Tuesday, September 9, 2025
HomeUncategorizedಪ್ರಯಾಣಿಕರಿಗೆ ಬಿಗ್​ ಶಾಕ್​: ಬಸ್​ ಟಿಕೆಟ್​​ ದರ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು

ಪ್ರಯಾಣಿಕರಿಗೆ ಬಿಗ್​ ಶಾಕ್​: ಬಸ್​ ಟಿಕೆಟ್​​ ದರ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು

ಬೆಂಗಳೂರು: ಬಸ್​ ಟಿಕೆಟ್ ಪ್ರಯಾಣ​ ದರವನ್ನು ಹೆಚ್ಚಳ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಶೇ.15ರಷ್ಟು ಹೆಚ್ಚಳ ಮಾಡಲು ಒಪ್ಪಿಗೆ ನೀಡಿದೆ. ಸದ್ಯದಲ್ಲೇ ಸರ್ಕಾರದ ಅಧಿಕೃತ ಘೋಷಣೆ ಮಾಡಲಿ ಆದೇಶವೊಂದೆ ಬಾಕಿ ಇದೆ ಎಂದು ತಿಳಿದು ಬಂದಿದೆ.

ಶಕ್ತಿ ಯೋಜನೆಯ ಪರಿಣಾಮವಾಗಿ ರಾಜ್ಯ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟದಲ್ಲಿದ್ದು. ಇವೆಲ್ಲದರ ನಡುವೆ ಇದೀಗ ರಾಜ್ಯ ಸಚಿವ ಸಂಪುಟ ಟಿಕೆಟ್​ ದರ ಹೆಚ್ಚಿಸಲು ಒಪ್ಪಿಗೆ ಸೂಚಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹನಗರ ಸಾರಿಗೆ ಸಂಸ್ಥೆ (BMTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC)ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)ಯಲ್ಲಿ ಹಣದ ಕೊರತೆ ಇದೆ. ಶಕ್ತಿ ಯೋಜನೆಯ ಬಾಕಿ ಹಣ ಬರಬೇಕಿದೆ. ಈ ಸಂಬಂಧ ನಿಗಮದ ಮುಖ್ಯಸ್ಥರು ಕಳೆದ ಆರು ತಿಂಗಳಿನಿಂದ ಟಿಕೆಟ್ ದರ ಏರಿಕೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದರ ಕುರಿತು ಸಚಿವ ಸಂಪುಟ ಚರ್ಚೆ ನಡೆಸಿ ಟಿಕೆಟ್​ ದರವನ್ನು ಹೆಚ್ಚಿಸಲು ಒಪ್ಪಿಗೆ ಸೂಚಿಸಿದೆ. ಇದರಿಂದ ಗಂಡಸರ ಜೇಬಿಗೆ ಕತ್ತರಿ ಬೀಳುವುದು ಖಂಡಿತ ಗ್ಯಾರಂಟಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments