Thursday, August 28, 2025
HomeUncategorizedಸಂವಿಧಾನದ ಬಗ್ಗೆ ಮಾತನಾಡುವ ಸರ್ಕಾರ ಧಾರ್ಮಿಕ ಹಕ್ಕಿನ ಹರಣ ಮಾಡಿದೆ: ಸುಬುಧೇಂದ್ರ ತೀರ್ಥ ಶ್ರೀಗಳು

ಸಂವಿಧಾನದ ಬಗ್ಗೆ ಮಾತನಾಡುವ ಸರ್ಕಾರ ಧಾರ್ಮಿಕ ಹಕ್ಕಿನ ಹರಣ ಮಾಡಿದೆ: ಸುಬುಧೇಂದ್ರ ತೀರ್ಥ ಶ್ರೀಗಳು

ರಾಯಚೂರು : ರಾಜ್ಯದಲ್ಲಿ ಜನಿವಾರ ವಿವಾದ ಕಳೆದ ಮೂರು ದಿನಗಳಿಂದ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇದರ ನಡುವೆ ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀಗಳು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು. ಸಂವಿಧಾನದ ಬಗ್ಗೆ ಮಾತನಾಡುವ ಸರ್ಕಾರ ಇಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹರಣ ಮಾಡುತ್ತಿದೆ. ಇಂದು ಅಂತ್ಯಂತ ಖಂಡನೀಯ ಎಂದು ಹೇಳಿದರು.

ಶಿವಮೊಗ್ಗ, ಬೀದರ್​ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿರುವ ಘಟನೆ ಭಾರೀ ಸಂಚಲನ ಸೃಷ್ಟಿಸಿತ್ತು. ಇದರ ಕುರಿತು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಪೀಠಾಧೀಶ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದು. ” ಜನಿವಾರ ಧರ್ಮ ಮತ್ತ ಸಂಪ್ರದಾಯದ ಸಂಕೇತವಾಗಿದೆ. ಆದರೆ ಅದನ್ನು ಕತ್ತರಿಸಿ ಡಸ್ಟ್​ಬಿನ್​ನಲ್ಲಿ ಎಸೆದಿರುವುದನ್ನು ನಾವು ಖಂಡಿಸುತ್ತೇವೆ. ಭಾರತದಲ್ಲಿ ಅವರವರ ಧರ್ಮವನ್ನು ಆಚರಿಸುವುದಕ್ಕೆ ಸಂವಿಧಾನದತ್ತ ಅವಕಾಶ ಇದೆ. ಆದರೆ ಇಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹರಣ ಮಾಡಿದ್ದಾರೆ.

ಇದನ್ನೂ ಓದಿ :ಪತಿಗೆ ಮಸ್ತಾನ ಎಂಬ ಉಗ್ರನ ಸಂಪರ್ಕವಿದೆ, NIA ಮೂಲಕ ತನಿಖೆ ಮಾಡಿಸಿ: ಓಂ ಪ್ರಕಾಶ್​ ಪತ್ನಿ ಪಲ್ಲವಿ

ಸಂವಿಧಾನದ ಬಗ್ಗೆ ಮಾತನಾಡುವ ಸರ್ಕಾರ ಈ ವಿಷಯದಲ್ಲಿ ದ್ವಂದ ನಿಲುವು ತಳೆದುಕೊಂಡಿದೆ. ಯಾವುದೇ ಸಮಾಜದ, ಧರ್ಮ ವಿರೋಧಿ ಚಟುವಟಿಕೆ ಅತ್ಯಂತ ಹೇಯ ಹಾಗೂ ಅಸಹ್ಯವಾದದ್ದು. ಈ ಘಟನೆಯನ್ನು ನಾವು ಒಕ್ಕೊರಲಿನಿಂದ ವಿರೋಧಿಸುತ್ತೇವೆ. ಇದು ಪುನರಾವರ್ತನೆ ಆಗದಂತೆ ಸರ್ಕಾರ ಎಚ್ಚರ ವಹಿಸಬೇಕು.  ವಿದ್ಯಾರ್ಥಿ ಭವಿಷ್ಯ ಹಾಳಾಗಿದೆ ಹಾಗೂ ಧರ್ಮಕ್ಕೆ ಚ್ಯುತಿ ಬಂದಿದೆ. ಶಾಸಕರುಗಳು ಸಚಿವರೋ ತಪ್ಪಾಯ್ತು ಎಂದು ಕೇಳುತ್ತಾರೆ ಅಥವಾ ಎಲ್ಲಾ ಸರಿಪಡಿಸುತ್ತೇವೆ ಎಂದು ಕಣ್ಣೋರೆಸುವಂತೆ ಮಾತನಾಡುತ್ತಾರೆ. ಆದರೆ ಈ ಧರ್ಮ ವಿರೋಧಿ ವಿಚಾರವನ್ನು ನಾವು ಅತ್ಯಂತ ತೀವ್ರವಾಗಿ ಖಂಡಿಸುತ್ತೇವೆ” ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಶ್ರೀಗಳು ” ಇದೇ ರೀತಿ ಮುಂದುವರೆದರೆ ಮುಂಬರುವ ದಿನಗಳಲ್ಲಿ ಸಮಸ್ತ ಹಿಂದೂ ಸಮಾಜ ಎಚ್ಚೆತ್ತು ಪ್ರತಿಭಟನೆ ಮಾಡುತ್ತದೆ,  ಈ ಎಚ್ಚರಿಕೆಯನ್ನು ಅತ್ಯಂತ ಕಠುವಾಗಿ ಕರ್ನಾಟಕ ಸರ್ಕಾರಕ್ಕೆ ನೀಡುತ್ತಿದ್ದೇವೆ. ಕರ್ನಾಟಕ ಸರ್ವ ಧರ್ಮಗಳ ಶಾಂತಿಯ ಹೂದೋಟದಂತಿದೆ. ಇಲ್ಲಿ ಧರ್ಮ ವಿರೋಧಿಯಾಗಿ ನಡೆದುಕೊಳ್ಳಬಾರದು.

ಇದನ್ನೂ ಓದಿ :ಕುಟುಂಬ ಸಮೇತವಾಗಿ ಭಾರತಕ್ಕೆ ಬಂದಿಳಿದ ಅಮೆರಿಕಾ ಉಪಾಧ್ಯಕ್ಷ ಜೆ.ಡಿ ವಾನ್ಸ್​

ನಡೆದಿರುವ ಘಟನೆಯಿಂದ ಸಮಸ್ತೆ ಹಿಂದೂ ಸಮಾಜಕ್ಕೆ ತೀವ್ರ ಆಘಾತವಾಗಿದೆ. ಇದನ್ನು ಸರ್ಕಾರ ತೀವ್ರವಾಗಿ ಗಮನಿಸಿ ವಿದ್ಯಾರ್ಥಿಗೆ ಸೂಕ್ತವಾದ ನಷ್ಟ ಪರಿಹಾರ‌ ನೀಡಬೇಕು. ಇಡೀ ರಾಜ್ಯಾದ್ಯಂತ ಅವರವರು ಅವರವರ ಚಿಹ್ನೆ ಹಾಗೂ ಧರ್ಮಗಳನ್ನು ಪಾಲಿಸುತ್ತಿರುವಾಗ. ಅವರ್ಯಾರಿಗೂ ಇಲ್ಲದಂತದ್ದು ವಿಪ್ರ ಸಮುದಾಯಕ್ಕೆ ಮಾತ್ರ ಈ ರೀತಿ ಮಾಡಿದ್ದಾರೆ. ಇದು ವಿಪ್ರ ಸಮುದಾಯಕ್ಕೆ ನಡೆದ ಅನ್ಯಾಯ ಎಂದು ವಿರೋಧಿಸುತ್ತೇನೆ” ಎಂದು ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments