣಿ ಸೇರುವ ದೇವಾಲಯಲಗಳು, ಮಸೀದಿ ಹಾಗೂ ಚರ್ಚ್‌ಗಳು ಸೇರಿ ಜನಸಂದಣಿ ಸ್ಥಳಗಳಲ್ಲಿ ಕಟ್ಟೆಚ್ಚರಕ್ಕೆ ಸೂಚನೆ ಹೊರಡಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments