Friday, August 22, 2025
Google search engine
HomeUncategorizedರಾಮ ಮಂದಿರ ವಾರ್ಷಿಕೋತ್ಸವ ಸಂಭ್ರಮ: ಉಳಿ, ಸುತ್ತಿಗೆ ಪ್ರದರ್ಶನಕ್ಕೆ ಇಟ್ಟ ಅರುಣ್​ ಯೋಗಿರಾಜ್​ !

ರಾಮ ಮಂದಿರ ವಾರ್ಷಿಕೋತ್ಸವ ಸಂಭ್ರಮ: ಉಳಿ, ಸುತ್ತಿಗೆ ಪ್ರದರ್ಶನಕ್ಕೆ ಇಟ್ಟ ಅರುಣ್​ ಯೋಗಿರಾಜ್​ !

ಮೈಸೂರು: ಶತಕೋಟಿ ಹಿಂದುಗಳ ಶತಮಾನದ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಆಗಿದೆ. ರಾಮ ಮಂದಿರದಲ್ಲಿ ಪ್ರತಿಸ್ಥಾಪನೆಯಾದ ರಾಮಲಲ್ಲಾ ಮೂರ್ತಿಗೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಯೋಧ್ಯೆ ಸೇರಿ ದೇಶಾದ್ಯಂತ ವಿಶೇಷ ಆಚರಣೆ ಮಾಡಲಾಗುತ್ತಿದೆ. ಮೈಸೂರಿನ ಬ್ರಹ್ಮಶ್ರೀ ಕಶ್ಯಪ ಶಿಲ್ಪ ಕಲಾ ಶಾಲಾದಲ್ಲಿ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಬಳಕೆ‌ ಮಾಡಿದ ವಸ್ತುಗಳ ಪ್ರದರ್ಶನ ಮಾಡಲಾಗ್ತಿದೆ.

ಹೌದು.. ರಾಮಲಲ್ಲಾನ ಮೂರ್ತಿ ಕೆತ್ತನೆಗೆ ಬಳಸಿದ ಚಿನ್ನದ ಉಳಿ, ಬೆಳ್ಳಿ ಸುತ್ತಿಗೆ, ರಾಮಲಲ್ಲಾ ಮೂರ್ತಿ ಸ್ಥಾಪನೆಗೆ ತಯಾರಿಸಲಾದ ಪೀಠ… ಇದೆಲ್ಲವೂ ಇಂದು ಮೈಸೂರಿನ ಬ್ರಹ್ಮಶ್ರೀ ಕಶ್ಯಪ ಶಿಲ್ಪ ಕಲಾ ಶಾಲೆಯಲ್ಲಿ ಪ್ರದರ್ಶನಕ್ಕೆ ಇರಿಸಿದ್ದಾರೆ. ಅಯೋಧ್ಯೆ ಮಂದಿರ ನಿರ್ಮಾಣವಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇವುಗಳನ್ನ ಪ್ರದರ್ಶನ ಮಾಡಲಾಯಿತು. ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಇಂದು ತಮ್ಮ ಕಲಾ ಶಾಲೆಯಲ್ಲಿ ಇವುಗಳನ್ನ ಪ್ರದರ್ಶನ ಮಾಡಿದರು. ಜೊತೆಗೆ ರಾಮಲಲ್ಲಾ ಮೂರ್ತಿ ಕೆತ್ತನೆಯಲ್ಲಿ ಭಾಗವಹಿಸಿದ್ದ ಕಲಾವಿದರ ತಂಡವನ್ನು ಕೂಡ ಪರಿಚಯ ಮಾಡಿಸಿದರು.

ಇದನ್ನೂ ಓದಿ :450 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾದ ‘ಗೇಮ್​ ಚೇಂಜರ್’ ಸಿನಿಮಾ ಕೆಲವೇ ಗಂಟೆಗಳಲ್ಲಿ ಫೈರಸಿ ! 

ರಾಮಲಲ್ಲಾ ಮೂರ್ತಿಯ ನೇತ್ರೋನ ಮಿಲನಕ್ಕೆ ಬಳಸಿದ್ದ ಚಿನ್ನದ ಹುಳಿ, ಬೆಳ್ಳಿ ಸುತ್ತಿಗೆ, ಹಾಗೂ ರಾಮಲಲ್ಲಾ ಇಡಲು ತಯಾರಿಸಿದ್ದ ಪೀಠ, ಹಾಗೂ ವಿವಿಧ ಕಲಾಕೃತಿಗಳ ಪ್ರದರ್ಶನ ಮಾಡಿದ್ದು, ರಾಮಲಲ್ಲಾ ಮೂರ್ತಿ ಕೆತ್ತಿದ ಬಳಿಕ ಸಾಕಷ್ಟು ಹೆಸರು ಬಂದಿದೆ ಅಂತ ಸಂತಸ ಪಟ್ಟರು. ದೇಶ ವಿದೇಶಗಳಲ್ಲಿ ಸಾಕಷ್ಟು ಗುರುತಿಸುತ್ತಿದ್ದಾರೆ, ಹಲವರು ಬಂದು ಭೇಟಿಯಾಗುತ್ತಿದ್ದಾರೆ.‌ ಇದು ಶಿಲ್ಪಿಗೆ ಸಿಕ್ಕ ಬಹುದೊಡ್ಡ ಗೌರವವಾಗಿದ್ದು ಅಯೋಧ್ಯೆ ಟ್ರಸ್ಟ್ ಮುಖ್ಯಸ್ಥರು ಮತ್ತಷ್ಟು ಯೋಜನೆಗಳನ್ನು ರೂಪಿಸಿದ್ದಾರೆ ಎಂದು ಅರುಣ್ ಯೋಗಿರಾಜ್ ಹೇಳಿದರು.

ಒಟ್ಟಾರೆ ಶತಕೋಟಿ ಹಿಂದೂಗಳ ಶತಮಾನದ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ತಲೆ‌ ಎತ್ತಿದೆ. ಅದರ ವಾರ್ಷಿಕ ಆಚರಣೆ ಬಹುತೇಕ ಕಡೆಗಳಲ್ಲಿ ನಡೆಯುತ್ತಿದ್ದು, ಮೈಸೂರಿನಲ್ಲೂ ಶಿಲ್ಪಿ ಅರುಣ್ ಯೋಗಿರಾಜ್ ತಂಡ ಸಂತಸ ಪಟ್ಟಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments