ನವದೆಹಲಿ: ಭಾರತವು ಫ್ರಾನ್ಸ್‌ನಿಂದ 26 ರಫೇಲ್ ಮರೈನ್ ಫೈಟರ್ ಜೆಟ್‌ಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದು. ಸುಮಾರು 63 ಸಾವಿರ ಕೋಟಿ ಮೌಲ್ಯದ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ. ಈ ಒಪ್ಪಂದದ ಅನ್ವಯ 2031ರ ವೇಳೆಗೆ ಫ್ರಾನ್ಸ್ ಯುದ್ದ ವಿಮಾನಗಳನ್ನು ಭಾರತಕ್ಕ ನೀಡಲಿದೆ.‘
ಭಾರತದಿಂದ ಫ್ರಾನ್ಸ್ ಒಟ್ಟು 26 ರಫೇಲ್ ಮರೈನ್ ಯುದ್ದ ವಿಮಾನಗಳಿಗೆ ಬೇಡಿಕೆ ಇಟ್ಟಿದ್ದು. ಇದರಲ್ಲಿ 22 ಸಿಂಗಲ್ ಸೀಟರ್ ಜೆಟ್ಗಳಿವೆ. ಉಳಿದ ನಾಲ್ಕು ವಿಮಾನಗಳು ಅವಳಿ ಆಸನಗಳನ್ನು ಹೊಂದಿದ್ದು. ಇವನ್ನು ತರಬೇತಿಗೆ ಎಮದು ಉಪಯೋಗಿಸಲಾಗುತ್ತದೆ. ಈ ಒಪ್ಪಂದವೂ ಯುದ್ದ ವಿಮಾನದ ನಿರ್ವಹಣೆ, ಲಾಜಿಸ್ಟಿಕ್ ಬೆಂಬಲ ಮತ್ತು ಸಿಬ್ಬಂದಿಗಳ ತರಬೇತಿ ಸೇರಿದಂತೆ ಹಲವನ್ನು ಹೊಂದಿದೆ.
ಇದನ್ನೂ ಓದಿ :ಕಾಂಗ್ರೆಸ್ ಸಮಾವೇಶದಲ್ಲಿ ಪ್ರತಿಭಟನೆ: ASP ಮೇಲೆ ಕೈ ಎತ್ತಿದ ಸಿಎಂ ಸಿದ್ದರಾಮಯ್ಯ
ರಫೇಲ್ ಮರೈನ್ ಜೆಟ್ನ ವಿಶೇಷತೆಗಳು
ರಫೇಲ್ ಮರೈನ್ ಜೆಟ್ನ್ನು ವಿಶ್ವದ ಅತ್ಯಂತ ಮುಂದುವರಿದ ನೌಕಾ ಯುದ್ಧ ವಿಮಾನಗಳಲ್ಲಿ ಒಂದೆಂದು ಪರಿಗಣಿಸಲಾಗಿದ್ದು. ಇದನ್ನು ಫ್ರೆಂಚ್ ನೌಕಪಡೆ ಮಾತ್ರ ಬಳಸುತ್ತಿದೆ. ಯುದ್ದ ವಿಮಾನಗಳ ಗುಂಪಿನಲ್ಲಿ ಈ ಯುದ್ದ ವಿಮಾನವನ್ನು ಸಫ್ರಾನ್ ಗ್ರೂಪ್ಸ್ಗೆ ಸೇರಿಸಿದ್ದು. ಬಲವರ್ಧಿತ ಲ್ಯಾಂಡಿಗ್ ಗೇರ್ಗಳನ್ನು ಇದು ಹೊಂದಿದೆ. ಜೊತೆಗೆ ಮಡಿಸುವ ರೆಕ್ಕೆಗಳು ಮತ್ತು ಕಠಿಣ ಪರಿಸ್ಥಿತಿಗಳಲ್ಲಿ ಡೆಕ್ ಲ್ಯಾಂಡಿಂಗ್ ಮತ್ತು ಟೈಲ್‌ಹೂಕ್‌ಗಳನ್ನು ತಡೆದುಕೊಳ್ಳವ ಬಲವರ್ಧಿತ ಅಂಡರ್‌ಕ್ಯಾರೇಜ್ ಅನ್ನು ಸಹ ಒಳಗೊಂಡಿದೆ.
ಇದನ್ನೂ ಓದಿ :ಕೊಪ್ಪಳ: ಬಾಲ್ಯ ವಿವಾಹಕ್ಕೆ ಬಂದು ಮುಜುಗರಕ್ಕೀಡಾದ ಹಾಲಿ ಶಾಸಕ ಮತ್ತು ಮಾಜಿ ಸಚಿವ
ಈ ಫೈಟರ್ ಜೆಟ್ನ್ನು ನೌಕಪಡೆಯ ಯುದ್ದ ವಿಮಾನ ವಾಹಕ ನೌಕೆಗಳಾದ ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ವಿಕ್ರಮಾದಿತ್ಯಗಳಲ್ಲಿ ನಿಯೋಜಿಸಲಾಗುವುದು, ಇದು ಸಮುದ್ರ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಹಿಂದೂ ಮಹಾಸಾಗರದಲ್ಲಿ ರಕ್ಷಣೆಯನ್ನು ಹೆಚ್ಚಿಸಲಿದೆ.