Thursday, September 11, 2025
HomeUncategorizedಕುಂಭಮೇಳದ ಫೇಕ್​ ಪೋಟೊ ಶೇರ್​ ಮಾಡಿದ್ದ ಸಂಬರ್ಗಿ ವಿರುದ್ದ ದೂರು ದಾಖಲಿಸಿದ ಪ್ರಕಾಶ್​ ರೈ

ಕುಂಭಮೇಳದ ಫೇಕ್​ ಪೋಟೊ ಶೇರ್​ ಮಾಡಿದ್ದ ಸಂಬರ್ಗಿ ವಿರುದ್ದ ದೂರು ದಾಖಲಿಸಿದ ಪ್ರಕಾಶ್​ ರೈ

ಮೈಸೂರು: ಕುಂಭಮೇಳದಲ್ಲಿ ನಟ ಪ್ರಕಾಶ್ ರೈ ಸ್ನಾನ ಮಾಡುತ್ತಿರುವ ರೀತಿಯ ಫೋಟೊ ಇತ್ತೀಚೆಗೆ ಸಾಕಷ್ಟು ವೈರಲ್​ ಆಗಿತ್ತು. ಇದೀಗ ಇದರ ವಿರುದ್ದ ಪ್ರಕಾಶ್​ ರೈ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದು. ಮೈಸೂರಿನ ಲಕ್ಷ್ಮೀಪುರಂ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಹಿಂದೂಗಳ ಅತಿದೊಡ್ಡ ಧಾರ್ಮಿಕ ಆಚರಣೆಯಾಗಿರುವ ಕುಂಭಮೇಳದಲ್ಲಿ ನಟ ಪ್ರಕಾಶ್​ ರೈ ಸ್ನಾನ ಮಾಡಿದ್ದ ಎಐ ಪೋಟೊವನ್ನು ವೈರಲ್​ ಮಾಡಲಾಗಿತ್ತು. ಇದೀಗ ಈ ಕುರಿತು ಪ್ರಕಾಶ್​ ರೈ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಈ ಕುರಿತು ಪ್ರಕಾಶ ಮಾತನಾಡಿದ್ದು. ‘ ಮೊದಲಿನಿಂದಲೂ ಪ್ರಕಾಶ್ ರೈ ಹಿಂದು ವಿರೋಧಿ ಎಂದು ಸುಳ್ಳು ಸುದ್ದಿಯನ್ಬ ಹಬ್ಬಿಸಿಕೊಂಡು ಬಂದಿದ್ದಾರೆ. ಈಗ ಈ ಪೋಟೊವನ್ನು ಶೇರ್​ ಮಾಡಿರುವ  ಪ್ರಶಾಂತ ಸಂಬರ್ಗಿ ಪ್ರಖ್ಯಾತರೋ ಕುಖ್ಯಾತರೊ ಗೊತ್ತಿಲ್ಲ ನನಗೆ.

ಇದನ್ನೂ ಓದಿ :ಧರ್ಮ ಅಧರ್ಮಗಳ ಸಂಘರ್ಷದಲ್ಲಿ ಧರ್ಮಕ್ಕೆ ಗೆಲುವಾಗುತ್ತದೆ: ಪವಿತ್ರಾ ಗೌಡ

ಇಂತವರಿಗೆ ದೇಶದಲ್ಲಿ ಸುಳ್ಳು ಸುದ್ದಿಗಳನ್ನ ಹಬ್ಬಿಸುವುದು ಅಭ್ಯಾಸವಾಗಿ ಬಿಟ್ಟಿದೆ. ಇದನ್ನ ಯಾರು ಪ್ರಶ್ನೆ ಮಾಡುತ್ತಿಲ್ಲ. ಕೆಲವರು ದ್ವೇಶವನ್ನು ಹರಡುತ್ತಿದ್ದಾರೆ. ಇದು ನಿಜವಾದ ಧರ್ಮವಲ್ಲ. ಜನರ ನಂಬಿಕೆಗೆ ಅಘಾತ ಮಾಡುತ್ತಿದ್ದಾರೆ. ನನ್ನ ವಿರುದ್ಧ ಸಾಕಷ್ಟು ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅವರ ಮೇಲೆ ಕೇಸ್ ಹಾಕಿ ಗೆದ್ದಿದ್ದೇನೆ. ಈಗಾಗಿ ನಾನು ಪ್ರಶಾಂತ ಸಂಬರ್ಗಿ ವಿರುದ್ಧ ದೂರು ನೀಡಿ ಎಫ್​ಐಆರ್ ಮಾಡಿಸಿದ್ದೇನೆ.

ಆ ವ್ಯಕ್ತಿ ಇನ್ನು 15 ದಿನಗಳಲ್ಲಿ ಠಾಣೆಗೆ ಬಂದು ಉತ್ತರ ನೀಡಬೇಕು. ಈ ಕುರಿತು ಸತ್ಯಾಸತ್ಯತೆ ಎಲ್ಲರಿಗೂ ತಿಳಿಯಬೇಕು. ನಕಲಿ ಸುದ್ದಿಗಳು ಸಮಾಜವನ್ನು ಹಾಳು ಮಾಡುತ್ತಿದೆ ಎಂದು ಪ್ರಕಾಶ್​ ರೈ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments