Sunday, August 31, 2025
HomeUncategorizedಅಭಿಮಾನಿಗಳಿಗೆ ಕಿಚ್ಚನಿಂದ ಬಿಗ್​ ಸಪ್ರೈಸ್​: 'ಬಿಲ್ಲಾ ರಂಗ ಬಾಷಾ' ಸಿನಿಮಾ ಅಪ್ಡೇಟ್​..!

ಅಭಿಮಾನಿಗಳಿಗೆ ಕಿಚ್ಚನಿಂದ ಬಿಗ್​ ಸಪ್ರೈಸ್​: ‘ಬಿಲ್ಲಾ ರಂಗ ಬಾಷಾ’ ಸಿನಿಮಾ ಅಪ್ಡೇಟ್​..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಸಕ್ಸಸ್​ ಬಳಿಕ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಥ್ರಿಲ್ಲಿಂಗ್​ ನ್ಯೂಸ್​ ಕೊಟ್ಟಿದ್ದು. ಬಿಲ್ಲ,ರಂಗ,ಬಾಷಾ ಸಿನಿಮಾ ಬಗ್ಗೆ ಬಿಗ್​ ಅಪ್ಡೇಟ್​ ಕೊಟ್ಟಿದ್ದಾರೆ. ಏನಿದು ಈ ಸರ್​ಪ್ರೈಸ್​ ಅಂತೀರಾ, ಈ ಸ್ಟೋರಿ ನೋಡಿ..!

ಹೌದು.. ಕಳೆದ ಕ್ರಿಸ್​ಮಸ್​ ಹಬ್ಬದ ಸಂಭ್ರಮದಲ್ಲಿ ತೆರೆಗೆ ಬಂದಿದ್ದ ಮ್ಯಾಕ್ಸ್​ ಸಿನಿಮಾ ಬಾಕ್ಸಾಫೀಸ್​ ಶೇಕ್​ ಮಾಡಿತ್ತು. ಅಂದಾಜು 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಸುದೀಪ್ ಕರಿಯರ್‌ನಲ್ಲೇ ಬೆಸ್ಟ್ ಸಿನಿಮಾ ಎನಿಸಿಕೊಂಡಿತ್ತು. ಸಿನಿಮಾ ಸೀಕ್ವೆಲ್ ಮಾಡುವಂತೆ ಅಭಿಮಾನಿಗಳು ನೆಚ್ಚಿನ ನಟನನ್ನು ಕೇಳುತ್ತಿದ್ದಾರೆ.

ಆದರೆ ಇದರ ನಡುವೆ ನಟ ಸುದೀಪ್​ ಬಿಲ್ಲ ರಂಗ ಬಾಷಾ ಸಿನಿಮಾ ಬಗ್ಗೆ ಅಪ್ಡೇಟ್​ ನೀಡಿದ್ದು. ಇದೇ ಏಪ್ರೀಲ್​ 16ರಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಮಾರ್ಚ್ 2ನೇ ವಾರದಿಂದ ‘ಬಿಲ್ಲ ರಂಗ ಬಾಷ’ ಸಿನಿಮಾ ಚಿತ್ರೀಕರಣ ಆರಂಭ ಎಂದು ಕಿಚ್ಚ ಈ ಹಿಂದೆ ಬರೆದುಕೊಂಡಿದ್ದರು. ಆದರೆ ಮಾರ್ಚ್ ಮುಗಿದು ಏಪ್ರಿಲ್ ಬಂದರೂ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅಭಿಮಾನಿಗಳು ಅಸಮಾಧಾನಗೊಂಡಿದ್ದರು. ಇದೀಗ ದಿಢೀರನೆ ಟ್ವೀಟ್ ಮಾಡಿ ಕಿಚ್ಚ ಸರ್‌ಪ್ರೈಸ್ ಕೊಟ್ಟಿದ್ದಾರೆ.

ಇದನ್ನೂ ಓದಿ :ಥೈಲ್ಯಾಂಡ್​ನಲ್ಲಿ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ..!

ಬಿಲ್ಲ ರಂಗ ಬಾಷ’ ಚಿತ್ರದಲ್ಲಿ ಸುದೀಪ್ ಖಡಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದಕ್ಕಾಗಿ ಬಾಡಿ ಬಿಲ್ಡ್ ಮಾಡುತ್ತಿದ್ದಾರೆ. ಹುರಿಗಟ್ಟಿದ ತಮ್ಮ ದೇಹದ ಫೋಟೊಗಳನ್ನು ಹಂಚಿಕೊಂಡಿರುವ “ಕಿಚ್ಚ ಏಪ್ರಿಲ್ 16ರಂದು” ಎಂದು ಬರೆದು ಕುತೂಹಲ ಮೂಡಿಸಿದ್ದಾರೆ. ಅಂದರೆ ಅದೇ ದಿನದಂದು ‘ಬಿಲ್ಲ ರಂಗ ಬಾಷ’ ಸಿನಿಮಾ ಶುರುವಾಗುವುದು ಖಚಿತವಾಗಿದೆ. ಬಹಳ ದೊಡ್ಡಮಟ್ಟದಲ್ಲಿ ಈ ಸಿನಿಮಾ ಮೂಡಿ ಬರಲಿದೆ.

ಬಹಳ ಹಿಂದೆಯೇ ಅನೂಪ್ ಭಂಡಾರಿ ‘ಬಿಲ್ಲ ರಂಗ ಬಾಷ’ ಸಿನಿಮಾ ಘೋಷಣೆ ಮಾಡಿದ್ದರು. ಆದರೆ ಬಳಿಕ ಸುದೀಪ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ನಡುವೆ ಅನೂಪ್ ‘ವಿಕ್ರಾಂತ್ ರೋಣ’ ಸಿನಿಮಾ ಮಾಡಿ ಮುಗಿಸಿದ್ದರು. ಟೈಟಲ್‌ನಿಂದಲೇ ‘ಬಿಲ್ಲ ರಂಗ ಬಾಷ’ ಬಹಳ ಕುತೂಹಲ ಮೂಡಿಸಿದೆ. ಅಂದಹಾಗೆ ಚಿತ್ರದಲ್ಲಿ ಭವಿಷ್ಯದ ಕಾಲಘಟ್ಟದ ಕಥೆಯನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕಾಗಿ ಹೊಸ ಪ್ರಪಂಚವನ್ನೇ ಸೃಷ್ಟಿಸುವ ಪ್ರಯತ್ನ ನಡೀತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments