Wednesday, August 27, 2025
Google search engine
HomeUncategorizedಸಿಂಧೂರ ಅಳಿಸಿದ ಪಾಕಿಗಳಿಗೆ ಉತ್ತರ ಕೊಟ್ಟ ಮಹಿಳಾ ಅಧಿಕಾರಿಗಳು ಯಾರು ಗೊತ್ತಾ..!

ಸಿಂಧೂರ ಅಳಿಸಿದ ಪಾಕಿಗಳಿಗೆ ಉತ್ತರ ಕೊಟ್ಟ ಮಹಿಳಾ ಅಧಿಕಾರಿಗಳು ಯಾರು ಗೊತ್ತಾ..!

ದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹಿಂದೂಗಳ ನರಮೇಧಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಆಪರೇಷನ್​ ಸಿಂಧೂರ್ ಹೆಸರಿನಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದು.  ಘಟನೆ ಬಳಿಕ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಜೊತೆ ಸಶಸ್ತ್ರ ಪಡೆಗಳ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳಾದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಅವರು ಆಪರೇಷನ್‌ ಸಿಂಧೂರದ ಬಗ್ಗೆ ಮಾಹಿತಿ ನೀಡಿದರು.

ಇದೀಗ ಇವರ ಕೈಲಿಂದಲೇ ಸುದ್ದಿಗೋಷ್ಟಿ ನಡೆಸಿದ್ದು ಯಾಕೆ ಎಂಬ ಪ್ರಶ್ನೆ ಕಾಡುತ್ತಿದ್ದು. ‘ಪಹಲ್ಗಾಮ್‌ ದಾಳಿಯಲ್ಲಿ 26 ಮಹಿಳೆಯರ ಸಿಂಧೂರ ಅಳಿಸಲಾಗಿತ್ತು, ಇದಕ್ಕೆ ಪ್ರತ್ಯುತ್ತರ ಭಾರತ ಮಹಿಳಾ ಅಧಿಕಾರಿಗಳಿಂದಲೇ ದಾಳಿಯ ವಿವರ ಕೊಡಿಸಿದ್ದಾರೆ. ಇನ್ನು ದಾಳಿಯ ಬಗ್ಗೆ ಮಾಹಿತಿ ಕೊಟ್ಟ ಕರ್ನಲ್​ ಸೋಫಿಯಾ ಖುರೇಶಿ ಮತ್ತು ವಿಂಗ್​ ಕಮಾಂಡರ್​ ವ್ಯೋಮಿಕ ಸಿಂಗ್​ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ:ರಾಜಕಾರಣಿಗಳು ಹೇಗೆ ಬದಲಾಗುತ್ತಾರೆ ಎಂಬುದಕ್ಕೆ ಸಿಎಂ ಸಿಂಧೂರವೇ ಸಾಕ್ಷಿ: ಪ್ರತಾಪ್​ ಸಿಂಹ

ಕರ್ನಲ್​​ ಸೋಫಿಯಾ ಖುರೇಶಿ ಹಿನ್ನಲೆ..!

ಮೂಲತಃ ಗುಜರಾತಿನವರಾದ ಸೋಫಿಯಾ ಖುರೇಶ್​ ಅವರು 1981 ರಲ್ಲಿ ಗುಜರಾತ್‌ನ ವಡೋದರಾದಲ್ಲಿ ಜನಿಸಿದರು. ಜೀವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಸೋಫಿಯಾ ಅವರು 1999ರ ಕಾರ್ಗಿಲ್​ ಯುದ್ದದ ಸಮಯದಲ್ಲಿ ಭಾರತೀಯ ಸೇನೆಗೆ ಸೇರಿದರು. ಚೆನೈನಲ್ಲಿ ತರಬೇತಿ ಪಡೆದಿದ್ದ ಸೋಫಿಯಾ ಸೈನ್ಯದಲ್ಲಿ ಲೆಫ್ಟಿನೆಂಟ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು.

2006 ರಲ್ಲಿ ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಮಿಲಿಟರಿ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು 2010 ರಿಂದ ಮತ್ತೆ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 2016ರಲ್ಲಿ ಬಹುರಾಷ್ಟ್ರೀಯ ಮಿಲಿಟರಿ ಕವಾಯತಿನಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡಿಸಿದ್ದರು. ಈ ತುಕಡಿಯಲ್ಲಿ ಭಾಗವಹಿಸಿದ್ದ ಏಕೈಕ ಮಹಿಳಾ ಅಧಿಕಾರಿ ಸೋಪಿಯಾ ಆಗಿದ್ದರು.ನ ಸೋಫಿಯಾ ಅವರ ಅಜ್ಜ ಮತ್ತು ತಂದೆಯೂ ಕೆಲಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ:ದೇಶ ಕಾಯುವ ಯೋಧರ ರಕ್ಚಣೆಗಾಗಿ ಮುಜರಾಯಿ ಇಲಾಖೆ ದೇವಾಸ್ಥಾನಗಳಲ್ಲಿ ವಿಶೇಷ ಪೂಜೆ

ವಿಂಗ್​ ಕಮಾಂಡರ್​ ವ್ಯೋಮಿಕಾ ಸಿಂಗ್​..!

ವಿಂಗ್​​ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಭಾರತೀಯ ವಾಯುಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಇವರು 2004ರ ಡಿ.18ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾದರು. ಶಾಲಾ ವಯಸ್ಸಿನಿಂದಲೂ ವಾಯುಪಡೆಗೆ ಸೇರಿ ದೇಶಸೇವೆ ಮಾಡಬೇಕು ಎಂಬ ಕನಸನ್ನು ಕಂಡಿದ್ದ ಇವರು ತಮ್ಮ ತನ್ನ ಧೈರ್ಯ, ಸಮರ್ಪಣೆ ಮತ್ತು ನಾಯಕತ್ವ ಕೌಶಲ್ಯದಿಂದ ಭಾರತೀಯ ವಾಯುಪಡೆಯಲ್ಲಿ ವಿಶಿಷ್ಟ ಗುರುತನ್ನು ಸೃಷ್ಟಿಸಿದ್ದಾರೆ.

ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಇಲ್ಲಿಯವರೆಗೆ 2500 ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಭಾರತದಂತಹ ಕಠಿಣ ಭೂಪ್ರದೇಶಗಳಲ್ಲಿ ಚೇತಕ್ ಮತ್ತು ಚೀತಾ ಹೆಲಿಕಾಪ್ಟರ್‌ಗಳನ್ನು ಹಾರಿಸಿದ್ದಾರೆ. 2021 ರಲ್ಲಿ, ವ್ಯೋಮಿಕಾ ಸಿಂಗ್ 21,650 ಅಡಿ ಎತ್ತರದ ಮಣಿರಂಗ್ ಪರ್ವತಕ್ಕೆ ತ್ರಿ-ಸೇನಾ ಮಹಿಳಾ ಪರ್ವತಾರೋಹಣದಲ್ಲಿ ಭಾಗವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments