Sunday, August 24, 2025
Google search engine
HomeUncategorizedಉಚಿತ ಭಾಗ್ಯಗಳಿಂದ ಜನರು ಕೆಲಸ ಮಾಡಲು ಸಿದ್ದರಿಲ್ಲ : ಸುಪ್ರೀಂ ಕೋರ್ಟ್​

ಉಚಿತ ಭಾಗ್ಯಗಳಿಂದ ಜನರು ಕೆಲಸ ಮಾಡಲು ಸಿದ್ದರಿಲ್ಲ : ಸುಪ್ರೀಂ ಕೋರ್ಟ್​

ದೆಹಲಿ : ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಉಚಿತ ಕೊಡುಗೆಗಳು ಸಾಕಷ್ಟು ಸದ್ದು ಮಾಡುತ್ತಿದ್ದು. ಈ ಫ್ರೀ ನೀಡುವ ಪದ್ದತಿಯನ್ನು ಸುಪ್ರೀಂಕೋರ್ಟ್​ ಟೀಕಿಸಿದೆ. ಉಚಿತವಾಗಿ ಜನರು ಯೋಜನೆಗಳನ್ನು ಪಡೆದರೆ ಕೆಲಸ ಮಾಡಲು ಸಿದ್ದರಿರುವುದಿಲ್ಲ ಎಂದು ಹೇಳಿದೆ.

ನಗರ ಪ್ರದೇಶಗಳಲ್ಲಿ ನಿರಾಶ್ರಿತ ವ್ಯಕ್ತಿಗಳ ಆಶ್ರಯ ಹಕ್ಕಿಗೆ ಸಂಬಂಧಿಸಿದ ವಿಷಯವನ್ನು ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಬಿಆರ್​.ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠದಿಂದ ಈ ಹೇಳಿಕೆ ಬಂದಿದ್ದು. “ದುರದೃಷ್ಟವಶಾತ್, ಈ ಉಚಿತ ಕೊಡುಗೆಗಳಿಂದಾಗಿ… ಜನರು ಕೆಲಸ ಮಾಡಲು ಸಿದ್ಧರಿಲ್ಲ. ಅವರಿಗೆ ಉಚಿತ ಪಡಿತರ ಸಿಗುತ್ತಿದೆ. ಯಾವುದೇ ಕೆಲಸ ಮಾಡದೆ ಅವರು ಹಣವನ್ನು ಪಡೆಯುತ್ತಿದ್ದಾರೆ”

ಇದನ್ನೂ ಓದಿ :ಪತ್ನಿಯ ಅನುಮತಿ ಇಲ್ಲದ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅಪರಾಧವಲ್ಲ: ಹೈಕೋರ್ಟ್​

ಅವರ ಬಗ್ಗೆ ನಿಮಗಿರುವ ಕಾಳಜಿಯನ್ನು ನಾವು ತುಂಬಾ ಮೆಚ್ಚುತ್ತೇವೆ ಆದರೆ ಅವರನ್ನು ಸಮಾಜದ ಮುಖ್ಯವಾಹಿನಿಯ ಭಾಗವನ್ನಾಗಿ ಮಾಡಿ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶ ನೀಡುವುದು ಉತ್ತಮವಲ್ಲವೇ” ಎಂದು ನ್ಯಾಯಪೀಠ ಹೇಳಿದೆ.

ನಗರ ಬಡತನ ನಿರ್ಮೂಲನಾ ಅಭಿಯಾನವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ತೊಡಗಿದೆ ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಪೀಠಕ್ಕೆ ತಿಳಿಸಿದರು. ಈ ಅಭಿಯಾನವು ನಗರ ಪ್ರದೇಶದ ನಿರಾಶ್ರಿತರಿಗೆ ವಸತಿ ಒದಗಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲಿದೆ.

ನಗರ ಬಡತನ ನಿರ್ಮೂಲನಾ ಅಭಿಯಾನವನ್ನು ಎಷ್ಟು ಸಮಯದೊಳಗೆ ಜಾರಿಗೆ ತರಲಾಗುತ್ತದೆ ಎಂಬುದನ್ನು ಕೇಂದ್ರ ಸರ್ಕಾರ ಪರಿಶೀಲಿಸಬೇಕೆಂದು ನ್ಯಾಯಪೀಠವು ಅಟಾರ್ನಿ ಜನರಲ್ ಅವರನ್ನು ಕೇಳಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments