Wednesday, August 27, 2025
HomeUncategorizedಸೋಮಾರಿಯೇ 'ರಾಜರತ್ನಾಕರ' ಆಗುವ ಕಥೆ: ಎಲ್ಲರ ಮನೆ, ಮನಗಳನ್ನು ಮುಟ್ಟುವ ಸ್ಟೋರಿ ಇದು..!

ಸೋಮಾರಿಯೇ ‘ರಾಜರತ್ನಾಕರ’ ಆಗುವ ಕಥೆ: ಎಲ್ಲರ ಮನೆ, ಮನಗಳನ್ನು ಮುಟ್ಟುವ ಸ್ಟೋರಿ ಇದು..!

ನಮ್ಮ ಸುತ್ತಮುತ್ತ ಅದೆಷ್ಟೋ ಕಥೆಗಳು ಇರುತ್ತವೆ. ಅದೆಷ್ಟೋ ವಿಚಿತ್ರ ಕ್ಯಾರೆಕ್ಟರ್ ಗಳು ಇರ್ತಾರೆ. ಆ ಕ್ಯಾರೆಕ್ಟರ್ ಗಳನ್ನೆ ಇಟ್ಟುಕೊಂಡು ಸಿನಿಮಾ ಮಾಡಿದಾಗ ಸಾಕಷ್ಟು ಜನರನ್ನ ತಲುಪಲಿದೆ. ಅಂಥದ್ದೊಂದು ಕಥೆಯನ್ನ ಹೊತ್ತು ಬರ್ತಾ ಇರೋದೆ ರಾಜರತ್ನಾಕರ ಸಿನಿಮಾ. ಈ ಸಿನಿಮಾದಲ್ಲಿ ಬೆಂಗಳೂರಿನ ಮಧ್ಯಮ ವರ್ಗದವರ ಕಥೆಯನ್ನ ಒಳಗೊಂಡಿದೆ. ದುರಹಂಕಾರಿಯೊಬ್ಬನ ಕಥೆ.

ಸೋಮಾರಿತನದಿಂದ ಬಂದಂತ ದುರಹಂಕಾರದ ಪರಮಾವಧಿ. ಆದರೆ ಮುಂದೆ ಆತ ಜೀವನ ಕಟ್ಟಿಕೊಳ್ಳುವುದು ಹೇಗೆ ಎಂಬ ಕಥೆಯನ್ನ ರಾಜರತ್ನಕರದಲ್ಲಿ ತೋರಿಸಿಲಾಗಿದೆ. ಈ ರೀತಿಯ ಕ್ಯಾರೆಕ್ಟರ್ ಹಲವು ಮನೆಗಳಲ್ಲಿ ಇರಬಹುದು. ಅವರೆಲ್ಲರಿಗೂ ಈ ಕಥೆ ಕನೆಕ್ಟ್ ಆಗುತ್ತದೆ. ಇದೊಂದು ಪಕ್ಕ ಕಮರ್ಷಿಯಲ್ ಸಿನಿಮಾ ಆಗಿದೆ.

ಇದನ್ನೂ ಓದಿ:ಪಹಲ್ಗಾಂ ದಾಳಿಯಲ್ಲಿ ಸಾವನ್ನಪ್ಪಿದ್ದ ನೌಕಾ ಅಧಿಕಾರಿ ನಿವಾಸಕ್ಕೆ ರಾಹುಲ್​ ಭೇಟಿ

ಚೌಮುದ ಬ್ಯಾನರ್ ಅಡಿ ಚೊಚ್ಚಲ ಬಾರಿಗೆ ನಿರ್ಮಾಣವಾಗಿರುವ ರಾಜರತ್ನಾಕರ ಚಿತ್ರಕ್ಕೆ ಜಯರಾಮ ಸಿ.ಮಾಲೂರು ಅವರು ಬಂಡವಾಳ ಹೂಡಿದ್ದಾರೆ. ವೀರೇಶ್ ಬೊಮ್ಮ ಸಾಗರ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಇದು ಅವರ ನಿರ್ದೇಶನದಲ್ಲಿ ಬಂದಂತ ಮೊದಲ ಸಿನಿಮಾ. ವೀರೇಶ್ ಬೊಮ್ಮ ಸಾಗರ ಅವರು ಮೂಲತಃ ಬಾದಾಮಿ ಕಡೆಯವರು. ಹನ್ನೆರಡು ವರ್ಷದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಅನುಭವವಿದೆ. ಸಿನಿಮಾ, ಸೀರಿಯಲ್ ಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಒಂದೊಳ್ಳೆ ಕಥೆಯೊಂದಿಗೆ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ಚಾರಮಿನಾರ್, ಸಿದ್ಲಿಂಗು, ಸಿನಿಮಾದಲ್ಲಿ ಬಾಲ ನಟನಾಗಿ ಅಭಿನಯಿಸಿದ್ದ ಚಂದನ್ ರಾಜ್ ಪೂರ್ಣ ಪ್ರಮಾಣದ ನಾಯಕರಾಗಿ ಕಮರ್ಷಿಯಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಅಪ್ಸರ ಇದ್ದಾರೆ. ನಾಗರಾಜ್ ರಾವ್, ಯಮುನಾ ಶ್ರೀನಿಧಿ, ಚೇತನ್ ದುರ್ಗಾ, ಸಿದ್ದು, ಡಿಂಗ್ರಿ ನರೇಶ್ ಮುಖ್ಯ ಪಾತ್ರದಲ್ಲಿದ್ದಾರೆ.

ಇದನ್ನೂ ಓದಿ:ಅಕ್ರಮ ಗಣಿಗಾರಿಕೆ ಪ್ರಕರಣ: ಜರ್ನಾಧನ್​ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟ

ಈ ಸಿನಿಮಾದಲ್ಲಿ ಮೂರು ಫೈಟ್ ಅಂಡ್ ಮೂರು ಹಾಡುಗಳು ಇದಾವೆ. ಸಿದ್ದು ಕೆಂಚನ ಹಳ್ಳಿ ಛಾಯಾಗ್ರಹಣ, ಉಪ್ಪಿ2, ಚಮಕ್ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ಕೆಲಸ‌ ಮಾಡಿದ ಅನುಭವ ಇರುವ ಶಾಂತಕುಮಾರ್ ಈ ಸಿನಿಮಾಗೂ ಸಂಕಲನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಎರಡು ಸಾಹಸ ದೃಶ್ಯಗಳಿವೆ. ವಿಕ್ರಂ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಮೂರು ಸೊಗಸಾದ ಹಾಡುಗಳಿದ್ದು, ಹರ್ಷವರ್ದನ್ ರಾಜ್ ಸಂಗೀತ ನೀಡಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಹಾಗೂ ಮಂಜುನಾಥ್ ರಾವ್ ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್, ಹರಿಚರಣ್, ಆಂಟೋನಿ ದಾಸನ್ ಸೇರಿದಂತೆ ಹಲವರು ಹಾಡಿದ್ದಾರೆ. ಸಿನಿಮಾ ಶೀಘ್ರದಲ್ಲಿಯೇ ತೆರೆಗೆ‌ ಬರಲು ತಯಾರಿ ನಡೆಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments