Tuesday, September 2, 2025
HomeUncategorizedನಿಮ್ಮ ಮಕ್ಕಳನ್ನು ಬೇರೆಯವರ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ: ನರೇಂದ್ರ ಮೋದಿ

ನಿಮ್ಮ ಮಕ್ಕಳನ್ನು ಬೇರೆಯವರ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ: ನರೇಂದ್ರ ಮೋದಿ

ದೆಹಲಿ: ಪ್ರಧಾನಿ ಮೋದಿ ಪ್ರತಿವರ್ಷವೂ ಬೋರ್ಡ್​ ಪರೀಕ್ಷೆಗೂ ಕೆಲದಿನಗಳ ಮುನ್ನ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಸಿದ್ದತೆ ಕುರಿತು ಚರ್ಚಿಸುತ್ತಾರೆ. ಈ ಚರ್ಚೆಯಲ್ಲಿ ಮೋದಿ ಮಕ್ಕಳ ಜೊತೆ ಚರ್ಚೆ ನಡೆಸಿ ಅವರಿಗೆ ಆತ್ಮ ವಿಶ್ವಾಸ ತುಂಬುತ್ತಾರೆ. ಪ್ರತಿಬಾರಿಯಂತೆ ಈ ಬಾರಿಯೂ ಪ್ರಧಾನಿ ಮೋದಿ 8ನೇ ಆವೃತ್ತಿಯ ಪರೀಕ್ಷ ಪೇ ಚರ್ಚಾದಲ್ಲಿ ಹಲವು ರಾಜ್ಯಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಈ ವೇಳೆ ಪೋಷಕರಿಗೆ ಸಲಹೆ ನೀಡಿದ ಮೋದಿ ಮಕ್ಕಳನ್ನು ಮಾಡೆಲ್​ಗಳಂತೆ ಪ್ರದರ್ಶನಕ್ಕೆ ಇಡಬೇಡಿ. ಬೇರೆಯವರ ಮಕ್ಕಳನ್ನು ನೋಡಿ ಅವರಂತೆ ತಮ್ಮ ಮಕ್ಕಳು ಇರಬೇಕು ಎಂದು ಬಯಸಬೇಡಿ. ನಿಮ್ಮ ಮಕ್ಕಳಿಗೆ ಯಾವ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೋ ಅದೇ ವಿಚಾರಗಳ ಬಗ್ಗ ಅಧ್ಯಯನ ನಡೆಸಲು ಅನುವು ಮಾಡಿಕೊಡಿ ಎಂದು ಹೇಳಿದರು.

ಇದನ್ನೂ ಓದಿ :ಊಟದ ವಿಚಾರಕ್ಕೆ ಜಗಳ: ಪೊಲೀಸ್ ಠಾಣೆಗೆ ಕರೆಸಿ ಮದುವೆ ಮಾಡಿಸಿದ ಪೊಲೀಸರು

ಈ ಕುರಿತು ಮಕ್ಕಳಿಗೂ ಸಲಹೆ ನೀಡಿದ ಪ್ರಧಾನಿ ಮೋದಿ ‘ಮಕ್ಕಳು ಕೂಡ ತಮ್ಮ ಆಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬೇಡ, ನಿಮ್ಮ ಆಸಕ್ತಿಯ ವಿಷಯದ ಕುರಿತು ಎಲ್ಲರೊಡನೆ ಮುಕ್ತಾವಾಗಿ ಮಾತನಾಡಿ. ಪೋಷಕರು ಕೂಡ ನಿಮ್ಮ ಮಕ್ಕಳ ಮೇಲೆ ಈ ಕುರಿತು ಯಾವುದೇ ಒತ್ತಡ ಹಾಕಬೇಡಿ. ಪ್ರತಿಯೊಬ್ಬ ಮಕ್ಕಳು ಒಂದಲ್ಲಾ ಒಂದು ಕ್ಷೇತ್ರದಲ್ಲಿ ಉತ್ತಮವಾಗಿರುತ್ತಾರೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments