Wednesday, August 27, 2025
HomeUncategorizedಅಕ್ರಮ ಗಣಿಗಾರಿಕೆ ಪ್ರಕರಣ: ಜರ್ನಾಧನ್​ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟ

ಅಕ್ರಮ ಗಣಿಗಾರಿಕೆ ಪ್ರಕರಣ: ಜರ್ನಾಧನ್​ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟ

ಹೈದರಬಾದ್ : ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್ ಮತ್ತು ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ನಡೆದ ಅದಿರಿನ ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ಧನ್​ ರೆಡ್ಡಿ ಅಪರಾಧಿ ಎಂದು ಸಿಬಿಐ ಕೋರ್ಟ್​ ಆದೇಶ ನೀಡಿದ್ದು. ಎಲ್ಲಾ ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಆಂದ್ರದಲ್ಲಿ ರಾಜಶೇಖರರೆಡ್ಡಿ, ಕರ್ನಾಟಕದಲ್ಲಿ ಯಡಿಯೂರಪ್ಪ ಸರ್ಕಾರ ಆಡಳಿತದಲ್ಲಿದ್ದಾಗ ಓಬಳಾಪುರಂ ಬೆಟ್ಟದಲ್ಲಿ ಗಣಿಗಾರಿಕೆ ನಡೆಸಲಾಗಿತ್ತು. ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್ ಮತ್ತು ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ಓಎಂಸಿ ಕಂಪನಿ ಗಣಿಗಾರಿಕೆ ನಡೆಸಿತ್ತು. ಓಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಮತ್ತು ಜನಾರ್ದನರೆಡ್ಡಿ ಈ ಕಂಪನಿಯ ಮುಖ್ಯಸ್ಥರಾಗಿದ್ದರು. ಇದನ್ನೂ ಓದಿ:ಅಕ್ರಮ ಗಣಿಗಾರಿಕೆ ಪ್ರಕರಣ: ಜರ್ನಾಧನ್​ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟ

ಓಬಳಾಪುರಂನಲ್ಲಿ ಗಣಿಗಾರಿಕೆ ನಡೆಸಲು ಈ ಕಂಪನಿ ಅರಣ್ಯ ಇಲಾಖೆ ಮತ್ತು ಗಣಿ ಇಲಾಖೆ ಅಕ್ರಮ ಎಸಗಿತ್ತು.  ನಿಗಧಿಗಿಂತ ಹೆಚ್ಚು ಅದರಿನ್ನು ಅಕ್ರಮವಾಗಿ ತೆಗೆದು ಸಾಗಾಣೆ ಆರೋಪ ಇವರ ಮೇಲಿತ್ತು. ಅಷ್ಟೇ ಅಲ್ಲದೇ  ಕರ್ನಾಟಕದ ಗಡಿಯನ್ನು ಒತ್ತುವರಿ‌ ಮಾಡಿ ಅದಿರನ್ನು ಲೂಟಿ‌ ಮಾಡಿದ್ದರು, ಬೆಟ್ಟದ ಮೇಲೆ ಇದ್ದ ಸುಂಕ್ಲಮ್ಮ ದೇವಸ್ಥಾನದ ಬುಡದಲ್ಲಿ ಲಕ್ಷಾಂತರ ಟನ್ ಐರನ್ ಓರ್ ಇದೆ ಎಂದು ದೇವಸ್ಥಾನವನ್ನು ಸ್ಥಳಾಂತರ ಮಾಡಿದ್ದರು.

ಇನ್ನು ಈ ಪ್ರಕರಣದಲ್ಲಿ ಶ್ರೀನಿವಾಸರೆಡ್ಡಿ, ಜನಾರ್ದನರೆಡ್ಡಿ, ಅಲಿಖಾನ್, ಗಣಿ ಇಲಾಖೆಯ ನಿರ್ದೇಶಕ ರಾಜಗೋಪಾಲ್, ಆಂದ್ರದ ಮಾಜಿ ಸಚಿವೆ ಸಬಿತಾ ಇಂದ್ರಾರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಕೃಪಾನಂದ, ಶ್ರೀಲಕ್ಷ್ಮೀ ಇದ್ದಾರೆ. ಈ ಪ್ರಕರಣದಲ್ಲಿ 3400ಕ್ಕೂ ಹೆಚ್ಚು ದಾಖಲೆಗಳ‌ ಪರಿಶೀಲನೆ ನಡೆಸಿರುವ ನ್ಯಾಯಾಲಯ.
219ಕ್ಕೂ ಹೆಚ್ವು ಸಾಕ್ಷಿಗಳ ವಿಚಾರಣೆ ನಡೆಸಿದ್ದು. ಜನಾರ್ಧನ್​ ರೆಡ್ಡಿ ಸೇರಿದಂತೆ ಪ್ರಕರಣದ ಆರೋಪಿಗಳನ್ನು ದೋಷಿ ಎಂದು ತೀರ್ಪು ನೀಡಿದೆ.

ಇದನ್ನೂ ಓದಿ:ಮಗಳ ಸಾವಿನ ಸೇಡು: ಪ್ರೀತಿಸಿ ಕೊಲೆ ಮಾಡಿದ್ದ ಯುವಕನ ತಂದೆಗೆ ಗುಂಡಿ ತೋಡಿದ ಅಪ್ಪ..!

ಸುಮಾರು 884 ಕೋಟಿ ಅಕ್ರಮ ಎಸಗಿದ್ದಾರೆ ಎಂದು ಸಾಬೀತಾಗಿದ್ದು. A1 ಆರೋಪಿ ಶ್ರೀನಿವಾಸ್​ ರೆಡ್ಡಿ, A2 ಜನಾರ್ದನರೆಡ್ಡಿ, A3 ರಾಜ್​ಗೋಪಾಲ್,​ A4 ಆಲಿಖಾನ್​, ಅಪರಾಧಿಗಳೆಂದು ನ್ಯಾಯಾಲಯ ಆದೇಶಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments