Friday, August 22, 2025
Google search engine
HomeUncategorizedಸಾಲಮನ್ನಾ ಆಶ್ವಾಸನೆ ಕೊಟ್ಟು, 'ಎಲ್ಲಿ ಮಲಗಿದ್ಯಮ್ಮಾ' ವಿವಾದದ ಬಗ್ಗೆ ಸಿಎಂ ಸ್ಪಷ್ಟನೆ

ಸಾಲಮನ್ನಾ ಆಶ್ವಾಸನೆ ಕೊಟ್ಟು, ‘ಎಲ್ಲಿ ಮಲಗಿದ್ಯಮ್ಮಾ’ ವಿವಾದದ ಬಗ್ಗೆ ಸಿಎಂ ಸ್ಪಷ್ಟನೆ

‘ಎಲ್ಲಿ ಮಲಗಿದ್ಯಮ್ಮಾ’ ಅನ್ನೋ ಪದ ಬಳಕೆ ಮಹಾ ಅಪರಾಧ ಅಂತ ಅನಿಸಿದ್ರೆ, ಆ ಪದದ ಬಳಕೆಯಿಂದ ನೋವಾಗಿದ್ರೆ ನಾನು ಆ ಪದವನ್ನು ಹಿಂಪಡೆಯುತ್ತೇನೆ ಅಂತ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲಮನ್ನಾದ ಆಶ್ವಾಸನೆ ಕೊಟ್ಟು, ‘ಎಲ್ಲಿ ಮಲಗಿದ್ಯಮ್ಮಾ’ ವಿವಾದದ ಬಗ್ಗೆ ಸಿಎಂ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. 
”ನಾನು ಆ ಹೆಣ್ಣುಮಗಳಿಗೆ ತಾಯಿ ಅಂತ ಪದ ಬಳಸಿದ್ದೇನೆ. ಅಲ್ಲಾ ತಾಯಿ ಇಷ್ಟು ದಿನ ಎಲ್ಲಿ ಮಲಗಿದ್ದೆ, ಇಷ್ಟು ದಿನ ಎಲ್ಲಿಗೆ ಹೋಗಿದ್ದೆ ಅಂತ ಹೇಳಿದ್ದೆ. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಗ್ರಾಮೀಣ ಪ್ರದೇಶದಿಂದ ಬಂದವನು. ಆದ್ರಿಂದ ಆ ಪದ ಬಂತು ಅಷ್ಟೇ ಅಂದ್ರು.
ಇವತ್ತು ರಾಜ್ಯದ ಕೆಲವು ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕಬ್ಬು ಬೆಳೆಗಾರರ ಹೆಸರಿನಲ್ಲಿ ಕೆಲವು ಗುಂಪುಗಳು ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಿವೆ. ಸರ್ಕಾರದ ವತಿಯಿಂದ ನಾವು ಎಲ್ಲರಿಗೂ ಶಾಂತ ರೀತಿಯ ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದೇವೆ. ಕಬ್ಬು ಬೆಳೆಗಾರರ ಹೆಸರಿನಲ್ಲಿ ಕೆಲವು ಗುಂಪುಗಳು ನಡೆಸುತ್ತಿರುವ ಪ್ರತಿಭಟನೆ ಏತಕ್ಕಾಗಿ ಅಂತ ನನಗೆ ಗೊತ್ತಿಲ್ಲ. ನಮ್ಮ ಮೈತ್ರಿ ಸರ್ಕಾರ ರೈತರಿಗೆ ಯಾವ ರೀತಿ ಅವಮಾನ ಮಾಡಿದೆ ಅನ್ನುವ ಒಂದೇ ಒಂದು ಉದಾಹರಣೆ ಇಲ್ಲ. ನಾವು ಕಾಲಕಾಲಕ್ಕೆ ರೈತ ಮುಖಂಡರನ್ನ ಕರೆದು ಮಾತನಾಡಿದ್ದೇವೆ. ಆದ್ರೆ ಇದು ಯಾತಕ್ಕೆ ಹೀಗೆ ಇವ್ರು ಮಾಡುತ್ತಿದ್ದಾರೆ ಗೊತ್ತಾಗ್ತಿಲ್ಲ. ನಾನು ಎಲ್ಲವನ್ನೂ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ” ಅಂತ ಹೇಳಿದ್ರು.

ಮನವಿಗೆ ಸ್ಪಂದಿಸಿಲ್ಲ :  ನಾನು ಬಾಯಿಚಪಲಕ್ಕೆ ಮಾತಾಡಿಲ್ಲ, ಯಾರಿಗೂ ಅಗೌರವ ಸೂಚಿಸಲು ಮಾತಾಡಲಿಲ್ಲ. ಶಬ್ಧ ಪ್ರಯೋಗದ ಬಗ್ಗೆ ನನಗೆ ಅರಿವಿದೆ. ನಿನ್ನೆ ನಾನು ಏನು ಮಾತಾಡಿದ್ದೇನೆ ಅನ್ನುವ ಅರಿವು ನನಗುಂಟು. ಶಾಂತಿಯುತ ಪ್ರತಿಭಟನೆಗೆ ನಾವು ಅಡ್ಡಿಪಡಿಸಿಲ್ಲ. ನಾನು ಎಲ್ಲರಿಗೂ ಬೆಂಗಳೂರಿಗೆ ಬನ್ನಿ ಅಂತ ದೂರವಾಣಿ ಮೂಲಕ ತಿಳಿಸಿದ್ದೆ. ಒಂದು ವೇಳೆ ಅವಶ್ಯಕತೆ ಬಿದ್ರೆ ನಾನೇ ಬೆಳಗಾವಿಗೆ ಬಂದು ಮಾತಾಡ್ತೇನೆ. ಡಿಸಿ ಮುಖಾಂತರ ಎಲ್ಲಾ ರೈತರಿಗೆ ಬೆಂಗಳೂರಿಗೆ ಬನ್ನಿ ಅಂತ ಮನವಿ ಮಾಡಿದ್ದೆ. ಬಸ್ ಚಾಜ್೯ ಸಮೇತ ಎಲ್ಲ ವ್ಯವಸ್ಥೆ ಮಾಡ್ತೀನಿ ಅಂತ ಹೇಳಿದ್ದೆ. ಆದರೆ ಅವರು ಮನವಿಗೆ ಸ್ಪಂದಿಸಲಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು.

ಆ ಹೆಣ್ಣುಮಗಳು ಜನರಿಗೆ ಅವಮಾನ ಮಾಡಿದ್ದಾಳೆ..! : ಮುಧೋಳದಲ್ಲಿ ನನ್ನ ಪ್ರತಿಕೃತಿ ಮಾಡಿ, ನನ್ನ ಎರಡೆರಡು ಫೋಟೋಳನ್ನು ಇಟ್ಟು ಕೆಲವು ಗುಂಪುಗಳು ಕೊಡಲಿಯಿಂದ ಹೊಡೆಯುತ್ತಿರುವ ದೃಶ್ಯ ನೋಡಿದೆ. ಅದನ್ನು ದೃಶ್ಯ ಮಾಧ್ಯಮಗಳು ಪದೇಪದೇ ಬಿತ್ತರಿಸಿದ್ರೆ, ನನ್ನ ಮೇಲೆ ಅದೆಂತಹ ಪರಿಣಾಮ ಬೀರುತ್ತದೆ ಅಂತ ಯೋಚನೆ ಮಾಡಿದ್ದೀರಾ? ಅಂತಹ ತಪ್ಪು ನಾನೇನು ಮಾಡಿದ್ದೇನೆ ಅನ್ನೋದು ಕುಮಾರಸ್ವಾಮಿ ಅವರ ಪ್ರಶ್ನೆ.
ನಾನು ನಿನ್ನೆ ಆ ಹೆಣ್ಣುಮಗಳಿಗೆ ಎಲ್ಲಮ್ಮ ತಾಯಿ ‘ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ಯಮ್ಮಾ’ ಅಂತ ಕೇಳಿದೆ. ಅದ್ರಲ್ಲಿ ತಪ್ಪೇನು? ಆ ಹೆಣ್ಣು ಮಗಳು ಮುಖ್ಯಮಂತ್ರಿ ಗಳಿಗೆ ಏಕವಚನ ಬಳಸಿದ್ದಾಳೆ. ಇಡೀ ನಾಡಿನ ಜನರಿಗೆ ಅವಮಾನ ಮಾಡಿದ್ದಾಳೆ. ಕುಮಾರಸ್ವಾಮಿಗೆ ಬೈಯ್ದಿದ್ರೆ ತಲೆ ಕೆಡಿಸಿಕೊಳ್ತಿರ್ಲಿಲ್ಲ ಅಂದ್ರು.

ಯಡಿಯೂರಪ್ಪನವರೇ ನಿಮ್ಮಿಂದ ಹೇಳಿಸಿಕೊಳ್ಳಬೇಕಾ..?
ರಸಗೊಬ್ಬರ ಕೇಳಿದ ರೈತನನ್ನು ಗುಂಡಿಟ್ಟು ಕೊಂದವರು ಯಡಿಯೂರಪ್ಪನವರು. ಯಡಿಯೂರಪ್ಪನವರೇ ನಿಮ್ಮಿಂದ ನಾನು ಹೇಳಿಸಿಕೊಳ್ಳಬೇಕಾ..? ಯಡಿಯೂರಪ್ಪನವರೇ ನಿಮ್ಮಿಂದ ನಾನು ರೈತರ ಉದ್ಧಾರದ ಬಗ್ಗೆ ಪಾಠ ಕಲಿಬೇಕಾ ಅಂತ ಸಿಎಂ ಬಿಎಸ್ ವೈ ಅವರನ್ನು ಪ್ರಶ್ನಿಸಿದ್ದಾರೆ.
ರೈತರಿಗೆ ದೇವೆಗೌಡರ ಕೊಡುಗೆ ಏನು ಅನ್ನುವುದರ ಬಗ್ಗೆ ಯಡಿಯೂರಪ್ಪ, ಬಿಜೆಪಿ ಅವ್ರು ಮಾತಾಡ್ತಾರೆ. ರೈತರ ಸಾಲಮನ್ನಾ ಬಗ್ಗೆ ಗೊಂದಲ ಮೂಡಿಸ್ತಿರೋರು ಯಾರು? ಪ್ರಧಾನಿ ಮೋದಿಯವರು ಬಹಳ ಹಗುರವಾಗಿ ಮಾತಾಡಿದ್ದಾರೆ. ರೈತರಿಗೆ ನೊಟೀಸ್ ನೀಡಿದ್ದು ನಾವಲ್ಲ ಎಂದ ಸಿಎಂ ರೈತರ 45 ಸಾವಿರಕೋಟಿ ಸಾಲಮನ್ನಾಕ್ಕೆ ಎಲ್ಲಾ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದ್ದಾರೆ.

ಮಾಧ್ಯಮದವರಿಗೆ ಹೇಗೆ ಗೊತ್ತಾಯ್ತು..?
ಸುವರ್ಣ ಸೌಧದ ಗೇಟ್ ಬೀಗ ಮುರಿಯುವ ವಿಚಾರ ಪೋಲೀಸರಿಗಿಂತ ಮೊದಲು ಮಾಧ್ಯಮದವರಿಗೆ ಹೇಗೆ ಗೊತ್ತಾಯ್ತು? ನೀವೇ ಏನಾದ್ರೂ ಅವರಿಗೆ ಬೀಗ ಒಡೀರಿ ನಾವು ಪಿಚ್ಚರ್ ತೆಗೀತಿವಿ ಅಂತ ಹೇಳಿದ್ರಾ? ಆ ಹೆಣ್ಣು ಮಗಳು ಬೇರೆ ನಾಲಾಯಕ್ ಮುಖ್ಯಮಂತ್ರಿ ಅಂತ ಹೇಳಿದ್ದಾಳೆ. ಸುವರ್ಣಸೌಧದ ಬೀಗ ಒಡೆದ ಮೇಲೂ ನಾನು ಕ್ರಮ ತೆಗೆದುಕೊಳ್ಳದಿದ್ರೆ ಅವಳು ಹೇಳಿದ್ದಕ್ಕೆ ಅನ್ವರ್ಥಕವಾಗಿ ನಡೆದುಕೊಂಡಂತೆ ಆಗುವುದಿಲ್ವಾ? ಅಂತ ಪ್ರಶ್ನಿಸಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments