Sunday, August 24, 2025
Google search engine
HomeUncategorizedತೃತೀಯ ಲಿಂಗಿ ಮದುವೆಯಾಗಲು ಮುಂದಾದ ಮಗ: ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ದಂಪತಿ !

ತೃತೀಯ ಲಿಂಗಿ ಮದುವೆಯಾಗಲು ಮುಂದಾದ ಮಗ: ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ದಂಪತಿ !

ತಿರುಪತಿ: ಮಗ ತೃತೀಯ ಲಿಂಗಿಯೊಬ್ಬಳನ್ನು ಪ್ರೀತಿಸಿದ್ದಕ್ಕೆ ಮಧ್ಯವಯಸ್ಕ ದಂಪತಿಯೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂದ್ಯಾಲ್ ಜಿಲ್ಲಾಸ್ಪತ್ರೆಯಲ್ಲಿರುವ ಎಸ್‌ಬಿಐ ಕಾಲೋನಿಯಲ್ಲಿ ಈ ಆಘಾತಕಾರಿ ಬೆಳವಣಿಗೆ ನಡೆದಿದೆ.

ನಂದ್ಯಾಲ್ ಪೊಲೀಸರ ಪ್ರಕಾರ ಮೃತರನ್ನು ಸುಬ್ಬಾ ರಾಯುಡು ಮತ್ತು ಸರಸ್ವತಿ ಎಂದು ಗುರುತಿಸಲಾಗಿದೆ. ಬಿ ಟೆಕ್ ಮುಗಿಸಿ ಆಟೋರಿಕ್ಷಾ ಚಾಲಕನಾಗಿದ್ದ ಇವರ ಒಬ್ಬನೇ ಮಗ ಸುನೀಲ್ ಸುಮಾರು ಮೂರು ವರ್ಷಗಳ ಹಿಂದೆ ಸ್ಮಿತಾ ಎಂಬ ತೃತೀಯಲಿಂಗಿಯನ್ನು ಪ್ರೀತಿಸುತ್ತಿದ್ದ. ತೃತೀಯಲಿಂಗಿಯೊಂದಿಗೆ ತಮ್ಮ ಮಗನ ಸಂಬಂಧದ ಬಗ್ಗೆ ತಿಳಿದ ಪೋಷಕರು ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು ಮತ್ತು ಇತ್ತೀಚೆಗೆ ಅವರು ತಮ್ಮ ಇಷ್ಟದ ಹುಡುಗಿಯೊಂದಿಗೆ ಮದುವೆಯಾಗುವಂತೆ ಮನವೊಲಿಸಲು ಪ್ರಯತ್ನಿಸಿದರು.

ಇದನ್ನೂ ಓದಿ: ಕುಖ್ಯಾತ ಭಯೋತ್ಪಾದಕ ಮಸೂದ್​ ಅಜರ್​ಗೆ ಹೃದಯಾಘಾತ : ಆಸ್ಪತ್ರೆಗೆ ದಾಖಲು !

ಆದರೆ, ಸುನೀಲ್ ತಂದೆ ತಾಯಿಯರ ಪ್ರಸ್ತಾಪವನ್ನು ಸಾರಾಸಗಟಾಗಿ ತಿರಸ್ಕರಿಸಿ ತೃತೀಯ ಲಿಂಗಿಯನ್ನೆ ಮದುವೆಯಾಗುವುದಾಗಿ ಪಟ್ಟು ಹಿಡಿದ್ದಿದ್ದನು. ಪೋಷಕರು ಕೂಡ ಆತನನ್ನು ಸ್ಥಳೀಯ ಪೊಲೀಸ್​ ಠಾಣೆಗೆ ಕರೆದೊಯ್ದು ಬುದ್ದಿಹೇಳಿಸಿದ್ದರು. ಆದರೆ ಇದ್ಯಾವುದಕ್ಕು ಬಗ್ಗದ ಸುನೀಲ್​ ತೃತೀಯ ಲಿಂಗಿಯನ್ನೆ ಮದುವೆಯಾಗುವುದಾಗಿ ಹೇಳಿದ್ದನು.

ಪೊಲೀಸ್​ ಠಾಣೆಯಲ್ಲಿ ಆದ ಈ ಅವಮಾನದಿಂದ ಜೀವನದ ಬಗ್ಗೆ ಹತಾಶರಾಗಿದ್ದ ಪೋಷಕರು ಕಳೆದ ಎರಡು ದಿನಗಳ ಹಿಂದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇವರನ್ನು ನಂದ್ಯಾಲದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ (ಡಿ,25) ಮೃತಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments