Friday, September 19, 2025
HomeUncategorizedಚಾಮರಾಜನಗರದಲ್ಲಿ ಸೋಂಕಿತರ ಸಂಖ್ಯೆ 132ಕ್ಕೇರಿಕೆ: ಒಂದೇ ಕುಟುಂಬದ ನಾಲ್ವರು,  ಗರ್ಭಿಣಿಗೂ ವೈರಸ್ 

ಚಾಮರಾಜನಗರದಲ್ಲಿ ಸೋಂಕಿತರ ಸಂಖ್ಯೆ 132ಕ್ಕೇರಿಕೆ: ಒಂದೇ ಕುಟುಂಬದ ನಾಲ್ವರು,  ಗರ್ಭಿಣಿಗೂ ವೈರಸ್ 

ಚಾಮರಾಜನಗರ  : ಜಿಲ್ಲೆಯಲ್ಲಿ12 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಚಾಮರಾಜನಗರ ಜಿಲ್ಲೆಯ ಸೋಂಕಿತರ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಸದ್ಯಕ್ಕೆ  ಸಕ್ರಿಯವಾಗಿ 101 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 

ಚಾಮರಾಜನಗರ ಜಿಲ್ಲೆ  ಕೊಳ್ಳೇಗಾಲ ಮಂಜುನಾಥನಗರ ನಿವಾಸಿಯಾದ P18560 ಇಡೀ ಕುಟುಂಬಕ್ಕೆ ಇಂದು ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 14 ವರ್ಷದ ಬಾಲಕನೂ ಇದ್ದಾನೆ. ಚಾಮರಾಜನಗರದ ರೆಹಮತ್ ನಗರದಲ್ಲಿ ತುಂಬು ಗರ್ಭಿಣಿಗೆ ಇಂದು ಕೋವಿಡ್ ಇರುವುದು ದೃಢಪಡುವ ಮೂಲಕ ಜಿಲ್ಲೆಯಲ್ಲಿ ಒಟ್ಟು ಮೂವರು ಗರ್ಭಿಣಿಯರು ಸೋಂಕಿತರಾಗಿದ್ದಾರೆ.

ಇನ್ನು, ಯಳಂದೂರಿನ ಸಾಮಾಜಿಕ ಕಾರ್ಯಕರ್ತ ಕೆಲ ದಿನಗಳ ಹಿಂದೆ ಸೋಂಕು ತಗುಲಿಸಿಕೊಂಡಿದ್ದರು. ಇಂದು ಅವರ ಪತಿ ಹಾಗೂ ಮಗುವಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇಂದಿನ 12 ಪ್ರಕರಣಗಳಲ್ಲಿ ಕೊಳ್ಳೇಗಾಲ ಹಾಗೂ ಯಳಂದೂರಿನಲ್ಲಿ ತಲಾ 4, ಚಾಮರಾಜನಗರದಲ್ಲಿ 1, ಗುಂಡ್ಲುಪೇಟೆಯಲ್ಲಿ 3 ಪ್ರಕರಣ ಪತ್ತೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments