Thursday, September 11, 2025
HomeUncategorizedತಲೈವನ ಜೊತೆ ಕೊಡಗಿನ ಕುವರಿ ರಶ್ಮಿಕಾ ಸಿನಿಮಾ ?

ತಲೈವನ ಜೊತೆ ಕೊಡಗಿನ ಕುವರಿ ರಶ್ಮಿಕಾ ಸಿನಿಮಾ ?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅದೃಷ್ಟ ಖುಲಾಯಿಸಿದೆ..‌ಸದ್ಯ ಬ್ಯಾಕ್ ಟು ಬ್ಯಾಕ್ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿರೋ ಕೊಡಗಿನ ಕುವರಿ ಸೂಪರ್ ಸ್ಟಾರ್ ರಜನಿ ಜೊತೆಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕ್ರೇಜ್ ಈಗ ಬಾಲಿವುಡ್‌ನಲ್ಲೂ ಜೋರಾಗಿದೆ. ‘ಪುಷ್ಪ’-2 ಬ್ಲಾಕ್‌ಬಸ್ಟರ್ ಹಿಟ್ ಬಳಿಕ ‘ಛಾವ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೊಂದು ಐತಿಹಾಸಿಕ ಕಥಾಹಂದರದ ಸಿನಿಮಾ. ಸಾಂಬಾಜಿ ಮಹಾರಾಜನ ಮಡದಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ.

ಫೆಬ್ರವರಿ 14ಕ್ಕೆ ‘ಛಾವ’ ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಸಲ್ಮಾನ್ ಖಾನ್ ಜೊತೆ ‘ಸಿಕಂದರ್’ ಚಿತ್ರದಲ್ಲಿ ರಶ್ಮಿಕಾ ಬಣ್ಣ ಹಚ್ಚಿದ್ದಾರೆ. ತೆಲುಗಿನ ‘ದಿ ಗರ್ಲ್‌ ಫ್ರೆಂಡ್’ ಹಾಗೂ ತಮಿಳಿನ ‘ಕುಬೇರ’ ಚಿತ್ರಗಳು ಕೈಯಲ್ಲಿವೆ. ಇನ್ನು ‘ತಮಾ’ ಎಂಬ ಮತ್ತೊಂದು ಹಿಂದಿ ಚಿತ್ರಕ್ಕೂ ಕಿರಿಕ್ ಬೆಡಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಇದೆಲ್ಲದರ ನಡುವೆ ರಜನಿಕಾಂತ್ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿ ಬರ್ತಿವೆ‌‌‌.

ತಮಿಳು ನಿರ್ದೇಶಕ ಅಟ್ಲಿ ಈಗಾಗಲೇ ಬಾಲಿವುಡ್‌ ಪ್ರವೇಶಿಸಿ ಗೆದ್ದಿದ್ದಾರೆ. ಶಾರುಖ್ ಖಾನ್ ನಟನೆಯ ‘ಜವಾನ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿತ್ತು. ಬಳಿಕ ಯಾವುದೇ ಸಿನಿಮಾ ಅಟ್ಲಿ ಕೈಗೆತ್ತಿಕೊಳ್ಳಲಿಲ್ಲ. ಆದರೆ ರಜನಿಕಾಂತ್ ಅವರಿಗೆ ಸಿನಿಮಾ ಮಾಡಲು ಚರ್ಚಿಸುತ್ತಿದ್ದಾರೆ. ಈಗಾಗಲೇ ತಲೈವಾ ಡೇಟ್ ಕೂಡ ಅಟ್ಲಿಗೆ ಸಿಕ್ಕಿದೆ ..‌ಇದೇ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಾರೆ ಅನ್ನೋ ಮಾತುಗಳು ಕಾಲಿವುಡ್‌ನಲ್ಲಿ ಕೇಳಿ ಬರ್ತಿವೆ.

ಇನ್ನು ಈಗ ಚರ್ಚೆ ನಡೆಯುತ್ತಿರೋ ಚಿತ್ರದಲ್ಲಿ ರಜನಿಕಾಂತ್ ಜೊತೆ ಸಲ್ಮಾನ್ ಖಾನ್ ನಟಿಸುತ್ತಾರೆ. ಇನ್ನು ಸಲ್ಲುಗೆ ನಾಯಕಿಯಾಗಿ ರಶ್ಮಿಕಾ ಕಾಣಿಸಿಕೊಳ್ಳುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಭಾರೀ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತದೆ ಎನ್ನುವ ಚರ್ಚೆ ನಡೀತಿದೆ. ಈಗಾಗಲೇ ‘ಸಿಕಂದರ್’ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಬಣ್ಣ ಹಚ್ಚಿದ್ದಾರೆ. ಹಾಗಾಗಿ ಮತ್ತೆ ಆ ಅವಕಾಶ ಸಿಕ್ಕರೂ ಅಚ್ಚರಿಪಡಬೇಕಿಲ್ಲ.

ಸದ್ಯ ಮಲ್ಟಿಸ್ಟಾರರ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಅದರಲ್ಲೂ ಬೇರೆ ಬೇರೆ ಭಾಷೆಯ ಸ್ಟಾರ್‌ ನಟರು ಒಟ್ಟಿಗೆ ನಟಿಸುವುದು ಹೆಚ್ಚಾಗುತ್ತಿದೆ. ಈಗಾಗಲೇ ತೆಲುಗಿನ ‘ಗಾಡ್ ಫಾದರ್’ ಚಿತ್ರದಲ್ಲಿ ಚಿರಂಜೀವಿ ಜೊತೆ ಸಲ್ಮಾನ್ ಖಾನ್ ನಟಿಸಿದ್ದರು. ರಜನಿಕಾಂತ್ ಸಹ ‘ವೆಟ್ಟೆಯಾನ್’ ಚಿತ್ರದಲ್ಲಿ ಬಿಗ್‌ ಬಿ ಜೊತೆ ತೆರೆ ಹಂಚಿಕೊಂಡಿದ್ದರು. ನಿರ್ದೇಶಕ ಅಟ್ಲಿ ಅಂತಾದೊಂದು ಕಥೆ ಸಿದ್ಧಪಡಿಸಿದರೆ ರಜನಿ- ಸಲ್ಲು ಒಟ್ಟಿಗೆ ನಟಿಸಬಹುದು. ಆದರೆ ಇದೆಲ್ಲ ಸದ್ಯಕ್ಕೆ ಅಂತೆಕಂತೆ ಸುದ್ದಿ ಮಾತ್ರ. ಅಧಿಕೃತ ಮಾಹಿತಿ ಇನ್ನಷ್ಟೆ ಸಿಗಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments